ನವದೆಹಲಿ : ಮುಂಬರುವ ಪಂಚರಾಜ್ಯ ಚುನಾವಣೆ ಹಿನ್ನೆಲೆ ಕಾಂಗ್ರೆಸ್, ಮೂರು ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಮಧ್ಯಪ್ರದೇಶದ 230 ಸ್ಥಾನಗಳಲ್ಲಿ 144 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಛತ್ತೀಸ್ಗಢದಲ್ಲಿ 30 ಅಭ್ಯರ್ಥಿಗಳ ಹಾಗೂ ತೆಲಂಗಾಣದಲ್ಲಿ 55 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವರಾತ್ರಿಯ ಸುಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ.
-
मध्यप्रदेश विधानसभा चुनाव 2023 के लिये कांग्रेस पार्टी के 144 उम्मीदवारों की प्रथम सूची।
— MP Congress (@INCMP) October 15, 2023 " class="align-text-top noRightClick twitterSection" data="
सभी को प्रचंड जीत की अग्रिम बधाई एवं शुभकामनाएँ।
“बढ़ाइये हाथ, फिर कमलनाथ” pic.twitter.com/yUXQT4jpoz
">मध्यप्रदेश विधानसभा चुनाव 2023 के लिये कांग्रेस पार्टी के 144 उम्मीदवारों की प्रथम सूची।
— MP Congress (@INCMP) October 15, 2023
सभी को प्रचंड जीत की अग्रिम बधाई एवं शुभकामनाएँ।
“बढ़ाइये हाथ, फिर कमलनाथ” pic.twitter.com/yUXQT4jpozमध्यप्रदेश विधानसभा चुनाव 2023 के लिये कांग्रेस पार्टी के 144 उम्मीदवारों की प्रथम सूची।
— MP Congress (@INCMP) October 15, 2023
सभी को प्रचंड जीत की अग्रिम बधाई एवं शुभकामनाएँ।
“बढ़ाइये हाथ, फिर कमलनाथ” pic.twitter.com/yUXQT4jpoz
ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಕಾಂಗ್ರೆಸ್ ಇಂದು ಮಧ್ಯ ಪ್ರದೇಶದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತೆಲಂಗಾಣದ 90 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಛತ್ತೀಸ್ಗಢದ 90 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
-
कांग्रेस केंद्रीय चुनाव समिति द्वारा आसन्न विधानसभा चुनावों के लिए 30 नामों की प्रथम सूची जारी कर दी गई है।
— INC Chhattisgarh (@INCChhattisgarh) October 15, 2023 " class="align-text-top noRightClick twitterSection" data="
छत्तीसगढ़ प्रदेश कांग्रेस कमेटी की ओर से सभी प्रत्याशियों को हार्दिक बधाई एवं शुभकामनाएं, एक बार पुनः छत्तीसगढ़ में कांग्रेस का परचम लहराने के लिए हम तैयार हैं।… pic.twitter.com/Efbj6HFS5e
">कांग्रेस केंद्रीय चुनाव समिति द्वारा आसन्न विधानसभा चुनावों के लिए 30 नामों की प्रथम सूची जारी कर दी गई है।
— INC Chhattisgarh (@INCChhattisgarh) October 15, 2023
छत्तीसगढ़ प्रदेश कांग्रेस कमेटी की ओर से सभी प्रत्याशियों को हार्दिक बधाई एवं शुभकामनाएं, एक बार पुनः छत्तीसगढ़ में कांग्रेस का परचम लहराने के लिए हम तैयार हैं।… pic.twitter.com/Efbj6HFS5eकांग्रेस केंद्रीय चुनाव समिति द्वारा आसन्न विधानसभा चुनावों के लिए 30 नामों की प्रथम सूची जारी कर दी गई है।
— INC Chhattisgarh (@INCChhattisgarh) October 15, 2023
छत्तीसगढ़ प्रदेश कांग्रेस कमेटी की ओर से सभी प्रत्याशियों को हार्दिक बधाई एवं शुभकामनाएं, एक बार पुनः छत्तीसगढ़ में कांग्रेस का परचम लहराने के लिए हम तैयार हैं।… pic.twitter.com/Efbj6HFS5e
ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ, ಪ್ರದೇಶ್ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ಕಮಲ್ನಾಥ್ ಅವರು ಛಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಡಾ. ಗೋವಿಂದ್ ಸಿಂಗ್ ಅವರು ಲಹರಾ ಕ್ಷೇತ್ರದಿಂದ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ಅವರು ರಾಘೋಗಡ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಛತ್ತೀಸ್ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಮ್ಮ ಪಠಾಣ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಟಿ.ಎಸ್ ಸಿಂಗ್ ಡಿಯೋ ಅಂಬಿಕಾಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದು, ಶಾಸಕಾಂಗ ಪಕ್ಷದ ನಾಯಕ ಮಲ್ಲು ಬಟ್ಟಿ ವಿಕ್ರಮಾರ್ಕ ಎಸ್ಸಿ ಮೀಸಲು ಕ್ಷೇತ್ರ ಮಾಧಿರದಲ್ಲಿ ಕಣಕ್ಕಿಳಿಯಲಿದ್ದಾರೆ. ಡಾ. ಕೋಟ ನೀಲಿಮಾ ಸನತ್ ನಗರ ವಿಧಾನಸಭಾ ಕ್ಷೇತ್ರ ಮತ್ತು ಜುಪಲ್ಲಿ ಕೃಷ್ಣ ರಾವ್ ಅವರು ಕೊಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ವೋಟಿಂಗ್ ನಡೆಯಲಿದೆ. ನವೆಂಬರ್ 17ರಂದು ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನವೆಂಬರ್ 30ಕ್ಕೆ ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಚುನಾವಣಾ ಫಲಿತಾಂಶ ಘೋಷಣೆ ಆಗಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಇಂಡಿಯಾ ಒಕ್ಕೂಟದ ಗುರಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ