ETV Bharat / bharat

ಆಂಧ್ರದಲ್ಲಿ ಭಾರತ್​ ಜೋಡೋ ಯಾತ್ರೆ..ಆದೋನಿಯ ಭವಾನಿ ದೇಗುಲದಲ್ಲಿ ರಾಹುಲ್​ ಪೂಜೆ - Bharat Jodo Yatra

ಭಾರತ್​ ಜೋಡೋ ಯಾತ್ರೆ ಆಂಧ್ರಪ್ರದೇಶದಲ್ಲಿ ಸಾಗುತ್ತಿದ್ದು, ದಾರಿ ಮಧ್ಯೆಯೇ ಆದೋನಿಯ ಭವಾನಿ ದೇಗುಲಕ್ಕೆ ರಾಹುಲ್​ ಗಾಂಧಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

congress-mp-rahul-gandhi
ಆದೋನಿಯ ಭವಾನಿ ದೇಗುಲದಲ್ಲಿ ರಾಹುಲ್​ ಪೂಜೆ
author img

By

Published : Oct 19, 2022, 12:51 PM IST

ಆದೋನಿ, ಆಂಧ್ರಪ್ರದೇಶ: ಭಾರತ್​ ಜೋಡೋ ಯಾತ್ರೆಯ ಜೊತೆಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಟೆಂಪಲ್​ ರನ್​ ಕೂಡ ಮುಂದುವರಿದಿದೆ. ಯಾತ್ರೆ ಕೇರಳದಲ್ಲಿ ಆರಂಭವಾದಂದಿನಿಂದ ರಾಹುಲ್​ ಅವರು ಒಂದಲ್ಲಾ ಒಂದು ದೇಗುಲಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.

ಪ್ರಸ್ತುತ ಆಂಧ್ರಪ್ರದೇಶದಲ್ಲಿ ಭಾರತ್​ ಜೋಡೋ ಯಾತ್ರೆ ಸಾಗುತ್ತಿದೆ. ಇಂದು ಆದೋನಿ ನಗರಕ್ಕೆ ಕಾಲಿಟ್ಟಿದೆ. ಇದೇ ವೇಳೆ ಇಲ್ಲಿನ ಶ್ರೀಗಂಗಾ ಭವಾನಿ ದೇವಸ್ಥಾನಕ್ಕೆ ರಾಹುಲ್​ ಗಾಂಧಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿರುವ ನಾಯಕರು ಕೂಡ ದೇವಸ್ಥಾನಕ್ಕೆ ಎಡತಾಕಿದ್ದಾರೆ.

ಓದಿ: ಎಐಸಿಸಿ ಅಧ್ಯಕ್ಷ ಮತದಾನ ವೇಳೆ ಖರ್ಗೆ ಪರ ಪ್ರಚಾರ.. ಶಶಿ ತರೂರ್​ ಬಣದಿಂದ ನಿಯಮ ಉಲ್ಲಂಘನೆ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.