ETV Bharat / bharat

ಪಿತೂರಿ ಪ್ರಕರಣ : ಮಲಯಾಳಂ ನಟ ದಿಲೀಪ್​ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್​! - ಪಿತೂರಿ ಪ್ರಕರಣ

ಒಳಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಮತ್ತು ಇತರ ಐವರು ಆರೋಪಿಗಳಿಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

Kerala High Court grants Bail to Dileep  Court grants Bail to Dileep and other five accused  Conspiracy case  Conspiracy case update  ದಿಲೀಪ್​ ಸೇರಿ ಐವರಿಗೆ ಜಾಮೀನು ಮಂಜೂರು  ದಿಲೀಪ್​ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್​ ಪಿತೂರಿ ಪ್ರಕರಣ  ಒಳಸಂಚು ಪ್ರಕರಣ ಅಪ್​ಡೇಟ್​
ಮಲಯಾಳಂ ನಟ ದಿಲೀಪ್​ ಸೇರಿ ಐವರಿಗೆ ಜಾಮೀನು ಮಂಜೂರು
author img

By

Published : Feb 7, 2022, 11:28 AM IST

ಎರ್ನಾಕುಲಂ: ಪಿತೂರಿ ಪ್ರಕರಣದಲ್ಲಿ ನಟ ದಿಲೀಪ್ ಮತ್ತು ಇತರ ಐವರು ಆರೋಪಿಗಳಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಗೋಪಿನಾಥ್ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದ ಇತರ ಆರೋಪಿಗಳೆಂದರೆ ದಿಲೀಪ್ ಸಹೋದರ ಅನೂಪ್, ಸೋದರ ಮಾವ ಟಿ.ಎನ್.ಸೂರಜ್, ಸಂಬಂಧಿ ಅಪ್ಪು, ಸ್ನೇಹಿತರಾದ ಬೈಜು ಚೆಂಗಮನಾಡ್ ಮತ್ತು ಶರತ್​ಗೆ ಒಳಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್​ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಓದಿ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಯಮರಾಜನ ಅಟ್ಟಹಾಸ: ತಾಯಿ, ಮಗಳು, ಮೊಮ್ಮಗಳು ಸಾವು!

ಹೈಕೋರ್ಟ್​ನಲ್ಲಿ ಶುಕ್ರವಾರ ಆರೋಪಿಗಳು ಮತ್ತು ಪ್ರಾಸಿಕ್ಯೂಷನ್ ಇಬ್ಬರ ನಡುವಿನ ವಿಚಾರಣೆ ಪೂರ್ಣಗೊಂಡಿತ್ತು. ದಿಲೀಪ್​ನನ್ನು ಬಲೆಗೆ ಬೀಳಿಸಲು ಅಧಿಕಾರಿಗಳು ಸಂಚು ರೂಪಿಸಿದ್ದು, ಮಿಮಿಕ್ರಿ ಕಲಾವಿದರನ್ನು ಬಳಸಿಕೊಂಡು ಪ್ರಾಸಿಕ್ಯೂಷನ್ ನೀಡಿರುವ ಆಡಿಯೋ ರೆಕಾರ್ಡ್​ಗಳನ್ನು ರೆಕಾರ್ಡ್ ಮಾಡಲಾಗಿದೆ ಎಂದು ದಿಲೀಪ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಫೆಬ್ರವರಿ 17, 2017 ರ ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿಯೊಬ್ಬರನ್ನು ದಿಲೀಪ್​ ಅವರ ಗ್ಯಾಂಗ್ ​ಅಪಹರಿಸಿ ಕಾರಿನೊಳಗೆ ಎರಡು ಗಂಟೆಗಳ ಲೈಂಗಿಕ ಕಿರುಕುಳ ನೀಡಿತ್ತು. ಅಷ್ಟೇ ಅಲ್ಲ, ಕೃತ್ಯದ ದೃಶ್ಯ ಚಿತ್ರೀಕರಿಸಿ ಬ್ಲಾಕ್‌ ಮೇಲ್‌ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಿಲೀಪ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಈಗ ಆರೋಪಿಗಳಿಗೆ ಕೇರಳ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.