ಶಿರಡಿ( ಮಹಾರಾಷ್ಟ್ರ) : ಶಿರಡಿ-ಕಲ್ಕಾ ಸಾಯಿನಗರ ಎಕ್ಸ್ಪ್ರೆಸ್ನಲ್ಲಿ ಕೊರೊನಾ ಪಾಸಿಟಿವ್ ಮೃತದೇಹ ಪತ್ತೆಯಾಗಿದ್ದು, ಶುಕ್ರವಾರ ರಾತ್ರಿ ಸಾಯಿನಗರ ಶಿರಡಿ ರೈಲು ನಿಲ್ದಾಣದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ಹಿಮಾಚಲ ಪ್ರದೇಶದ ನಿವಾಸಿಯಾಗಿದ್ದು, ಹೆಸರು ಮಹೇಂದ್ರ ಸಿಂಗ್ ಬಂಬು ಎಂದು ಪ್ರಾಥಮಿಕ ಮಾಹಿತಿಯಿಂದ ಬಹಿರಂಗವಾಗಿದೆ.
ಶಿರಡಿಗೆ ಬರುತ್ತಿದ್ದ ರೈಲಿನಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಕೊರೊನಾ ಪಾಸಿಟಿವ್ ಮೃತದೇಹ ಪತ್ತೆಯಾಗಿದೆ. ಘಟನೆಯ ಬಗ್ಗೆ ಶಿರಸಿ ಗ್ರಾಮೀಣ ಆಸ್ಪತ್ರೆಯ ವೈದ್ಯಾಧಿಕಾರಿಗೆ ಮಾಹಿತಿ ನೀಡಿದ ನಂತರ ಅವರು ಶವವನ್ನು ಪರೀಕ್ಷಿಸಿ ಶಿರಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿರಡಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲಾರಿ ಡಿಕ್ಕಿ ಹೊಡೆದು ಮೂರು ಎತ್ತುಗಳು ಸಾವು.. ಒಂದು ಎತ್ತಿನ ಸ್ಥಿತಿ ಗಂಭೀರ