ETV Bharat / bharat

ಕಾಂಗ್ರೆಸ್ 'ಚಿಂತನ್ ಶಿಬಿರ' ಇಂದು ಸಮಾಪನ; ಮೈಕೊಡವಿ ಎದ್ದು ನಿಲ್ಲಲು ಕಾಂಗ್ರೆಸ್‌ ರಣತಂತ್ರ - ಉದಯ್‌ಪುರ್‌

ಕಾಂಗ್ರೆಸ್‌ ಚಿಂತನ್ ಶಿಬಿರವು 9 ವರ್ಷಗಳ ಬಿಡುವಿನ ಬಳಿಕ ಇದೀಗ ಉದಯ್‌ಪುರದಲ್ಲಿ ನಡೆಯುತ್ತಿದೆ. ದೇಶಾದ್ಯಂತ 430 ಕ್ಕೂ ಹೆಚ್ಚು ಪ್ರಮುಖ ನಾಯಕರು ಶಿಬಿರದಲ್ಲಿ ಪಾಲ್ಗೊಂಡಿದ್ದು, ಮುಖ್ಯವಾದ 6 ನಿರ್ಣಯಗಳನ್ನು ಪಕ್ಷದ ತಜ್ಞರ ಸಮಿತಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದೆ.

ಚಿಂತನ್ ಶಿಬಿರ
ಚಿಂತನ್ ಶಿಬಿರ
author img

By

Published : May 15, 2022, 11:12 AM IST

ಉದಯ್‌ಪುರ್‌(ರಾಜಸ್ಥಾನ): ಕಾಂಗ್ರೆಸ್ ಹಮ್ಮಿಕೊಂಡಿರುವ ಮೂರು ದಿನಗಳ ಚಿಂತನ್‌ ಶಿಬಿರ ಇಂದು ಸಮಾಪನಗೊಳ್ಳುತ್ತಿದೆ. ಪಕ್ಷದೊಳಗೆ ಗುರುತರ ಬದಲಾವಣೆ ಹಾಗು 2024ರ ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳ್ಳುತ್ತಿದ್ದು, ನೀಲನಕ್ಷೆ ರೂಪಿಸುತ್ತಿದೆ. ಮುಖ್ಯವಾಗಿ, ಯುವ ಜನತೆ, ಎಸ್‌ಸಿ,ಎಸ್‌ಟಿ, ಒಬಿಸಿ ಹಾಗು ಅಲ್ಪಸಂಖ್ಯಾತರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ, ಒಂದು ಕುಟುಂಬ ಒಂದು ಟಿಕೆಟ್ ನಿಯಮ, ಯೂತ್‌ ಕಾಂಗ್ರೆಸ್‌ ಮತ್ತು ಎನ್‌ಎಸ್‌ಯುಐ ಆಂತರಿಕ ಚುನಾವಣೆ, ರೈತರಿಗೆ ಕನಿಷ್ಠ ಸಾಮಾನ್ಯ ಬೆಂಬಲ ಬೆಲೆಗೆ ಕಾನೂನಾತ್ಮಕ ಬಲ, ಸಂಸದೀಯ ಪಕ್ಷದ ಮಂಡಳಿ ರಚನೆ ಶಿಬಿರ ಒತ್ತು ನೀಡಿದೆ.

ಈ ಕುರಿತಾಗಿ ಪಕ್ಷದ 6 ಸದಸ್ಯರ ಸಮಿತಿ ನೀಡಿರುವ ಶಿಫಾರಸುಗಳನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(CWC) ವಿಮರ್ಶೆಗೊಳಪಡಿಸಿ ಅಂತಿಮಗೊಳಿಸಲಿದೆ. ಚಿಂತನ್ ಶಿಬಿರವು 9 ವರ್ಷಗಳ ಬಿಡುವಿನ ಬಳಿಕ ಇದೀಗ ಉದಯ್‌ಪುರದಲ್ಲಿ ನಡೆಯುತ್ತಿದೆ. ದೇಶಾದ್ಯಂತ 430 ಕ್ಕೂ ಹೆಚ್ಚು ಪ್ರಮುಖ ನಾಯಕರು ಶಿಬಿರದಲ್ಲಿ ಪಾಲ್ಗೊಂಡಿದ್ದು, ಮುಖ್ಯವಾದ 6 ನಿರ್ಣಯಗಳನ್ನು ಪಕ್ಷದ ತಜ್ಞರ ಸಮಿತಿ ಕಾಂಗ್ರೆಸ್‌ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದೆ.

ಈ ಶಿಫಾರಸುಗಳ ಪೈಕಿ ಮೊದಲ ಭಾಗದಲ್ಲಿ, ಕಾರ್ಯಕಾರಿ ಸಮಿತಿಯು ಕರಡು ನಿರ್ಣಯಗಳನ್ನು ಚರ್ಚಿಸಿ ಪಕ್ಷದ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದುಕೊಳ್ಳಲಿದೆ. ಈ ಪೈಕಿ, ಯುವ ಜನತೆ, ಎಸ್‌-ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಖಾಸಗಿ ವಲಯದಲ್ಲಿ ಶೇ 50ರಷ್ಟು ಮೀಸಲಾತಿ, ಒಂದು ಕುಟುಂಬ ಒಂದು ಟಿಕೆಟ್‌ ಫಾರ್ಮುಲಾ, ಪಕ್ಷದ ನಾಯಕರಿಗೆ ಮಧ್ಯಂತರ ಕಾಲವಧಿ(ವಿರಾಮ), ಯೂತ್‌ ಕಾಂಗ್ರೆಸ್‌ ಮತ್ತು ಎನ್‌ಎಸ್‌ಯುಐ ಆಂತರಿಕ ಚುನಾವಣೆ ಮತ್ತು ರೈತರ ಎಂಎಸ್‌ಪಿಗೆ ಕಾನೂನಿನ ಬಲ ಮತ್ತು ಕೊನೆಯದಾಗಿ ಸಂಸದೀಯ ಮಂಡಳಿ ರಚನೆಗೆ ಮಹತ್ವ ನೀಡಲಾಗಿದೆ.

ಪಕ್ಷದಲ್ಲಿ ಸುಧಾರಣೆ, ಕಾರ್ಯ ನಿರ್ವಹಣಾ ಶೈಲಿ ಬದಲಿಸುವ ಸಂಬಂಧ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಈಗಾಗಲೇ ಇಂಗಿತ ವ್ಯಕ್ತಪಡಿಸಿದ್ದು, ಆಂತರಿಕ ಬದಲಾವಣೆ ನಿಟ್ಟಿನಲ್ಲಿ ಅಚ್ಚರಿಯ ನಿರ್ಧಾರ ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ. 'ಪಕ್ಷವು ನಾಯಕರಿಗೆ ಬಹಳಷ್ಟು ಕೊಟ್ಟಿದೆ ಈಗ ಅವರು ಪಕ್ಷಕ್ಕೆ ಅದನ್ನು ಮರಳಿ ನೀಡುವ ಸಮಯ ಬಂದಿದೆ' ಎಂದು ಅವರು ಸೂಚ್ಯವಾಗಿ ಹೇಳಿದ್ದನ್ನು ಇಲ್ಲಿ ನೆನಪಿಸಬಹುದು.

ಇದನ್ನೂ ಓದಿ: ನ್ಯಾಯ ನಿರಾಕರಣೆ ಅಂತಿಮವಾಗಿ ಅರಾಜಕತೆಗೆ ದಾರಿ ಮಾಡಿಕೊಡಬಹುದು: ಸಿಜೆಐ ರಮಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.