ETV Bharat / bharat

ಬಿಜೆಪಿ ಮುಖಂಡನ ನಿವಾಸದ ಮೇಲೆ ಉಗ್ರರ ದಾಳಿ: ಕಾನ್​ಸ್ಟೇಬಲ್ ಹುತಾತ್ಮ - ಬಿಜೆಪಿ ಮುಖಂಡನ ನಿವಾಸದ ಮೇಲೆ ಉಗ್ರರ ದಾಳಿ

ಬಿಜೆಪಿ ಮುಖಂಡನ ನಿವಾಸದ ಬಳಿ ಬಂದ ಬುರ್ಖಾ ಧರಿಸಿದ್ದ ಉಗ್ರರು ಮಹಿಳೆಯ ಧ್ವನಿಯಲ್ಲಿ ಬಾಗಿಲು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಕಾನ್​ಸ್ಟೇಬಲ್ ಬಾಗಿಲು ತೆರೆದಾಗ ಮತ್ತಿಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

cop-killed-terrorist-in-attack-on-bjp-leaders-house-in-srinagar
ಬಿಜೆಪಿ ಮುಖಂಡನ ನಿವಾಸದ ಮೇಲೆ ಉಗ್ರರ ದಾಳಿ
author img

By

Published : Apr 2, 2021, 4:18 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಅನ್ವರ್ ಖಾನ್ ನಿವಾಸದ ಮೇಲೆ ಉಗ್ರರ ದಾಳಿ ನಡೆದಿದ್ದು, ಕಾನ್​ಸ್ಟೇಬಲ್​ ಒಬ್ಬರು ಹುತಾತ್ಮರಾಗಿದ್ದಾರೆ. ನಿಷೇಧಿತ ಭಯೋತ್ಪಾದಕ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಭಯೋತ್ಪಾದಕರು ಕೃತ್ಯವೆಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನೌಗಮ್ ಶ್ರೀನಗರದ ಆರಿಬಾಗ್ ಪ್ರದೇಶದಲ್ಲಿ ಭಯೋತ್ಪಾದನಾ ದಾಳಿ ನಡೆದ ಬಗ್ಗೆ ಶ್ರೀನಗರ ಪೊಲೀಸರಿಗೆ ಮಾಹಿತಿ ಬಂದಿದೆ. ಹಿರಿಯ ಪೊಲೀಸರು ಮತ್ತು ಸಿಎಪಿಎಫ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ಪರಿಶೀಲಿಸಿದ್ದಾರೆ. ನಾಲ್ವರು ಭಯೋತ್ಪಾದಕರ ಗುಂಪು ದಾಳಿ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿವಾಸದ ಬಳಿ ಬಂದ ಬುರ್ಖಾ ಧರಿಸಿದ್ದ ಉಗ್ರರು ಮಹಿಳೆಯ ಧ್ವನಿಯಲ್ಲಿ ಬಾಗಿಲು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಕಾನ್​ಸ್ಟೇಬಲ್ ಬಾಗಿಲು ತೆರೆದಾಗ ಮತ್ತಿಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಕಾನ್​ಸ್ಟೇಬಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ನಿಷೇಧಿತ ಭಯೋತ್ಪಾದಕ ಎಲ್‌ಇಟಿ ಭಯೋತ್ಪಾದಕರು ದಾಳಿಯಲ್ಲಿ ಭಾಗಿಯಾಗಿದ್ದು,ಇವರಲ್ಲಿ ಇಬ್ಬರು ಸ್ಥಳೀಯರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಬಾಲಿವುಡ್​​ ನಟಿ ಆಲಿಯಾ ಭಟ್​ಗೆ ಕೊರೊನಾ ದೃಢ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.