ಪಲ್ವಂಚ(ತೆಲಂಗಾಣ): ಪೆಟ್ರೋಲ್ ಸುರಿದುಕೊಂಡು ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಯಲ್ಲಿ ದಂಪತಿ ಸೇರಿದಂತೆ ಓರ್ವ ಮಗಳು ದುರ್ಮರಣಕ್ಕೀಡಾಗಿದ್ದಾಳೆ. ತೆಲಂಗಾಣದ ಪಲ್ವಂಚದಲ್ಲಿ ಈ ಘಟನೆ ನಡೆದಿದೆ.
ಪಲ್ವಂಚದಲ್ಲಿ ವಾಸವಾಗಿದ್ದ ನಾಗ ರಾಮಕೃಷ್ಣ ಹಾಗೂ ಶ್ರೀಲಕ್ಷ್ಮೀ ದಂಪತಿಗೆ ಸಾಹಿತ್ಯಾ ಮತ್ತು ಸಾಹಿತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಮಕೃಷ್ಣ ಪಲ್ವಂಚದಲ್ಲಿ ಸೇನಾ ಕೇಂದ್ರ ಇಟ್ಟುಕೊಂಡಿದ್ದರು. ಆದರೆ, ಕಳೆದ ಕೆಲ ದಿನಗಳ ಹಿಂದೆ ಅಂಗಡಿ ಗುತ್ತಿಗೆಗೆ ನೀಡಿ, ಕುಟುಂಬ ಸಮೇತವಾಗಿ ರಾಜಮಹಂದ್ರವರಂಗೆ ತೆರಳಿದ್ದಾರೆ. 20 ದಿನಗಳ ಹಿಂದೆ ಪಲ್ವಂಚಕ್ಕೆ ವಾಪಸ್ ಆಗಿದ್ದ ಕುಟುಂಬ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದೆ. ಘಟನೆಯಲ್ಲಿ ದಂಪತಿ ಹಾಗೂ ಮಗಳು ಸಾಹಿತಿ ಸಾವನ್ನಪ್ಪಿದ್ದು, ಗಾಯಗೊಂಡಿರುವ ಸಾಹಿತ್ಯಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಇದನ್ನೂ ಓದಿ: ಆಂಧ್ರ: ಹೊಸ ವರ್ಷದಂದೇ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಅತ್ಯಾಚಾರ
ಘಟನಾ ಸ್ಥಳದಲ್ಲಿ ಸೊಸೈಡ್ ನೋಟ್ ಸಿಕ್ಕಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.