ETV Bharat / bharat

ಚಲಿಸುತ್ತಿದ್ದ ರೈಲಿನ ಖಾಲಿ ಕಂಪಾರ್ಟ್‌ಮೆಂಟ್​ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಕಾನ್ಸ್​​ಟೇಬಲ್​​

author img

By

Published : Jan 14, 2023, 5:19 PM IST

ಉತ್ತರ ಪ್ರದೇಶದಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿ ದುಷ್ಕೃತ್ಯ ಎಸಗಿರುವ ಘಟನೆ ವರದಿಯಾಗಿದೆ.

constable-arrested-for-molesting-college-student-in-moving-train
ರೈಲಿನ ಖಾಲಿ ಕಂಪಾರ್ಟ್‌ಮೆಂಟ್​ನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಕಾನ್​ಸ್ಟೇಬಲ್

ಪಿಲಿಭಿತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಮಾನಗೇಡಿ ಕೃತ್ಯ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಪೊಲೀಸ್​ ಕಾನ್ಸ್​ಟೇಬಲ್​​​ ಒಬ್ಬ ಕಾಲೇಜು ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸ್​ ಸಮವಸ್ತ್ರದಲ್ಲೇ ಆರೋಪಿ ಈ ದುಷ್ಕೃತ್ಯ ಎಸಗಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸಂತ್ರಸ್ತೆಯ ಲಗೇಜ್‌ಗಳನ್ನು ರೈಲಿನಿಂದ ಹೊರಗೆ ಎಸೆದು ಓಡಿ ಹೋಗಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಕಾನ್ಸ್​ಟೇಬಲ್​​ನನ್ನು ಪೊಲೀಸರು ಪತ್ತೆ ಹೆಚ್ಚಿ ಶುಕ್ರವಾರ ಬಂಧಿಸಿದ್ದಾರೆ.

ಕಾನ್​ಸ್ಟೇಬಲ್ ತೌಫಿಕ್ ಅಹ್ಮದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಉತ್ತರ ಪ್ರದೇಶದ ಬರೇಲಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸ್​ (ಜಿಆರ್‌ಪಿ) ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತ್ರಿವೇಣಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಈ ಕಾನ್ಸ್​ಟೇಬಲ್ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಬರೇಲಿ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ನಡೆದಿದ್ದೇನು?: ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಬಿಎ ಓದುತ್ತಿದ್ದ ವಿದ್ಯಾರ್ಥಿನಿ ರಜೆಯ ಮೇಲೆ ಮನೆಗೆ ಹೋಗುತ್ತಿದ್ದರು. ಪ್ರಯಾಗರಾಜ್‌ನಿಂದ ಪಿಲಿಭಿತ್‌ಗೆ ತ್ರಿವೇಣಿ ಎಕ್ಸ್‌ಪ್ರೆಸ್​ ರೈಲಿನ ಎಸ್‌7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಬರೇಲಿ ಜಂಕ್ಷನ್‌ನಲ್ಲಿ ರೈಲು ನಿಂತಾಗ ಬಹಳಷ್ಟು ಪ್ರಯಾಣಿಕರು ಕೆಳಗಿಳಿದು ಹೋಗಿದ್ದಾರೆ. ಇದರಿಂದ ಕಂಪಾರ್ಟ್‌ಮೆಂಟ್‌ ಸಂಪೂರ್ಣ ಖಾಲಿಯಾಗಿ ವಿದ್ಯಾರ್ಥಿನಿ ಒಬ್ಬರೇ ಉಳಿದಿದ್ದರು.

ಇದನ್ನೂ ಓದಿ: ಹನಿಟ್ರ್ಯಾಪ್​ಗೆ ನಲುಗಿ, ಹೆಂಡ್ತಿಯ ಒಡವೆ ಮಾರಿ ಹಣ ಕೊಟ್ಟಿದ್ದ ವ್ಯಕ್ತಿ.. ಪೊಲೀಸರ ಸಹಾಯದಿಂದ ನಿಟ್ಟುಸಿರು ಬಿಟ್ಟ ವಿವಾಹಿತ

ಇತ್ತ, ಆರೋಪಿ ಕಾನ್ಸ್​ಟೇಬಲ್​ ​ ಇದೇ ಬರೇಲಿ ಜಂಕ್ಷನ್‌ನಲ್ಲಿ ರೈಲಿಗೆ ಹತ್ತಿದ್ದಾರೆ. ಖಾಲಿಯಿದ್ದ ಎಸ್‌7 ಬೋಗಿಗೆ ಬಂದಿದ್ದು, ವಿದ್ಯಾರ್ಥಿನಿ ಒಬ್ಬರೇ ಇದ್ದನ್ನು ಕಂಡು ಆಕೆಯ ಬಳಿ ಬಂದು ಕುಳಿತಿದ್ದಾರೆ. ಅಲ್ಲದೇ, ಅನುಚಿತವಾಗಿ ವಿದ್ಯಾರ್ಥಿನಿಯನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ. ಹೀಗಾಗಿ ಗಾಬರಿಗೊಂಡ ವಿದ್ಯಾರ್ಥಿನಿ ಇನ್ನೊಂದು ಬೋಗಿಯಲ್ಲಿದ್ದ ಮಹಿಳಾ ಸಹ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಇದಕ್ಕೆ ಯಾರೂ ಕಿವಿಗೊಟ್ಟಿಲ್ಲ ಎಂದು ಹೇಳಲಾಗಿದೆ.

ಲಗೇಜ್‌ಗಳನ್ನು ಹೊರ ಎಸೆದ ಆರೋಪಿ​: ಆರೋಪಿ ಪೊಲೀಸ್​ನ ಅನುಚಿತ ವರ್ತನೆ ಬಗ್ಗೆ ಇತರ ಮಹಿಳೆಯರಿಗೆ ತಿಳಿಸಿದರೂ, ಅವರು ಸ್ಪಂದಿಸಿದ ಕಾರಣ ವಿದ್ಯಾರ್ಥಿನಿ ತನ್ನ ಬೋಗಿ ಮರಳಿ ಬಂದಿದ್ದಾರೆ. ಈ ವೇಳೆ ಕಾನ್​ಸ್ಟೇಬಲ್​ ವರ್ತನೆಗೆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿ, ಪೊಲೀಸ್​ ಠಾಣೆಗೆ ದೂರು ನೀಡುವುದಾಗಿಯೂ ವಿದ್ಯಾರ್ಥಿನಿ ಎಚ್ಚರಿಸಿದ್ದಾರೆ. ಇದರಿಂದ ಕುಪಿತಗೊಂಡ ಕೀಚಕ ಕಾನ್​ಸ್ಟೇಬಲ್ ಚಲಿಸುತ್ತಿದ್ದ ರೈಲಿನಿಂದ ಆಕೆಯ ಲಗೇಜ್‌ಗಳನ್ನು ಎಸೆದು, ರೈಲಿನ ವೇಗ ಕಡಿಮೆಯಾದ ಬಳಿಕ ಅಲ್ಲಿಂದ ಇಳಿದು ಹೋಗಿದ್ದಾರೆ ಎನ್ನಲಾಗಿದೆ.

ಸಮವಸ್ತ್ರದೊಂದಿಗೆ ನೇಮ್​ಪ್ಲೇಟ್​ ಇತ್ತು: ರೈಲು ಹತ್ತುವಾಗ ಆರೋಪಿ ಪೊಲೀಸ್​ ಸಮವಸ್ತ್ರದಲ್ಲೇ ಇದ್ದ ಮತ್ತು ಇದಕ್ಕೆ ನೇಮ್​ಪ್ಲೇಟ್ ಇತ್ತು. ಇದನ್ನು ಗಮನಿಸಿದ್ದ ಸಂತ್ರಸ್ತ ವಿದ್ಯಾರ್ಥಿನಿ ನಂತರ ಮೊರಾದಾಬಾದ್​ಗೆ ರೈಲು ತಲುಪಿದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಪೊಲೀಸ್​ನ ಹೆಸರಿನ ಸಮೇತ ಸಂತ್ರಸ್ತೆ ದೂರು ಸಲ್ಲಿಸಿದ್ದು, ಇದರ ಆಧಾರದ ಮೇಲೆ ಮೊರಾದಾಬಾದ್ ಪೊಲೀಸ್​ ಅಧಿಕಾರಿ ದೇವಿ ದಯಾಳ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ಶವವಾಗಿ ಪತ್ತೆ... ತಂಡದಲ್ಲಿ ಸ್ಥಾನ ಸಿಗದ್ದಕ್ಕೆ ಪ್ರಾಣಬಿಟ್ಟಳೇ ಯುವ ಆಟಗಾರ್ತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.