ನವದೆಹಲಿ (ಭಾರತ): ಭೀಕರ ಅಪಘಾತ ಒಳಗಾಗಿದ್ದ ಶಾಲಿಮಾರ್ - ಕೋರ್ಮಂಡಲ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಪುನರ್ ಸ್ಥಾಪನೆಗೊಳಿಸಲು ನಿರ್ಧರಿಸಲಾಗಿದೆ. ಭೀಕರ ರೈಲು ಅಪಘಾತದ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್ ತನ್ನ ಸೇವೆ ಇಂದಿನಿಂದ ಪುನಾರಂಭವಾಗಲಿದೆ. ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಈ ವಿಷಯವನ್ನು ತಿಳಿಸಿದ್ದಾರೆ.
-
#WATCH बालासोर: बालासोर दुर्घटना के बाद बहानागा रेलवे स्टेशन पर ट्रेन सामान्य रूप से चल रही है। pic.twitter.com/uDot9smeRy
— ANI_HindiNews (@AHindinews) June 7, 2023 " class="align-text-top noRightClick twitterSection" data="
">#WATCH बालासोर: बालासोर दुर्घटना के बाद बहानागा रेलवे स्टेशन पर ट्रेन सामान्य रूप से चल रही है। pic.twitter.com/uDot9smeRy
— ANI_HindiNews (@AHindinews) June 7, 2023#WATCH बालासोर: बालासोर दुर्घटना के बाद बहानागा रेलवे स्टेशन पर ट्रेन सामान्य रूप से चल रही है। pic.twitter.com/uDot9smeRy
— ANI_HindiNews (@AHindinews) June 7, 2023
ಜೂನ್ 2 ರಂದು ಬಾಲಸೋರ್‌ನ ಬಹನಾಗಾ ರೈಲು ನಿಲ್ದಾಣದ ಬಳಿ ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಹಳಿತಪ್ಪಿದ ಬೋಗಿಗಳು ಪಕ್ಕದ ಟ್ರಾಕ್ಗೆ ಬಿದ್ದಿದ್ದವು. ಆಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ಸಹ ಹಳಿ ತಪ್ಪಿ, ಭೀಕರ ದುರ್ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸುಮಾರು 275 ಪ್ರಯಾಣಿಕರು ಮೃತಪಟ್ಟು, 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಲ್ಲಿ 700ಕ್ಕೂ ಹೆಚ್ಚು ಮಂದಿ ತುರ್ತು ಚಿಕಿತ್ಸೆ ಪಡೆದು ತಮ್ಮ ತಮ್ಮ ಮನೆಗಳಿಗೆ ಮರಳಿದ್ದರು.
ಇದನ್ನು ಓದಿ: ಅಪಘಾತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಶನ್ ನೆರವು: 10 ಅಂಶಗಳ ಯೋಜನೆ ಜಾರಿ
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ‘ವಿದ್ಯುನ್ಮಾನ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರು. ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಎನ್ನುವುದು ಸಿಗ್ನಲ್ ಉಪಕರಣದ ಒಂದು ವ್ಯವಸ್ಥೆಯಾಗಿದ್ದು, ಅದು ಹಳಿಗಳ ಜೋಡಣೆಯ ಮೂಲಕ ರೈಲುಗಳ ನಡುವೆ ಸಂಭವಿಸಬಹುದಾದ ಚಲನೆ ತಡೆಯುತ್ತದೆ. ಅಸಮರ್ಪಕ ಅನುಕ್ರಮದಲ್ಲಿ ಸಂಕೇತಗಳನ್ನು ನೀಡುವುದನ್ನು ತಪ್ಪಿಸಲು ಇದು ಮೂಲಭೂತ ಸುರಕ್ಷತಾ ಕ್ರಮವಾಗಿದೆ.
ದುರ್ಘಟನೆ ನಡೆದ ಸ್ಥಳದಲ್ಲಿ ಸೋಮವಾರವೇ ರೈಲುಗಳ ಓಡಾಟ ಶುರುವಾಗಿದೆ. ಘಟನೆ ನಡೆದ 51 ಗಂಟೆಗಳಲ್ಲೇ ಹದಗೆಟ್ಟ ರೈಲು ಹಳಿಗಳನ್ನ ಸರಿ ಪಡಿಸಿ ಪ್ಯಾಸೆಂಜರ್ ರೈಲು ಸೇವೆಗಳನ್ನು ಪುನಾರಂಭಿಸಲಾಗಿತ್ತು. ಅದಾದ ಬಳಿಕ ಹೌರಾ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಬಾಲಸೋರ್‌ನಲ್ಲಿ ಪುನಃಸ್ಥಾಪಿಸಲಾದ ರೈಲ್ವೆ ಹಳಿಗಳ ಮೇಲೆ ಸಂಚರಿಸಿತ್ತು.
ಅಪಘಾತ ನಡೆದ ದಿನದಿಂದ ರೈಲು ಹಳಿ ದುರಸ್ತಿ ಆಗುವವರೆಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳದಲ್ಲೇ ಬೀಡುಬಿಟ್ಟು, ಎಲ್ಲ ವ್ಯವಸ್ಥೆಗಳನ್ನು ಸರಿ ಪಡಿಸಿ, ಮೊದಲ ರೈಲು ಹಳಿ ಮೇಲೆ ಸಂಚಾರ ಪುನಾರಂಬಿಸಿದಾಗ ಕೈಮುಗಿದು, ಸಂಚಾರ ಸುಗಮಗೊಳಿಸುವ ಮೂಲಕ ಸಚಿವರು ಕೆಲಸ ಮಾಡಿ, ಎಲ್ಲರಿಗೂ ಮಾದರಿಯಾಗಿದ್ದರು.
ಈ ಭೀಕರ ರೈಲು ದುರಂತದಲ್ಲಿ ಸುಮಾರು 275 ಪ್ರಯಾಣಿಕರು ಅಸು ನೀಗಿದ್ದರು. 1100ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.
ಇದನ್ನು ಓದಿ:ರಾಜಸ್ಥಾನದ ಬಿಕಾನೇರ್‌ನಲ್ಲಿ ಮತ್ತೆ 4.3 ತೀವ್ರತೆಯ ಭೂಕಂಪ