ETV Bharat / bharat

ಏಪ್ರಿಲ್ 1 ರಿಂದ ಗೃಹೋಪಯೋಗಿ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಇಷ್ಟು ಕಡಿತ

ಏಪ್ರಿಲ್ 1 ರಿಂದ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಲಿದೆ ಎಂದು ಐಒಸಿಎಲ್ ತಿಳಿಸಿದೆ.

Cost of Domestic LPG cylinder to reduce
ಎಲ್​ಪಿಜಿ ಸಿಲಿಂಡರ್ ದರದಲ್ಲಿ 10 ರೂ ಕಡಿತ
author img

By

Published : Mar 31, 2021, 9:17 PM IST

ನವದೆಹಲಿ: ಗೃಹೋಪಯೋಗಿ ಎಲ್​ಪಿಜಿ ಸಿಲಿಂಡರ್​ ದರದಲ್ಲಿ 10 ರೂ. ಇಳಿಸಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರ ಜಾರಿಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಪ್ರಕಟಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನವೆಂಬರ್ 2020 ರಿಂದ ನಿರಂತರವಾಗಿ ಏರಿಕೆಯಾಗುತ್ತಿವೆ. ಭಾರತವು ಹೆಚ್ಚಾಗಿ ಕಚ್ಚಾ ತೈಲದ ಆಮದಿನ ಮೇಲೆ ಅವಲಂಬಿತವಾಗಿದೆ. ಬೆಲೆಗಳು ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ, ಅಂತಾರಾಷ್ಟ್ರೀಯ ಬೆಲೆಗಳ ಹೆಚ್ಚಳದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆ ಹೆಚ್ಚಾಗಿವೆ ಎಂದು ಐಒಸಿಎಲ್ ತಿಳಿಸಿದೆ.

ಇದನ್ನೂ ಓದಿ: PAN-Aadhaar ಲಿಂಕ್​​​​ಗೆ ನೀಡಲಾಗಿದ್ದ ದಿನಾಂಕ ವಿಸ್ತರಣೆ: ಇಲ್ಲಿಯವರೆಗೆ ಕಾಲಾವಕಾಶ..

ಈ ನಡುವೆ, ಯುರೋಪ್ ಮತ್ತು ಏಷ್ಯಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಕೋವಿಡ್​ ಲಸಿಕೆಯ ಅಡ್ಡಪರಿಣಾಮಗಳ ಆತಂಕಗಳಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನದ ಬೆಲೆಗಳು 2021 ಮಾರ್ಚ್ ತಿಂಗಳಾರ್ಧದಿಂದ ಕೊಂಚ ಕಡಿಮೆಯಾಗಿದೆ ಎಂದು ಐಒಸಿಎಲ್ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.