ಹೈದರಾಬಾದ್: ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ ಆರಂಭಿಕ ಮತ ಎಣಿಕೆ ಪ್ರಕಾರ ಬಿಜೆಪಿ 102, ಎಸ್ಪಿ 67, ಬಿಎಸ್ಪಿ 2 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಗೋವಾದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಸಧ್ಯದ ಮಾಹಿತಿ ಪ್ರಕಾರ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರಂಭಿಕ ಮತ ಎಣಿಕೆ ಮಾಹಿತಿ ಪ್ರಕಾರ ಗೋವಾ, ಉತ್ತರಾಖಂಡ್ ರಾಜ್ಯಗಳಲ್ಲಿ ಕಾಂಗ್ರೆಸ್ 19 ಮತ್ತು ಮಣಿಪುರದಲ್ಲಿ ಬಿಜೆಪಿ 15 ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆ ದಾಖಲಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಲ್ಕಾ ಸಿಂಗ್ ಆರಂಭಿಕ ಮುನ್ನಡೆ ಪಡೆದುಕೊಂಡಿದ್ದು, ಗೋವಾದಲ್ಲಿ ಮನೋಹರ್ ಪರಿಕ್ಕರ್ ಮಗ ಮುನ್ನಡೆಯಲ್ಲಿದ್ದಾರೆ.
ಮತ ಎಣಿಕೆಗೂ ಮುನ್ನವೇ ಪಂಜಾಬ್ನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಲಾಗುತ್ತಿದ್ದು, ಪಂಜಾಬ್‌ನ AAP ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಸಿಹಿ ತಯಾರಿ ಮಾಡಲಾಗ್ತಿದೆ. ಇನ್ನು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಗುರುದ್ವಾರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಉತ್ತರ ಪ್ರದೇಶದಲ್ಲಿ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60 ಹಾಗೂ ಗೋವಾದ 40 ಸ್ಥಾನಗಳಲ್ಲಿ ಮತದಾನವಾಗಿದ್ದು, ಇಂದು ಎಲ್ಲ ರಾಜ್ಯಗಳ ಫಲಿತಾಂಶ ಬಹಿರಂಗಗೊಳ್ಳಲಿದೆ.
ಗೋವಾದಲ್ಲಿ ಪ್ರಮೋದ್ ಸಾವಂತ್ ಪೂಜೆ
-
#GoaElections2022 | Goa CM Pramod Sawant offers prayers at Sri Datta Temple as the countdown begins for the results of the Goa Assembly polls pic.twitter.com/IW47rDjMbf
— ANI (@ANI) March 10, 2022 " class="align-text-top noRightClick twitterSection" data="
">#GoaElections2022 | Goa CM Pramod Sawant offers prayers at Sri Datta Temple as the countdown begins for the results of the Goa Assembly polls pic.twitter.com/IW47rDjMbf
— ANI (@ANI) March 10, 2022#GoaElections2022 | Goa CM Pramod Sawant offers prayers at Sri Datta Temple as the countdown begins for the results of the Goa Assembly polls pic.twitter.com/IW47rDjMbf
— ANI (@ANI) March 10, 2022