ಜೋಧ್ಪುರ (ರಾಜಸ್ಥಾನ): ಕೋವಿಡ್ ಸೋಂಕು ತಗುಲಿ ರಾಜಸ್ಥಾನದ ಜೋಧ್ಪುರದ ಮಹಾತ್ಮ ಗಾಂಧಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಾಧಿ ಅಸಾರಾಂ ಬಾಪೂರನ್ನು ಇದೀಗ ಜೋಧ್ಪುರ ಏಮ್ಸ್ಗೆ ಶಿಫ್ಟ್ ಮಾಡಲಾಗಿದೆ.
84 ವರ್ಷದ ಅಸಾರಾಂ ಅವರಿಗೆ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ ಎಂದು ಅವರ ಬೆಂಬಲಿಗರು ಆಗ್ರಹಿಸಿದ ಹಿನ್ನೆಲೆ ಅಸಾರಾಂ ಬಾಪೂರನ್ನು ಏಮ್ಸ್ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಅತ್ಯಾಚಾರ ಕೇಸ್ನಲ್ಲಿ ಜೈಲು ಪಾಲಾದ ಅಸಾರಾಂ ಬಾಪೂಗೆ ಕೊರೊನಾ: ಐಸಿಯುನಲ್ಲಿ ಚಿಕಿತ್ಸೆ!
ಸ್ವಯಂಘೋಷಿತ ದೇವಮಾನವ ಮತ್ತು 2013ರಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಎದೆನೋವು, ಉಸಿರಾಟದ ತೊಂದರೆ ಎದುರಿಸುತ್ತಿದ್ದ ಅವರನ್ನು ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು.