ಬನಸ್ಕಾಂತ(ಗುಜರಾತ್): ಭಾನುವಾರ ರಾತ್ರಿ ಕಾಂಗ್ರೆಸ್ ಶಾಸಕ ಕಾಂತಿ ಖಾರಾಡಿ ಮೇಲೆ ಸಮಾಜಘಾತುಕರಿಂದ ಹಲ್ಲೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕಾಂತಿ ಖಾರಾಡಿ ಅವರ ಕಾರು ತಡೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಶಾಸಕ ಕಾಂತಿ ಖಾರಾಡಿ ಅವರ ಕಾರು ಪಲ್ಟಿಯಾಗಿದೆ. ಘಟನೆ ನಡೆದಿರುವುದು ದಂತಾ ಬೋರ್ಡಿಯಾಲ ಬೊಮ್‌ದಾರ ಪ್ರದೇಶದಲ್ಲಿ. ನಡೆದಿರುವ ದಾಳಿಯಲ್ಲಿ ಸುಮಾರು 7 ರಿಂದ 8 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕ ಕಾಂತಿ ಖಾರಾಡಿ ದಾಳಿಗೆ ಒಳಗಾದಾಗ ಸ್ಥಳದಿಂದ ಕಾಲ್ಕಿತ್ತಿದ್ದು, ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದರು. ದಾಳಿ ನಡೆದ 4 ಗಂಟೆಗಳ ನಂತರ ಶಾಸಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ.
![Kanti Kharadi allegedly attacked by BJP attack on Congress MLA Kanti Kharadi Kharadi allegedly attacked by BJP in Gujarat ಖಾರಾಡಿ ಮೇಲೆ ಸಮಾಜ ವಿರೋಧಿ ಶಕ್ತಿಗಳ ದಾಳಿ ಬನಸ್ಕಾಂತ ಜಿಲ್ಲೆಯ ದಂತಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಶಾಸಕ ಕಾಂತಿ ಖಾರಾಡಿ ದಂತ ಶಾಸಕ ಮೇಲೆ ದಾಳಿ ಬಿಜೆಪಿ ಗೂಂಡಾಗಳ ಕೃತ್ಯ ಎಂದ ರಾಹುಲ್ ಗಾಂಧಿ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಕಾಂತಿ ಖಾರಾಡಿ ಮೇಲೆ ಸಮಾಜಘಾತುಕರಿಂದ ಹಲ್ಲೆ ಖಾರಾಡಿ ಅವರ ಕಾರು ತಡೆದು ಹಲ್ಲೆ](https://etvbharatimages.akamaized.net/etvbharat/prod-images/whatsapp-image-2022-12-05-at-60436-am_0512newsroom_1670203831_957.jpeg)
ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರ ನಾಪತ್ತೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಮತ್ತು ಅವರ ಗೂಂಡಾಗಳು ದಂತಾ ಶಾಸಕ ಕಾಂತಿ ಖರಾಡಿ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿ ಪೂರ್ವ ನಿಯೋಜಿತ ಪಿತೂರಿ ಎಂದು ಬಣ್ಣಿಸಿದ್ದಾರೆ. ಬಿಜೆಪಿ ಸಂವಿಧಾನವನ್ನು ನಾಶ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.