ETV Bharat / bharat

ವಿಶಿಷ್ಟ ಮದುವೆ: ಸಮುದ್ರದಾಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ! - Couple gets married under the sea

ವೃತ್ತಿಯಲ್ಲಿ ಇಂಜಿನಿಯರ್​ಗಳಾಗಿರುವ ತಮಿಳುನಾಡಿನ ಜೋಡಿಯೊಂದು ಚೆನ್ನೈನ ಸಮುದ್ರದಾಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Couple gets married under the sea
ಸಮುದ್ರದಾಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
author img

By

Published : Feb 1, 2021, 4:42 PM IST

ಚೆನ್ನೈ (ತಮಿಳುನಾಡು): ಮದುವೆ ಎಂಬುದು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಅನೇಕ ಮಂದಿ ತಮ್ಮ ವಿವಾಹವನ್ನು ವಿಶೇಷವಾಗಿ, ವಿಶೇಷ ಸ್ಥಳಗಳಲ್ಲಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಇಂತಹ ಡೆಸ್ಟಿನೇಶನ್ ವೆಡ್ಡಿಂಗ್​ಗಳು ಅವಿಸ್ಮರಣೀಯ ಅನುಭವಗಳನ್ನು ನೀಡುತ್ತವೆ.

ಸಮುದ್ರದಾಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ತಮಿಳುನಾಡಿನ ಜೋಡಿಯೊಂದು ಚೆನ್ನೈನ ನೀಲಂಕರೈ ಕರಾವಳಿಯೊಳಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್​ಗಳಾಗಿರುವ ಚಿನ್ನದುರೈ ಮತ್ತು ಶ್ವೇತಾ ಸುಮಾರು 60 ಅಡಿಗಳಷ್ಟು ಸಮುದ್ರದಾಳದಲ್ಲಿ ಹೂವಿನ ಹಾರ ಬದಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸುಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಮಗಳು ಜಾನಕಿ' ಖ್ಯಾತಿಯ ಶ್ರೀ ರಾಮ್

ಪಾಂಡಿಚೆರಿಯ ಟೆಂಪಲ್ ಅಡ್ವೆಂಚರ್ಸ್ ತಂಡವು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಈ ವಿವಾಹ ಸಮಾರಂಭವನ್ನು ಆಯೋಜಿಸಿತ್ತು. ಇದಕ್ಕಾಗಿ ಚಿನ್ನದುರೈ ಮತ್ತು ಶ್ವೇತಾಗೆ ಮೂರು ದಿನಗಳ ಕಾಲ ಸ್ಕೂಬಾ ಡೈವಿಂಗ್ ಮತ್ತು ಉಸಿರಾಟ ನಿಯಂತ್ರಣಕ್ಕಾಗಿ ತರಬೇತಿಯನ್ನು ನೀಡಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.