ETV Bharat / bharat

ನಿಲ್ಲದ ಉಗ್ರರ ಅಟ್ಟಹಾಸ : ಭಯೋತ್ಪಾದಕರ ದಾಳಿಗೆ ಹಿರಿಯ ಪೊಲೀಸ್ ಪೇದೆ​ ಹುತಾತ್ಮ - ಅನಂತನಾಗ್​ನಲ್ಲಿ ಉಗ್ರರ ಅಟ್ಟಹಾಸ

Cop shot dead by gunmen : ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಹೆಡ್ ಕಾನ್ಸ್​ಟೇಬಲ್‌ವೊಬ್ಬರು ಹುತಾತ್ಮರಾಗಿದ್ದಾರೆ..

Cop shot dead by gunmen
Cop shot dead by gunmen
author img

By

Published : Jan 29, 2022, 7:40 PM IST

ಅನಂತನಾಗ್​(ಜಮ್ಮು-ಕಾಶ್ಮೀರ) : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಅನಂತನಾಗ್​ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಓರ್ವ ಹಿರಿಯ ಪೊಲೀಸ್ ಕಾನ್ಸ್​ಟೇಬಲ್​ ಹುತಾತ್ಮರಾಗಿದ್ದಾರೆ.

ಅನಂತನಾಗ್​ನ ಹಸನ್​ಪೋರಾದಲ್ಲಿ ಬಂದೂಕುದಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಹೆಡ್​ ಕಾನ್ಸ್​​ಟೇಬಲ್​​ ಅಲಿ ಮೊಹಮ್ಮದ್​ ಗನಿ ಪ್ರಾಣ ಕಳೆದುಕೊಂಡಿದ್ದಾರೆ. ಅಲಿ ಮೊಹಮ್ಮದ್​ ಗನಿ ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಅವರನ್ನ ಆಸ್ಪತ್ರೆಗೆ ದಾಖಲಿಸಲು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಈಗಾಗಲೇ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ.

ಇದನ್ನೂ ಓದಿರಿ: 'ಬೀಟಿಂಗ್​ ದಿ ರಿಟ್ರೀಟ್' ವೇಳೆ ಹೊಸ ದಾಖಲೆ.. ಆಗಸದಲ್ಲಿ ಸಾವಿರ ಡ್ರೋನ್​ಗಳ ಚಿತ್ತಾರ!

ಕಳೆದ ಮೂರು ವಾರಗಳ ಹಿಂದೆ ಇದೇ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ್ದ ಎನ್​ಕೌಂಟರ್​​ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಶ್ರೀನಗರದ ಮಹಾರಾಜಾ ಬಜಾರ್​​ನಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈ ವೇಳೆ ಯಾವುದೇ ರೀತಿಯ ಸಾವು-ನೋವು ಸಂಭವಿಸಿರಲಿಲ್ಲ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.