ETV Bharat / bharat

ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸಂಬಂಧಿ.. ಬಿಡುಗಡೆಗಾಗಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕಿ!

ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿ ಪೊಲೀಸರ ಕೈಯಲ್ಲಿ ಸಿಲುಕಿಕೊಂಡಿದ್ದವರ ಬಿಡುಗಡೆಗಾಗಿ ಕಾಂಗ್ರೆಸ್ ಶಾಸಕಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Congress MLA Meena Kanwar
Congress MLA Meena Kanwar
author img

By

Published : Oct 19, 2021, 3:27 PM IST

ಜೋಧಪುರ್​​​(ರಾಜಸ್ಥಾನ): ಕಂಠಪೂರ್ತಿ ಮಧ್ಯಪಾನ ಮಾಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೆಲವರ ಬಿಡುಗಡೆಯಾಗಿ ಶಾಸಕಿ ಪೊಲೀಸ್ ಠಾಣೆಯಲ್ಲಿ ಗಂಡನೊಂದಿಗೆ ಧರಣಿ ನಡೆಸಿರುವ ಘಟನೆ ನಡೆದಿದೆ. ಕಾಂಗ್ರೆಸ್​​ ಶಾಸಕಿ ಸಂಬಂಧಿಕರು ವಾಹನ ಚನಾವಣೆ ಮಾಡಿ ಸಿಕ್ಕಿಬಿದ್ದಿದ್ದು, ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಠಾಣೆಗೆ ಆಗಮಿಸಿರುವ ಶಾಸಕಿ ಮೀನಾ ಕನ್ವರ್ ಮತ್ತು ಆಕೆಯ ಪತಿ ಠಾಣೆಯಲ್ಲಿ ಧರಣಿ ನಡೆಸಿದರು.

ಬಿಡುಗಡೆಗಾಗಿ ಪೊಲೀಸ್ ಠಾಣೆಯಲ್ಲಿ ಶಾಸಕಿ ಧರಣಿ

ರಾಜಸ್ಥಾನದ ಜೋಧಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್​ ಶಾಸಕಿ ಮೀನಾ ಕನ್ವರ್​ ಮತ್ತು ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಾರೆ. ಕುಡಿದು ವಾಹನ ಚಲಾವಣೆ ಮಾಡಿ, ಬಂಧನಕ್ಕೊಳಗಾದವರ ಬಿಡುಗಡೆ ಮಾಡುವಂತೆ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಜೊತೆಗೆ ಎಲ್ಲ ಮಕ್ಕಳು ಕುಡಿಯುತ್ತಾರೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್​.. ಪ್ರಿಯಾಂಕಾ ಘೋಷಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಸಕಿ ಮೀನಾ, ನನ್ನ ಸಂಬಂಧಿಕರ ಮಗ ಮತ್ತು ಆತನ ಜೊತೆಗಿದ್ದ ಕೆಲವರು ಕುಡಿದು ಕಾರು ಡ್ರೈವ್ ಮಾಡಿ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಠಾಣೆಗೆ ಆಗಮಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ, ಪೊಲೀಸರು ಒಪ್ಪಿಲ್ಲ. ಜೊತೆಗೆ ನನ್ನ ಗಂಡನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಸಂಬಂಧಪಟ್ಟಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇನೆಂದು ಶಾಸಕಿ ತಿಳಿಸಿದ್ದು, ಪೊಲೀಸ್​ ವರಿಷ್ಠಾಧಿಕಾರಿ ಸೂಕ್ತ ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.