ETV Bharat / bharat

ನಿವೃತ್ತ ಐಪಿಎಸ್​ ಅಧಿಕಾರಿ ವಿರುದ್ಧ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಆ. 31ಕ್ಕೆ ಮುಂದೂಡಿಕೆ - ಮದ್ರಾಸ್ ಹೈಕೋರ್ಟ್

​ ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ವಿರುದ್ಧ ಎಂಎಸ್ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮುಂದೂಡಿದೆ.

ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ
ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ
author img

By

Published : Aug 4, 2023, 9:59 AM IST

Updated : Aug 4, 2023, 2:01 PM IST

ಚೆನ್ನೈ(ತಮಿಳುನಾಡು): ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ವಿರುದ್ಧ ಸ್ಟಾರ್ ಕ್ರಿಕೆಟಿಗ ಹಾಗೂ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮುಂದೂಡಿದೆ.

ಮಾಜಿ ಅಧಿಕಾರಿಯ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡಿದ್ದ ಸಿವಿಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ಆದೇಶವನ್ನು ಪರಿಶೀಲಿಸಲು ನ್ಯಾಯಾಲಯ ನಿರ್ಧರಿಸಿದ್ದು, ಪ್ರಕರಣವನ್ನು ಆಗಸ್ಟ್ 31 ಕ್ಕೆ ಮುಂದೂಡಲಾಗಿದೆ. ಆಗಸ್ಟ್ 3 ನೇ ಗುರುವಾರದಂದು ಈ ಪ್ರಕರಣವನ್ನು ನ್ಯಾಯಮೂರ್ತಿ ಎಂ ಸುಂದರ್ ಮತ್ತು ನ್ಯಾಯಮೂರ್ತಿ ಆರ್ ಶಕ್ತಿವೇಲ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ವಿಚಾರಣೆಯ ಸಂದರ್ಭದಲ್ಲಿ, ಧೋನಿ ಅವರ ಕಾನೂನು ಪ್ರತಿನಿಧಿ, ಹಿರಿಯ ವಕೀಲ ಪಿಎಸ್ ರಾಮನ್, ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಯುತ ಆದೇಶವನ್ನು ಸಲ್ಲಿಸಲು ಸಮಯ ಕೋರಿದರು. ಈ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಿದೆ. ಇದರ ಮಧ್ಯೆ, ಜಿ ಸಂಪತ್ ಕುಮಾರ್ ಅವರ ಪರ ಹಿರಿಯ ವಕೀಲ ಪೆರುಂಬುಲವಿಲ್ ರಾಧಾಕೃಷ್ಣನ್ ಅವರು ಧೋನಿ ಆರೋಪಿಸಿದಂತೆ ತಮ್ಮ ಕಕ್ಷಿದಾರರು ಯಾವುದೇ ಹಗರಣದ ಹೇಳಿಕೆಗಳನ್ನು ಮಾಡಿಲ್ಲ ಎಂದು ಪ್ರತಿಪಾದಿಸಿದರು.

ಪ್ರಕರಣವೇನು?: 2014 ರಲ್ಲಿ ನಡೆದ ಕುಖ್ಯಾತ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆಗೆ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿ ಕ್ರಿಕೆಟಿಗ ನಿವೃತ್ತ ಅಧಿಕಾರಿಯಿಂದ 100 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಂಪತ್ ಕುಮಾರ್ ನೀಡಿದ ಲಿಖಿತ ಹೇಳಿಕೆಯು ಅವಹೇಳನಕಾರಿ ಹೇಳಿಕೆಗಳನ್ನು ಹೊಂದಿದೆ ಎಂಬ ವಾದದೊಂದಿಗೆ ಧೋನಿಯವರು ಮಾನನಷ್ಟ ಮೊಕದಮ್ಮೆ ಹೂಡಿದ್ದರು. ಇದು ಮಾಜಿ ಅಧಿಕಾರಿ ವಿರುದ್ಧ ಕ್ರಿಮಿನಲ್ ನಿಂದನೆಯ ಕ್ರಮವನ್ನು ತೆಗೆದುಕೊಳ್ಳುಲು ಕಾರಣವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬರುವ ವಿಚಾರಣೆ ವೇಳೆ ನ್ಯಾಯಾಲಯವು ಹೇಳಿಕೆಯ ವಿವರಗಳನ್ನು ಪರಿಶೀಲಿಸಿ ತೀರ್ಪು ಕೊಡಲಿದೆ.

ಇನ್ನು ಎಂಎಸ್ ಧೋನಿಗೆ ದೇಶದೆಲ್ಲೆಡೆ ಅಪಾರ ಅಭಿಮಾನಿ ಬಳಗ ಇದೆ. ಈ ರೀತಿಯ ಆಧಾರ ರಹಿತ ಆರೋಪದಿಂದ ಕೂಡಿದ ಹೇಳಿಕೆ ನನ್ನ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳವಳವನ್ನು ಧೋನಿ ತಮ್ಮ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಆರೋಪದಿಂದ ನನ್ನ ಕೋಟ್ಯಾಂತರ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳ ದೃಷ್ಟಿಯಲ್ಲಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಿದೆ. ಜೊತೆಗೆ ನನ್ನ ಖ್ಯಾತಿಗೆ, ಹೆಸರಿಗೆ ಕಳಂಕ ತಂದಿದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಮತ್ತು ಅಧಿಕಾರಿ ಸಂಪತ್‌ ಕುಮಾರ್‌ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಕೇಸ್‌ ಹಾಕಿ ನಷ್ಟ ಪರಿಹಾರವನ್ನು ಪಾವತಿಸುವಂತೆ ಕೋರ್ಟ್‌ ಮೂಲಕ ಒತ್ತಾಯಿಸಿದ್ದಾರೆ.

ಎಂಎಸ್ ಧೋನಿ ಮತ್ತು ಜಿ ಸಂಪತ್ ಕುಮಾರ್ ನಡುವಿನ ಕಾನೂನು ಹೋರಾಟವು ಕ್ರಿಕೆಟ್ ಮತ್ತು ಕಾನೂನು ಜಾರಿ ಸಮುದಾಯಗಳಲ್ಲಿ ಜಿಜ್ಞಾಸೆಯನ್ನು ಹುಟ್ಟುಹಾಕಿದೆ. ಆಗಸ್ಟ್ 31 ರಂದು ನಡೆಯಲಿರುವ ಪ್ರಕ್ರಿಯೆಯ ಫಲಿತಾಂಶವು ಈ ವಿವಾದಿತ ಪ್ರಕರಣದಲ್ಲಿ ನ್ಯಾಯಾಲಯವು ತೆಗೆದುಕೊಳ್ಳುವ ಕ್ರಮವನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಧೋನಿ ಮಲಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿದ ಗಗನಸಖಿ.. ಖಾಸಗಿತನಕ್ಕೆ ಅವಕಾಶ ಕೊಡಿ ಎಂದು ನೆಟ್ಟಿಗರಿಂದ ಆಕ್ರೋಶ

Last Updated : Aug 4, 2023, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.