ETV Bharat / bharat

ಯೋಗ, ದೈಹಿಕ ಶಿಕ್ಷಣ ನೆಪದಲ್ಲಿ ಉಗ್ರ ತರಬೇತಿ: ಪಿಎಫ್​ಐ ವಿರುದ್ಧ ಎನ್​ಐಎ ಆರೋಪಪಟ್ಟಿ ಸಲ್ಲಿಕೆ - Popular Front of India

ತೆಲಂಗಾಣದಲ್ಲಿ ನಿಷೇಧಿತ ಪಿಎಫ್​ಐ ವಿರುದ್ಧ ಚಾರ್ಜ್​ಶೀಟ್ ​- ಯೋಗ, ಶಿಕ್ಷಣದ ನೆಪದಲ್ಲಿ ಭಯೋತ್ಪಾದನೆಗೆ ತರಬೇತಿ - ರಾಜ್ಯದ ಹಲವೆಡೆ ಎನ್​ಐಎ ದಾಳಿ

conspiracy-for-terrorist-attacks
ಪಿಎಫ್​ಐ ವಿರುದ್ಧ ಎನ್​ಐಎ ಆರೋಪಪಟ್ಟಿ ಸಲ್ಲಿಕೆ
author img

By

Published : Dec 31, 2022, 2:30 PM IST

ಹೈದರಾಬಾದ್: ನಿಷೇಧಕ್ಕೊಳಗಾಗಿರುವ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(ಪಿಎಫ್​ಐ) ತೆಲಂಗಾಣದಲ್ಲೂ ಬೇಡು ಬಿಟ್ಟಿದ್ದು, ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಹರಿತವಾದ ಆಯುಧಗಳು, ಕತ್ತಿಗಳು, ಕಬ್ಬಿಣದ ಸರಳುಗಳಿಂದ ಹತ್ಯೆ ಮಾಡುವ ಬಗ್ಗೆ ತನ್ನ ಉದ್ದೇಶಿತ ಗುಂಪಿಗೆ ತರಬೇತಿ ನೀಡಿದೆ ಎಂದು ಆರೋಪಿಸಿದೆ.

ಗಂಟಲು, ಹೊಟ್ಟೆ, ತಲೆಗೆ ಹೇಗೆ ದಾಳಿ ಮಾಡಬೇಕು ಎಂಬುದರ ಬಗ್ಗೆ ಕಲಿಸಿಕೊಡಲಾಗುತ್ತಿದೆ. ಯೋಗ ಮತ್ತು ದೈಹಿಕ ಶಿಕ್ಷಣ ನೀಡುವ ನೆಪದಲ್ಲಿ ಇಂತಹ ಕುಕೃತ್ಯಗಳನ್ನು ಹೇಳಿಕೊಡಲಾಗುತ್ತಿದೆ. ದ್ವೇಷ ಭಾಷಣ ಮಾಡುವ ಮೂಲಕ ಅನ್ಯಧರ್ಮಗಳ ಮೇಲೆ ಯುವಕರನ್ನು ಎತ್ತಿಕಟ್ಟಿ ಕೊಲೆಗೆ ಪ್ರೇರೇಪಣೆ ನೀಡುತ್ತಿದೆ ಎಂದು ಚಾರ್ಜ್​ಶೀಟ್​ನಲ್ಲಿ ನಮೂದಿಸಲಾಗಿದೆ. ಈ ಸಂಬಂಧ ಹನ್ನೊಂದು ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ರಾಜ್ಯದ ಹಲವೆಡೆ ಎನ್​ಐಎ ದಾಳಿ: ದೇಶಾದ್ಯಂತ ಭಯೋತ್ಪಾದನೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಎನ್‌ಐಎ ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಪಿಎಫ್​ಐಗೆ ಸಂಬಂಧಿಸಿದ ಹಲವರನ್ನು ಬಂಧಿಸಿದೆ. ಅದರಂತೆ ಸೆಪ್ಟೆಂಬರ್​​ನಲ್ಲಿ ತೆಲಂಗಾಣದ ವಿವಿಧೆಡೆ ಸುಮಾರು 40 ಕಡೆ ದಾಳಿ ನಡೆಸಿತ್ತು. ನಿಜಾಮಾಬಾದ್ ಜಿಲ್ಲೆಯೊಂದರಲ್ಲೇ 23 ಕಡೆ ಶೋಧ ನಡೆಸಲಾಗಿದೆ. ಪಿಎಫ್​​ಐ ಕಾರ್ಯಕರ್ತರ ಮನೆ, ಕಚೇರಿಗಳಲ್ಲಿ ಸಿಕ್ಕ ದಾಖಲೆಗಳ ಅನುಸಾರ ತನಿಖೆ ಮುಂದುವರಿದಿದೆ.

ಓದಿ: ಛತ್ತೀಸ್​ಗಢದ ಮನೆಗಳ ಮುಂದೆ ನಿಗೂಢ ಚೀಟಿಗಳು: ಅದರಲ್ಲಿತ್ತು ಅಂತಹ ವಾಕ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.