ಮೊರೆನಾ (ಮಧ್ಯ ಪ್ರದೇಶ): ವಿಷಕಾರಿ ಮದ್ಯ ಸೇವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟ ಹಿನ್ನೆಲೆ, ಸ್ಥಳೀಯಾಡಳಿತವು ಅಕ್ರಮ ಮದ್ಯಪಾನವನ್ನು ಹತ್ತಿಕ್ಕುವಲ್ಲಿ ಸಕ್ರಿಯವಾಗಿದೆ.
ಜಿಲ್ಲಾ ಅಬಕಾರಿ ಇಲಾಖೆ ಮತ್ತು ಮಧ್ಯಪ್ರದೇಶ ಪೊಲೀಸರು ದಾಳಿ ನಡೆಸಿ, 318 ಕಂಟ್ರಿ ಮದ್ಯ ಬಾಟಲಿಗಳು ಮತ್ತು 997 ಗೋವಾ ವಿಸ್ಕಿ ಲೇಬಲ್ ಹೊಂದಿದ ಬಾಟಲಿಗಳ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 1,45,000 ರೂ. ಮೌಲ್ಯದ 236.7 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ 180 ಮಿಲಿ ಲೀಟರ್ನ ಖಾಲಿ ಬಾಟಲಿಗಳು, 605 ದೊಡ್ಡ ಖಾಲಿ ಬಾಟಲಿಗಳು ಮತ್ತು 66 ಗೋವಾ ವಿಸ್ಕಿ ಸ್ಟಿಕ್ಕರ್‌ಗಳು ಪತ್ತೆಯಾಗಿವೆ.
ವಶಪಡಿಸಿಕೊಂಡ ಮದ್ಯ ಪರವಾನಗಿ ಪಡೆದ ಡಿಸ್ಟಿಲರಿಯಿಂದ ಉತ್ಪಾದನೆಗೊಂಡಿಲ್ಲ ಎಂದು ತಿಳಿದು ಬಂದಿದ್ದು, ಮದ್ಯದ ಮಾದರಿಗಳನ್ನು ರಾಸಾಯನಿಕ ಪರೀಕ್ಷೆಗಾಗಿ ಗ್ವಾಲಿಯರ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.