ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ತೃಣಮೂಲ ಕಾಂಗ್ರೆಸ್, ಬಿಜೆಪಿ ಜತೆ ಕಾಂಗ್ರೆಸ್ ಕೂಡ ಕಣಕ್ಕಿಳಿದಿದ್ದು, ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು 30 ಸ್ಟಾರ್ ಕ್ಯಾಂಪೇನರ್ ಲಿಸ್ಟ್ ರಿಲೀಸ್ ಅಗಿದ್ದು, ಅದರಲ್ಲಿ ಪ್ರಮುಖವಾಗಿ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಮುಖರಾಗಿದ್ದಾರೆ.
ಇದನ್ನೂ ಓದಿ: ತಿರುಮಲ ಕಿಡ್ನ್ಯಾಪ್ ಕೇಸ್: ಆರೋಪಿಯ ಗುರುತು ಪತ್ತೆ ಮಾಡಿದ ಆಂಧ್ರ ಪೊಲೀಸರು
ಉಳಿದಂತೆ ಸಚಿನ್ ಪೈಲೆಟ್, ನವಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ, ಮೊಹಮ್ಮದ್ ಅಜರುದ್ದೀನ್ ಇದ್ದಾರೆ. ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲಿದ್ದಾರೆ.
ಪಟ್ಟಿಯಲ್ಲಿ ಯಾರಿಗೆಲ್ಲ ಮಣೆ?
- ಸೋನಿಯಾ ಗಾಂಧಿ
- ಮನಮೋಹನ್ ಸಿಂಗ್
- ರಾಹುಲ್ ಗಾಂಧಿ
- ಪ್ರಿಯಾಂಕಾ ಗಾಂಧಿ ವಾದ್ರಾ
- ಮಲ್ಲಿಕಾರ್ಜುನ್ ಖರ್ಗೆ
- ಅಶೋಕ್ ಗೆಹ್ಲೋಟ್
- ಅಮರೀಂದರ್ ಸಿಂಗ್
- ಬೂಪೇಶ್ ಭಾಗ್ಲೇ
- ಕಮಲನಾಥ್
- ಅದೀರ್ ರಂಜನ್ ಚೌಧರಿ
- ಬಿ.ಕೆ.ಹರಿಪ್ರಸಾದ್
- ಸಲ್ಮಾನ್ ಖುರ್ಷಿದ್
- ಸಚಿನ್ ಫೈಲೆಟ್
- ರಂದೀಪ್ ಸಿಂಗ್ ಸುರ್ಜೇವಾಲ್
- ಜೀತಿನ್ ಪ್ರಸಾದ್
- ಆರ್.ಪಿ.ಎನ್ ಸಿಂಗ್
- ನವಜೋತ್ ಸಿಂಗ್ ಸಿಧು
- ಅಬ್ದುಲ್ ಮನನ್
- ಪ್ರದೀಪ್ ಭಟ್ಟಾಚಾರ್ಯ
- ದೀಪ್ ದಶ್ಮುನಿ
- ಎ.ಹೆಚ್.ಖಾನ್ ಚೌಧರಿ
- ಅಭಿಜಿತ್ ಮುಖರ್ಜಿ
- ದಿಪೇಂದ್ರ ಹೂಡಾ
- ಅಖಿಲೇಶ್ ಪ್ರಸಾದ್ ಸ ಇಂಗ್
- ರಾಮೇಶ್ವರ್ ಓರಾನ್
- ಮೊಹಮ್ಮದ್ ಅಜರುದ್ದೀನ್
- ಜೈವೀರ್ ಶ್ರೀಗಿಲ್
- ಪವನ್ ಖೇರ್
- ಬಿ.ಪಿ.ಸಿಂಗ್
- ಅಲ್ಮಗಿರ್ ಆಲಂ