ETV Bharat / bharat

ಲಗ್ನಪತ್ರಿಕೆಯಲ್ಲಿ ಹೆಸರು ಹಾಕದ್ದಕ್ಕೆ ಜಗಳ: ನಾಲ್ವರಿಗೆ ಕತ್ತಿಯೇಟು

ಲಗ್ನಪತ್ರಿಕೆಯಲ್ಲಿ ಹೆಸರು ಹಾಕಲಿಲ್ಲ ಎಂಬ ವಿಚಾರಕ್ಕೆ ತಗಾದೆ ತೆಗೆದ ವ್ಯಕ್ತಿಯೋರ್ವ ತನ್ನ ಸಂಬಂಧಿಗಳ ಮೇಲೆ ತನ್ನ ಸಹೋದರನ ಜೊತೆ ಸೇರಿ ಕತ್ತಿಯಿಂದ ದಾಳಿ ನಡೆಸಿದ ಘಟನೆ ಸಿಕಂದ್ರಾಬಾದ್​ನ ಚಂದ್ರಶೇಖರ್​ ನಗರದಲ್ಲಿ ನಡೆದಿದೆ.

fight
ಜಗಳ
author img

By

Published : Jun 22, 2021, 1:46 PM IST

Updated : Jun 22, 2021, 2:06 PM IST

ಸಿಕಂದ್ರಾಬಾದ್​(ತೆಲಂಗಾಣ): ಲಗ್ನಪತ್ರಿಕೆಯಲ್ಲಿ ಹೆಸರು ಹಾಕುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿ ಕತ್ತಿಯಲ್ಲಿ ಹೊಡೆದಾಡುವವರೆಗೆ ನಡೆದಿದೆ. ಈ ಘಟನೆ ಹೈದರಾಬಾದ್​ನ ಸಿಕಂದ್ರಾಬಾದ್ ತುಕಾರಾಂಗೇಟ್​ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯ ಚಂದ್ರಶೇಖರ್​ ನಗರದಲ್ಲಿ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ, ಚಂದ್ರನಗರ ನಿವಾಸಿ ಸುರೇಶ್ ಎಂಬ ಯುವಕನ ವಿವಾಹ ನಡೆದಿದೆ. ಆದ್ರೆ ಲಗ್ನಪತ್ರಿಕೆಯಲ್ಲಿ ತನ್ನ ಹೆಸರು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿ ಸರ್ವೇಶ್​ ಎಂಬಾತ ಮದುವೆಯ ದಿನವೇ ತಗಾದೆ ತೆಗೆದಿದ್ದ. ಮದುಮಗನ ಸಂಬಂಧಿಗಳೊಂದಿಗೆ ಮಾತಿಗಿಳಿದ ಸರ್ವೇಶ್​ ಗಲಾಟೆ ಮಾಡಿದ್ದಾರೆ. ಆದ್ರೆ ಮದುವೆಗೆ ತೊಂದರೆಯಾಗುವುದು ಬೇಡವೆಂದು ಉಳಿದ ಕೆಲ ಸಂಬಂಧಿಕರು ಆತನನ್ನು ತಡೆದು ಮರುದಿನ ಮಾತುಕತೆ ನಡೆಸುವುದಾಗಿ ಸಮಾಧಾನಿಸಿದ್ದಾರೆ.

ಮಾರನೇ ದಿನ ಕುಟುಂಬಸ್ಥರು ಸರ್ವೇಶ್​ ಮನೆಗೆ ತೆರಳಿದ್ದಾರೆ. ಆದ್ರೆ ಅಲ್ಲಿ ಸರ್ವೇಶ್ ಸಹೋದರ ಶೇಖರ್​ ಸಂಬಂಧಿಗಳ ಮೇಲೆ ಕ್ರೋಧಗೊಂಡಿದ್ದಾನೆ. ಆವೇಶದಿಂದ ಸರ್ವೇಶ್ ಹಾಗೂ ಶೇಖರ್​ ತಮ್ಮ ಮೇಲೆ ಕತ್ತಿಗಳಿಂದ ದಾಳಿ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ಘಟನೆಯಲ್ಲಿ ನಾಲ್ವರಿಗೆ ಕತ್ತಿಯೇಟು ಬಿದ್ದಿದೆ.

ಘಟನೆಯಲ್ಲಿ ಆಗಿರುವ ಗಾಯಗಳೊಂದಿಗೆ ಅವರು ನೇರವಾಗಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಗಾಯಾಳುಗಳನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದು ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಕೇಸ್​ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿವಾಹೇತರ ಸಂಬಂಧ ಶಂಕೆ: ಹುಳಿಮಾವುನಲ್ಲಿ ಮಲಗಿದ್ದ ಪತ್ನಿಯ ಕತ್ತು ಕೊಯ್ದ ಪತಿ!

Last Updated : Jun 22, 2021, 2:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.