ETV Bharat / bharat

ಪರಸ್ಪರ ಪ್ರೀತಿ ಸಾಬೀತಿಗೆ ನಿರ್ಧಾರ: ವಿಷ ಸೇವನೆ ಮಾಡಿದ ಜೋಡಿ!

author img

By

Published : Jul 9, 2021, 9:27 PM IST

ಪರಸ್ಪರರ ಮೇಲಿನ ಪ್ರೀತಿ ಸಾಬೀತು ಮಾಡುವ ಉದ್ದೇಶದಿಂದ ಜೋಡಿವೊಂದು ವಿಷ ಸೇವನೆ ಮಾಡಿರುವ ಘಟನೆ ನಡೆದಿದೆ.

Couple drinks poison
Couple drinks poison

ಮೋಗಾ(ಪಂಜಾಬ್​): ಕಳೆದ ಐದು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿವೊಂದು ಪರಸ್ಪರರ ಮೇಲಿನ ಪ್ರೀತಿ ತೋರಿಸುವ ಉದ್ದೇಶದಿಂದ ವಿಷ ಕುಡಿದಿದ್ದು, ಪತ್ನಿ ಸಾವಿಗೀಡಾಗಿರುವ ಘಟನೆ ಪಂಜಾಬ್​​ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಐದು ವರ್ಷಗಳ ಹಿಂದೆ ಮನ್​ಪ್ರೀತ್​ ಕೌರ್​ ಹಾಗೂ ಹರ್ಜಿಂದ್ರ ಸಿಂಗ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಇದೀಗ ಪರಸ್ಪರ ತಮ್ಮ ಮೇಲಿನ ಪ್ರೀತಿ ಸಾಬೀತು ಪಡಿಸುವ ಉದ್ದೇಶದಿಂದ ತಂಪು ಪಾನೀಯದಲ್ಲಿ ಇಲಿ ಔಷಧಿ ಸೇರಿಸಿ ಕುಡಿದಿದ್ದಾರೆ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ನೀಡ್ತಿದ್ದ ವೇಳೆ ಪತ್ನಿ ಮನ್​ಪ್ರೀತ್​ ಕೌರ್​ ಸಾವನ್ನಪ್ಪಿದ್ದಾರೆ. ಆದರೆ ಹರ್ಜಿಂದ್ರಗೆ ಚಿಕಿತ್ಸೆ ಮುಂದುವರೆದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಇಲಿ ಔಷಧಿ ಸೇವನೆ ಮಾಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಲಂಕಾ ತಂಡದಲ್ಲಿ ಕೋವಿಡ್​: IND vs SL ಕ್ರಿಕೆಟ್​ ಸರಣಿ ಜು.13ರ ಬದಲು ಜು.17ಕ್ಕೆ ಆರಂಭ?

ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸ್​ ವರಿಷ್ಠಾಧಿಕಾರಿ ರಾಜ್​ ಸಿಂಗ್ ಮಾತನಾಡಿ, ಮನೆಯಲ್ಲಿ ಇಬ್ಬರು ಮೋಜು ಮಾಡ್ತಿದ್ದ ಸಂದರ್ಭದಲ್ಲಿ ತಮ್ಮಿಬ್ಬರ ಪ್ರೀತಿ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ಇಲಿ ಔಷಧಿ ತಂಪ್ಪು ಪಾನಿಯದಲ್ಲಿ ಬೇರಿಸಿ ಸೇವನೆ ಮಾಡಿದ್ದಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.