ಅಹಮದಾಬಾದ್(ಗುಜರಾತ್): ಭಾರತದಲ್ಲಿ ದೀರ್ಘಕಾಲ ಅಧಿಕಾರ ನಡೆಸಿದವರು, ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಎಂದಿಗೂ ಆಸಕ್ತಿ ವಹಿಸಲಿಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಗುಜರಾತ್ನಲ್ಲಿ ಆಯೋಜನೆಗೊಂಡಿದ್ದ ಗೌರವ್ ಅಭಿಯಾನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
-
#WATCH | Prime Minister Narendra Modi gets a traditional welcome by tribals in Gujarat's Chikhli. pic.twitter.com/Q1e9RJ6e4O
— ANI (@ANI) June 10, 2022 " class="align-text-top noRightClick twitterSection" data="
">#WATCH | Prime Minister Narendra Modi gets a traditional welcome by tribals in Gujarat's Chikhli. pic.twitter.com/Q1e9RJ6e4O
— ANI (@ANI) June 10, 2022#WATCH | Prime Minister Narendra Modi gets a traditional welcome by tribals in Gujarat's Chikhli. pic.twitter.com/Q1e9RJ6e4O
— ANI (@ANI) June 10, 2022
ದೇಶದಲ್ಲಿನ ಬುಡಕಟ್ಟು ಪ್ರದೇಶಗಳ ಅಭಿವೃದ್ದಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಹೀಗಾಗಿ, ಕಾಂಗ್ರೆಸ್ ಯಾವತ್ತೂ ಅದರ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂದ ನಮೋ, ಕೇವಲ ಮತಕ್ಕಾಗಿ ಅಥವಾ ಚುನಾವಣೆಗೋಸ್ಕರ ನಾವು ಅಭಿವೃದ್ಧಿ ಕಾರ್ಯ ಪ್ರಾರಂಭಿಸುವುದಿಲ್ಲ. ದೇಶದ ಜನರ ಜೀವನ ಮಟ್ಟ ಸುಧಾರಿಸುವುದು ನಮ್ಮ ಮುಖ್ಯ ಗುರಿ ಎಂದರು.
ಇದನ್ನೂ ಓದಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಐವರು ಪ್ರಯಾಣಿಕರ ದುರ್ಮರಣ, ಓರ್ವ ಗಾಯ
ಬರೋಬ್ಬರಿ 3050 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನರೇಂದ್ರ ಮೋದಿ, ಗಿರಿ ಜನರು ವಾಸ ಮಾಡುವ ಅರಣ್ಯ ಪ್ರದೇಶಗಳಿಗೆ ಲಸಿಕೆ ತಲುಪಿಸಲು ತಿಂಗಳ ಕಾಲ ಬೇಕಾಗುತ್ತಿತ್ತು. ಆದರೆ, ಅವುಗಳನ್ನ ಆದಷ್ಟು ಬೇಗ ಮುಟ್ಟಿಸುವ ಕೆಲಸ ಸಹ ಮಾಡಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಗುಜರಾತ್ ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸ ಮಾಡ್ತಿದೆ ಎಂದು ನಮೋ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಗುಜರಾತ್ಗೆ ಆಗಮಿಸುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಾಪಿ, ನವಸಾರಿ, ಸೂರತ್ ಜಿಲ್ಲೆಗಳ ನಿವಾಸಿಗಳಿಗೆ 961 ಕೋಟಿ ರೂಪಾಯಿ ಮೊತ್ತದ 13 ನೀರು ಸರಬರಾಜು ಯೋಜನೆಗಳಿಗೆ ಭೂಮಿ ಪೂಜೆ ನೇರವೇರಿಸಲಿದ್ದು, ನವಸಾರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವೈದ್ಯಕೀಯ ಕಾಲೇಜ್ನ ಭೂಮಿ ಪೂಜೆ ಸಹ ನಡೆಸಲಿದ್ದಾರೆ.