ಹೈದರಾಬಾದ್: ಪೊಲೀಸರ ತಂಡವೊಂದು ಇಬ್ಬರು ಕಳ್ಳರನ್ನು ಬಂಧಿಸುವ ಪ್ರಕ್ರಿಯೆಯಲ್ಲಿದ್ದಾಗ ಸರಗಳ್ಳರು ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ.
ಬೈಕ್ನಲ್ಲಿ ಬಂದ ಸರಗಳ್ಳರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯಿಂದ ಸರ ಕಸಿದುಕೊಂಡಿದ್ದು, ಅವರನ್ನು ಗುರುತಿಸಿದ ಪೊಲೀಸ್ ತಂಡವು ರಾಮಚಂದ್ರ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರನ್ನು ತಡೆದಿದ್ದಾರೆ. ಆ ವೇಳೆ ಪರಾರಿಯಾಗಲು ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಲಾಗಿದೆ.
ಪೊಲೀಸ್ ತಂಡ ಅವರನ್ನು ಗುರುತಿಸಿ ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಅವರಲ್ಲಿ ಒಬ್ಬರು ಇದ್ದಕ್ಕಿದ್ದಂತೆ ಚಾಕು ತೆಗೆದುಕೊಂಡು ಕಾನ್ಸ್ಟೇಬಲ್ಗೆ ಇರಿದಿದ್ದಾರೆ ಎಂದ ಅವರು ಸರಗಳ್ಳರು ಸಿಕ್ಕಿಬಿದ್ದಿದ್ದಾರೋ ಅಥವಾ ಇಲ್ಲವೇ ಎಂದು ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದರು.
ಇದೀಗ ಕಾನ್ಸ್ಟೇಬಲ್ಗೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸೈಬರಾಬಾದ್ ಪೊಲೀಸ್ ಕಮಿಷನರ್ ಎಂ ಸ್ಟೀಫನ್ ರವೀಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಯುವ ಮುಖಂಡನಿಗೆ ಮಾರಣಾಂತಿಕ ಹಲ್ಲೆ.. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು