ನವದೆಹಲಿ : ರಾಹುಲ್ ಗಾಂಧಿ ಅವರನ್ನು ರಾಜಕೀಯ ಸೇಡಿಗಾಗಿ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದೆ. ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಪರಿಗಣಿಸಲ್ಪಟ್ಟು, ಗುರುವಾರ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವುದು ಗಮನಾರ್ಹ. ದೇಶವ್ಯಾಪಿ ಪ್ರತಿಭಟನೆಯ ರೂಪುರೇಷೆ ನಿರ್ಧರಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಸಂಜೆ ವರ್ಚುವಲ್ ಮೋಡ್ ಮೂಲಕ ಎಲ್ಲ ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥರ ಜೊತೆ ಸಂವಾದ ನಡೆಸಲಿದ್ದಾರೆ.
ರಾಹುಲ್ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ರಾಹುಲ್ ಅವರ ಶಿಕ್ಷೆಯು ಕೇವಲ ಕಾನೂನು ವಿಷಯವಲ್ಲ, ಇದು ಪ್ರಜಾಪ್ರಭುತ್ವದ ಭವಿಷ್ಯದೊಂದಿಗೆ ಸಂಬಂಧ ಹೊಂದಿರುವ ಗಂಭೀರ ರಾಜಕೀಯ ವಿಷಯವಾಗಿದೆ ಮತ್ತು ಮೋದಿ ಸರ್ಕಾರದ ಸೇಡಿನ ರಾಜಕೀಯ ಮತ್ತು ಬೆದರಿಕೆಯ ರಾಜಕೀಯಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ. ನಾವು ಈ ವಿಚಾರದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ನಮಗೆ ಲಭ್ಯವಿರುವ ಕಾನೂನು ಹಕ್ಕುಗಳನ್ನು ನಾವು ಬಳಸುತ್ತೇವೆ. ಇದನ್ನು ದೊಡ್ಡ ರಾಜಕೀಯ ವಿಷಯವನ್ನಾಗಿ ಮಾಡುತ್ತೇವೆ. ನಾವು ಇದರ ವಿರುದ್ಧ ಹೋರಾಡುತ್ತೇವೆ ಮತ್ತು ಇದರಿಂದ ನಾವು ಹೆದರುವುದಿಲ್ಲ ಎಂದು ಅವರು ಹೇಳಿದರು.
ಖರ್ಗೆ ಜೊತೆ ಮುಖಂಡರ ಸಮಾಲೋಚನೆ : ರಾಹುಲ್ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಿದ್ದನ್ನು ವಿರೋಧಿಸಿ ಗುರುವಾರ ಹಲವಾರು ಕಾಂಗ್ರೆಸ್ ಮುಖಂಡರು ರಾಹುಲ್ ನಿವಾಸದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸೂರತ್ನಿಂದ ದೆಹಲಿಗೆ ಮರಳಿದ ರಾಹುಲ್ರನ್ನು ಕಾಂಗ್ರೆಸ್ ಸಂಸದರು ಇದೇ ಸಂದರ್ಭದಲ್ಲಿ ಬರಮಾಡಿಕೊಂಡರು. ನಂತರ ಸುಮಾರು 50 ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರು ಖರ್ಗೆ ಅವರ ನಿವಾಸದಲ್ಲಿ ಸೇರಿ ಸುಮಾರು ಎರಡು ತಾಸು ಸಮಾಲೋಚನೆ ನಡೆಸಿದರು. ರಾಹುಲ್ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಿದ ನಂತರ ಉದ್ಭವವಾಗಿರುವ ರಾಜಕೀಯ ಸನ್ನಿವೇಶವನ್ನು ಪಕ್ಷಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಯಿತು ಎನ್ನಲಾಗಿದೆ.
ಲೋಕಸಭೆ ಕಲಾಪಕ್ಕೆ ಹಾಜರಾದ ರಾಹುಲ್: 2019 ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಒಂದು ದಿನದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಲೋಕಸಭೆಯ ಕಲಾಪಕ್ಕೆ ಹಾಜರಾಗಿದ್ದರು. ಸದನದ ಕಲಾಪ ಆರಂಭಕ್ಕೂ ಮುನ್ನ ರಾಹುಲ್ ಗಾಂಧಿ ಪಕ್ಷದ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು. ವಿವಿಧ ವಿಷಯಗಳ ಮೇಲೆ ಗದ್ದಲ ಉಂಟಾದ ನಡುವೆ ಸದನವನ್ನು ಮುಂದೂಡಲಾಯಿತು.
ಲೋಕಸಭಾ ಸದಸ್ಯತ್ವ ಅನರ್ಹ ಸಾಧ್ಯತೆ : 'ಮೋದಿ' ಉಪನಾಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದು ಎರಡು ವರ್ಷ ಶಿಕ್ಷೆ ನೀಡಿದೆ. ನ್ಯಾಯಾಲಯದಿಂದ ಶಿಕ್ಷೆಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಯಿದೆ. ಮೇಲ್ಮನವಿ ನ್ಯಾಯಾಲಯದಲ್ಲಿ ಶಿಕ್ಷೆಗೆ ತಡೆ ಸಿಕ್ಕಿದಲ್ಲಿ ಅವರು ಅನರ್ಹತೆಯ ಅಪಾಯದಿಂದ ಪಾರಾಗಬಹುದು.
ಟ್ವೀಟ್ ಮಾಡಿ ಆಕ್ರೋಶ: ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಲವು ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
-
ಮೋದಿ ಸರ್ಕಾರ @RahulGandhi & ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತಿದೆ!
— Karnataka Congress (@INCKarnataka) March 24, 2023 " class="align-text-top noRightClick twitterSection" data="
ಪ್ರಜಾಪ್ರಭುತ್ವವನ್ನ ಕೊನೆಗಾಣಿಸಲು ಶ್ರೀ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿದೆ. ಸತ್ಯ ಹೇಳುವವರ ಬಾಯಿ ಮುಚ್ಚಿಸುವುದು ಅವರ ಉದ್ದೇಶ.
ದೇಶದ ಜನ ಈ ಸರ್ವಾಧಿಕಾರವನ್ನ ಸಹಿಸುವುದಿಲ್ಲ.
ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. https://t.co/vZvjYhrRkz
">ಮೋದಿ ಸರ್ಕಾರ @RahulGandhi & ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತಿದೆ!
— Karnataka Congress (@INCKarnataka) March 24, 2023
ಪ್ರಜಾಪ್ರಭುತ್ವವನ್ನ ಕೊನೆಗಾಣಿಸಲು ಶ್ರೀ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿದೆ. ಸತ್ಯ ಹೇಳುವವರ ಬಾಯಿ ಮುಚ್ಚಿಸುವುದು ಅವರ ಉದ್ದೇಶ.
ದೇಶದ ಜನ ಈ ಸರ್ವಾಧಿಕಾರವನ್ನ ಸಹಿಸುವುದಿಲ್ಲ.
ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. https://t.co/vZvjYhrRkzಮೋದಿ ಸರ್ಕಾರ @RahulGandhi & ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತಿದೆ!
— Karnataka Congress (@INCKarnataka) March 24, 2023
ಪ್ರಜಾಪ್ರಭುತ್ವವನ್ನ ಕೊನೆಗಾಣಿಸಲು ಶ್ರೀ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿದೆ. ಸತ್ಯ ಹೇಳುವವರ ಬಾಯಿ ಮುಚ್ಚಿಸುವುದು ಅವರ ಉದ್ದೇಶ.
ದೇಶದ ಜನ ಈ ಸರ್ವಾಧಿಕಾರವನ್ನ ಸಹಿಸುವುದಿಲ್ಲ.
ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. https://t.co/vZvjYhrRkz
ನಾವು ಜೈಲಿಗೆ ಹೋಗಲೂ ಸಿದ್ಧ: ಮೋದಿ ಸರ್ಕಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತಿದೆ! ಪ್ರಜಾಪ್ರಭುತ್ವವನ್ನ ಕೊನೆಗಾಣಿಸಲು ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿದೆ. ಸತ್ಯ ಹೇಳುವವರ ಬಾಯಿ ಮುಚ್ಚಿಸುವುದು ಅವರ ಉದ್ದೇಶ. ದೇಶದ ಜನ ಈ ಸರ್ವಾಧಿಕಾರವನ್ನ ಸಹಿಸುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.
ಪ್ರಿಯಾಂಕಾ ಗಾಂಧಿ ಟ್ವೀಟ್: ನರೇಂದ್ರ ಮೋದಿ ಅವರೇ, ನಿಮ್ಮ ಚೇಲಾಗಳು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದಿದ್ದಾರೆ. ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆ ಎತ್ತಿದ್ದರು. ಕಾಶ್ಮೀರಿ ಪಂಡಿತರ ಸಂಪ್ರದಾಯದಂತೆ, ಒಬ್ಬ ಮಗ ತನ್ನ ತಂದೆಯ ಮರಣದ ನಂತರ ಪೇಟಾ ಧರಿಸಿ ಕುಟುಂಬದ ಸಂಪ್ರದಾಯವನ್ನು ಮುಂದುವರೆಸುತ್ತಾನೆ!
-
'@narendramodi ಅವರೇ,
— Karnataka Congress (@INCKarnataka) March 24, 2023 " class="align-text-top noRightClick twitterSection" data="
ನಿಮ್ಮ ಚೇಲಾಗಳು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದಿದ್ದಾರೆ.
ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆ ಎತ್ತಿದ್ದರು.
ಕಾಶ್ಮೀರಿ ಪಂಡಿತರ ಸಂಪ್ರದಾಯದಂತೆ, ಒಬ್ಬ ಮಗ ತನ್ನ ತಂದೆಯ ಮರಣದ ನಂತರ ಪೇಟಾ ಧರಿಸಿ ಕುಟುಂಬದ ಸಂಪ್ರದಾಯವನ್ನು ಮುಂದುವರೆಸುತ್ತಾನೆ! https://t.co/XodFXxoB6r
">'@narendramodi ಅವರೇ,
— Karnataka Congress (@INCKarnataka) March 24, 2023
ನಿಮ್ಮ ಚೇಲಾಗಳು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದಿದ್ದಾರೆ.
ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆ ಎತ್ತಿದ್ದರು.
ಕಾಶ್ಮೀರಿ ಪಂಡಿತರ ಸಂಪ್ರದಾಯದಂತೆ, ಒಬ್ಬ ಮಗ ತನ್ನ ತಂದೆಯ ಮರಣದ ನಂತರ ಪೇಟಾ ಧರಿಸಿ ಕುಟುಂಬದ ಸಂಪ್ರದಾಯವನ್ನು ಮುಂದುವರೆಸುತ್ತಾನೆ! https://t.co/XodFXxoB6r'@narendramodi ಅವರೇ,
— Karnataka Congress (@INCKarnataka) March 24, 2023
ನಿಮ್ಮ ಚೇಲಾಗಳು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದಿದ್ದಾರೆ.
ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆ ಎತ್ತಿದ್ದರು.
ಕಾಶ್ಮೀರಿ ಪಂಡಿತರ ಸಂಪ್ರದಾಯದಂತೆ, ಒಬ್ಬ ಮಗ ತನ್ನ ತಂದೆಯ ಮರಣದ ನಂತರ ಪೇಟಾ ಧರಿಸಿ ಕುಟುಂಬದ ಸಂಪ್ರದಾಯವನ್ನು ಮುಂದುವರೆಸುತ್ತಾನೆ! https://t.co/XodFXxoB6r
ತುಂಬಿದ ಸಂಸತ್ತಿನಲ್ಲಿ ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾ 'ನೆಹರೂ ಹೆಸರನ್ನು ಏಕೆ ಇಟ್ಟುಕೊಳ್ಳುವುದಿಲ್ಲ' ಎಂದು ಕೇಳುತ್ತೀರಿ. ಆದರೆ, ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಶಿಕ್ಷೆ ನೀಡಿಲ್ಲ, ಸಂಸತ್ತಿನಿಂದ ಅನರ್ಹಗೊಳಿಸಿಲ್ಲ. ರಾಹುಲ್ ಗಾಂಧಿ ಅವರು, ನಿಜವಾದ ದೇಶಭಕ್ತನಾಗಿ ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ.
-
ತುಂಬಿದ ಸಂಸತ್ತಿನಲ್ಲಿ ಇಡೀ ಕುಟುಂಬ & ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾ 'ನೆಹರೂ ಹೆಸರನ್ನು ಏಕೆ ಇಟ್ಟುಕೊಳ್ಳುವುದಿಲ್ಲ' ಎಂದು ಕೇಳುತ್ತೀರಿ,
— Karnataka Congress (@INCKarnataka) March 24, 2023 " class="align-text-top noRightClick twitterSection" data="
ಆದರೆ ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಶಿಕ್ಷೆ ನೀಡಿಲ್ಲ, ಸಂಸತ್ತಿನಿಂದ ಅನರ್ಹಗೊಳಿಸಿಲ್ಲ.@RahulGandhi ಅವರು ನಿಜವಾದ ದೇಶಭಕ್ತನಾಗಿ ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ. https://t.co/7zxhHvQCbZ
">ತುಂಬಿದ ಸಂಸತ್ತಿನಲ್ಲಿ ಇಡೀ ಕುಟುಂಬ & ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾ 'ನೆಹರೂ ಹೆಸರನ್ನು ಏಕೆ ಇಟ್ಟುಕೊಳ್ಳುವುದಿಲ್ಲ' ಎಂದು ಕೇಳುತ್ತೀರಿ,
— Karnataka Congress (@INCKarnataka) March 24, 2023
ಆದರೆ ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಶಿಕ್ಷೆ ನೀಡಿಲ್ಲ, ಸಂಸತ್ತಿನಿಂದ ಅನರ್ಹಗೊಳಿಸಿಲ್ಲ.@RahulGandhi ಅವರು ನಿಜವಾದ ದೇಶಭಕ್ತನಾಗಿ ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ. https://t.co/7zxhHvQCbZತುಂಬಿದ ಸಂಸತ್ತಿನಲ್ಲಿ ಇಡೀ ಕುಟುಂಬ & ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾ 'ನೆಹರೂ ಹೆಸರನ್ನು ಏಕೆ ಇಟ್ಟುಕೊಳ್ಳುವುದಿಲ್ಲ' ಎಂದು ಕೇಳುತ್ತೀರಿ,
— Karnataka Congress (@INCKarnataka) March 24, 2023
ಆದರೆ ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಶಿಕ್ಷೆ ನೀಡಿಲ್ಲ, ಸಂಸತ್ತಿನಿಂದ ಅನರ್ಹಗೊಳಿಸಿಲ್ಲ.@RahulGandhi ಅವರು ನಿಜವಾದ ದೇಶಭಕ್ತನಾಗಿ ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ. https://t.co/7zxhHvQCbZ
ನಿಮ್ಮ ಗೆಳೆಯ ಅದಾನಿ ದೇಶದ ಸಂಸತ್ತಿಗಿಂತ ಶ್ರೇಷ್ಠರೇ?' ಎಂದು ಅವರ ಲೂಟಿಯ ಬಗ್ಗೆ ಪ್ರಶ್ನಿಸಿದಾಗ ನೀವು ವಿಚಲಿತರಾದಿರಿ. ನೀವು ನಮ್ಮನ್ನು ಕುಟುಂಬವಾದಿಗಳು ಎನ್ನುತ್ತೀರಿ. ನೆನಪಿರಲಿ, ಇದೇ ಕುಟುಂಬ ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ತಮ್ಮ ರಕ್ತವನ್ನು ನೀರಿನಂತೆ ಹರಿಸಿದೆ.
-
ನೀವು ಯಾರನ್ನು ಮುಗಿಸಲು ಹೊರಟಿದ್ದೀರೋ ಅದೇ ಕುಟುಂಬ ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸಿದೆ, ತಲೆಮಾರುಗಳಿಂದ ಸತ್ಯದ ಪರ ಹೋರಾಡುತ್ತಿದೆ.
— Karnataka Congress (@INCKarnataka) March 24, 2023 " class="align-text-top noRightClick twitterSection" data="
ನಮ್ಮ ನರನಾಡಿಗಳಲ್ಲಿ ಹರಿವ ನೆತ್ತರಿನ ವಿಶೇಷತೆಯದು.
ಏನು ಬೇಕಾದರೂ ಮಾಡಿಕೊಳ್ಳಿ, ನಿಮ್ಮಂತಹ ಹೇಡಿ, ಅಧಿಕಾರದಾಹಿ, ಸರ್ವಾಧಿಕಾರಿಯ ಮುಂದೆ ಎಂದೂ ತಲೆಬಾಗಿಲ್ಲ ಮತ್ತು ತಲೆಬಾಗುವುದೂ ಇಲ್ಲ. https://t.co/AE9vj3llkm
">ನೀವು ಯಾರನ್ನು ಮುಗಿಸಲು ಹೊರಟಿದ್ದೀರೋ ಅದೇ ಕುಟುಂಬ ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸಿದೆ, ತಲೆಮಾರುಗಳಿಂದ ಸತ್ಯದ ಪರ ಹೋರಾಡುತ್ತಿದೆ.
— Karnataka Congress (@INCKarnataka) March 24, 2023
ನಮ್ಮ ನರನಾಡಿಗಳಲ್ಲಿ ಹರಿವ ನೆತ್ತರಿನ ವಿಶೇಷತೆಯದು.
ಏನು ಬೇಕಾದರೂ ಮಾಡಿಕೊಳ್ಳಿ, ನಿಮ್ಮಂತಹ ಹೇಡಿ, ಅಧಿಕಾರದಾಹಿ, ಸರ್ವಾಧಿಕಾರಿಯ ಮುಂದೆ ಎಂದೂ ತಲೆಬಾಗಿಲ್ಲ ಮತ್ತು ತಲೆಬಾಗುವುದೂ ಇಲ್ಲ. https://t.co/AE9vj3llkmನೀವು ಯಾರನ್ನು ಮುಗಿಸಲು ಹೊರಟಿದ್ದೀರೋ ಅದೇ ಕುಟುಂಬ ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸಿದೆ, ತಲೆಮಾರುಗಳಿಂದ ಸತ್ಯದ ಪರ ಹೋರಾಡುತ್ತಿದೆ.
— Karnataka Congress (@INCKarnataka) March 24, 2023
ನಮ್ಮ ನರನಾಡಿಗಳಲ್ಲಿ ಹರಿವ ನೆತ್ತರಿನ ವಿಶೇಷತೆಯದು.
ಏನು ಬೇಕಾದರೂ ಮಾಡಿಕೊಳ್ಳಿ, ನಿಮ್ಮಂತಹ ಹೇಡಿ, ಅಧಿಕಾರದಾಹಿ, ಸರ್ವಾಧಿಕಾರಿಯ ಮುಂದೆ ಎಂದೂ ತಲೆಬಾಗಿಲ್ಲ ಮತ್ತು ತಲೆಬಾಗುವುದೂ ಇಲ್ಲ. https://t.co/AE9vj3llkm
ನೀವು ಯಾರನ್ನು ಮುಗಿಸಲು ಹೊರಟಿದ್ದೀರೋ ಅದೇ ಕುಟುಂಬ ದೇಶದ ಜನರ ಧ್ವನಿಯನ್ನು ಗಟ್ಟಿಗೊಳಿಸಿದೆ, ತಲೆಮಾರುಗಳಿಂದ ಸತ್ಯದ ಪರ ಹೋರಾಡುತ್ತಿದೆ. ನಮ್ಮ ನರನಾಡಿಗಳಲ್ಲಿ ಹರಿವ ನೆತ್ತರಿನ ವಿಶೇಷತೆಯದು. ಏನು ಬೇಕಾದರೂ ಮಾಡಿಕೊಳ್ಳಿ, ನಿಮ್ಮಂತಹ ಹೇಡಿ, ಅಧಿಕಾರದಾಹಿ, ಸರ್ವಾಧಿಕಾರಿಯ ಮುಂದೆ ಎಂದೂ ತಲೆಬಾಗಿಲ್ಲ ಮತ್ತು ತಲೆಬಾಗುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
-
#WATCH | Congress workers in Lucknow detained during protest against the disqualification of Rahul Gandhi as member of Parliament pic.twitter.com/VKMfVa2xIo
— ANI UP/Uttarakhand (@ANINewsUP) March 24, 2023 " class="align-text-top noRightClick twitterSection" data="
">#WATCH | Congress workers in Lucknow detained during protest against the disqualification of Rahul Gandhi as member of Parliament pic.twitter.com/VKMfVa2xIo
— ANI UP/Uttarakhand (@ANINewsUP) March 24, 2023#WATCH | Congress workers in Lucknow detained during protest against the disqualification of Rahul Gandhi as member of Parliament pic.twitter.com/VKMfVa2xIo
— ANI UP/Uttarakhand (@ANINewsUP) March 24, 2023
ಲಕ್ನೋದಲ್ಲಿ ಕಾರ್ಯಕರ್ತರ ಪ್ರತಿಭಟನೆ: ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಲಕ್ನೋದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.
ಇದನ್ನೂ ಓದಿ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ರಾಹುಲ್ ಸಂಸತ್ ಸದಸ್ಯತ್ವಕ್ಕೆ ತೂಗುಗತ್ತಿಯೇ?