ETV Bharat / bharat

ಇಂದು ವಿತ್ತ ಸಚಿವರಿಂದ GST ಮಂಡಳಿ ಸಭೆ: ಜಿಎಸ್​​ಟಿ ವ್ಯಾಪ್ತಿಗೆ ಬರುತ್ತಾ ಪೆಟ್ರೋಲ್​, ಡೀಸೆಲ್​?

ಇಂದಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 45ನೇ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತರುವ ಚರ್ಚೆಯೇ ಕೇಂದ್ರ ಬಿಂದುವಾಗಿದೆ ಎಂದು ಮೂಲಗಳು ತಿಳಿಸಿವೆ.

bring diesel, petrol under GST
bring diesel, petrol under GST
author img

By

Published : Sep 17, 2021, 8:54 AM IST

ನವದೆಹಲಿ: ಇಂದು ಉತ್ತರಪ್ರದೇಶದ ಲಖನೌನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 45ನೇ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭೆಯಲ್ಲಿ ಜಿಎಸ್‌ಟಿ ಮಂಡಳಿಯು ಹಲವಾರು ಪ್ರಮುಖ ವಿಚಾರಗಳನ್ನು ಚರ್ಚಿಸಲಿದ್ದು, ಇದರಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತರುವ ಚರ್ಚೆಯೇ ಕೇಂದ್ರಬಿಂದುವಾಗಿದೆ ಎಂದು ಮೂಲಗಳು ತಿಳಿಸಿವೆ.

ಸತತವಾಗಿ ಪೆಟ್ರೋಲ್ ​ - ಡೀಸೆಲ್​​ ಬೆಲೆ ಹೆಚ್ಚಳವಾಗುತ್ತಲೇ ಇದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಒಂದೇ ರಾಷ್ಟ್ರೀಯ ದರದ ಅಡಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಈ ಸಂಬಂಧ ಇಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವವರಿಗೆ ಕಹಿ ಸುದ್ದಿ ; ಶೀಘ್ರದಲ್ಲೇ ಈ ಸೇವೆಯೂ ಜಿಎಸ್‌ಟಿ ವ್ಯಾಪ್ತಿಗೆ!

ತೆರಿಗೆ ತಜ್ಞರು ಏನಂತಾರೆ?

ಆದರೆ ತೆರಿಗೆ ತಜ್ಞರು, ಕೋವಿಡ್ -19 ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಸ್ತುತ ಪರಿಸ್ಥಿತಿ ನೋಡಿದರೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿ ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಹಳ ಕಷ್ಟಕರವಾದ ಸಂಗತಿಯಾಗಿದೆ ಎಂದು ಹೇಳುತ್ತಾರೆ.

ಅನೇಕ ರಾಜ್ಯಗಳಿಗೆ ಇದೇ ಪ್ರಮುಖ ಆದಾಯದ ಮೂಲವಾಗಿರುವುದರಿಂದ ಈ ಪ್ರಸ್ತಾವನೆಯನ್ನು ಅನೇಕ ರಾಜ್ಯಗಳು ಒಪ್ಪಿಕೊಳ್ಳದಿರುವ ಸಾಧ್ಯತೆಯಿದೆ. ಅಲ್ಲದೇ ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳು ಈ ಆದಾಯವನ್ನು ಕೇಂದ್ರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

20 ತಿಂಗಳ ಬಳಿಕ ಜಿಎಸ್‌ಟಿ ಕೌನ್ಸಿಲ್ ಇದೇ ಮೊದಲ ಬಾರಿಗೆ ಭೌತಿಕ ಸಭೆ ನಡೆಸುತ್ತಿದೆ. 2019, ಡಿಸೆಂಬರ್ 18ರ ಬಳಿಕ ಎಲ್ಲಾ ಸಭೆಗಳನ್ನು ಮಂಡಳಿಯು ವರ್ಚುಯಲ್ ಆಗಿ ನಡೆಸಿತ್ತು. ಕೊನೆಯದಾಗಿ ಜೂನ್ 12 ರಂದು ಸಭೆ ನಡೆದಿದ್ದು, ಇಲ್ಲಿ ಚರ್ಚಿಸಿದಂತೆ ವಿವಿಧ ಕೋವಿಡ್ -19 ಔಷಧಗಳು ಮತ್ತು ಅಗತ್ಯ ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಸೆಪ್ಟೆಂಬರ್ 30 ರವರೆಗೆ ಕಡಿಮೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.