ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಈಗಾಗಲೇ ಕೋಟ್ಯಂತರ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ಹಾಕಲಾಗಿದೆ. ಇದರ ಬೆನ್ನಲ್ಲೇ ವ್ಯಾಕ್ಸಿನ್ ಪಡೆದುಕೊಂಡು ಅಲ್ಲೊಂದು - ಇಲ್ಲೊಂದು ಸಾವು ಸಂಭವಿಸಿವೆ ಎಂದು ಹೇಳುವ ಅನೇಕ ಸುದ್ದಿಗಳು ಈಗಾಗಲೇ ಬಿತ್ತರಗೊಂಡಿವೆ.
ಅಂತಹ ಮತ್ತೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಪುಷ್ಟಿ ನೀಡುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಗ್ರಾಮದ ಯುವಕನೊಬ್ಬ ಮಂಗಳಗಿರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ತಿಂಗಳ 21ರಂದು ಪಾಲಕೋಲ್ನಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡ ಬಳಿಕ ಈತ ಅನಾರೋಗ್ಯಕ್ಕೀಡಾಗಿದ್ದನು ಎನ್ನಲಾಗಿದೆ.
ಇದಾದ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆತನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟು ಇಂದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಲವರ್ ಭೇಟಿ ಮಾಡಲು ಹೋಗಿದ್ದವನ ತಲೆ ಬೋಳಿಸಿ, ಮೆರವಣಿಗೆ ಮಾಡಿದ ಜನ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತ ಯುವಕನ ಪೋಷಕರು, ಲಸಿಕೆ ಪಡೆದುಕೊಳ್ಳುವುದಕ್ಕೂ ಮೊದಲು ತಮ್ಮ ಮಗ ಚೆನ್ನಾಗಿದ್ದನು. ಆದರೆ, ವ್ಯಾಕ್ಸಿನ್ ಪಡೆದುಕೊಂಡ ಬಳಿಕ ಆತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳಗಿರಿ ಆಸ್ಪತ್ರೆ ವೈದ್ಯರು, ಯುವಕನ ಮೆದುಳಿನ ನರಗಳಲ್ಲಿ ಆಗಿರುವ ವ್ಯತ್ಯಯದ ಕಾರಣದಿಂದಾಗಿ ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ.