ETV Bharat / bharat

ಆಸ್ಕರ್ ಫರ್ನಾಂಡಿಸ್ ಪತ್ನಿಗೆ ಸೋನಿಯಾ ಗಾಂಧಿ ಸಾಂತ್ವನ: ಗದ್ಗದಿತರಾದ ಕೈ ನಾಯಕಿ-ಆಡಿಯೋ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಆಸ್ಕರ್​ ಫರ್ನಾಂಡಿಸ್​ ನಿಧನರಾಗಿದ್ದು, ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಸಂತಾಪ ಸೂಚಿಸುವ ವೇಳೆ ಗದ್ಗದಿತರಾಗಿದ್ದಾರೆ.

Congress leader Sonia Gandhi Audio about Oscar Fernandes
ಆಸ್ಕರ್ ಫರ್ನಾಂಡಿಸ್ ಪತ್ನಿಗೆ ಸೋನಿಯಾ ಗಾಂಧಿ ಸಾಂತ್ವನ ಆಡಿಯೋ
author img

By

Published : Sep 13, 2021, 5:03 PM IST

Updated : Sep 13, 2021, 6:10 PM IST

ನವದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್​ ಫರ್ನಾಂಡಿಸ್​ ನಿಧನಕ್ಕೆ ದೂರವಾಣಿ ಮೂಲಕ ಸಂತಾಪ ಸೂಚಿಸುವ ವೇಳೆ ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಗದ್ಗದಿತರಾಗಿದ್ದಾರೆ.

ಆಸ್ಕರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರು ಆಸ್ಕರ್ ಪತ್ನಿ ಬ್ಲೋಸಂ ಫರ್ನಾಂಡಿಸ್ ಅವರಿಗೆ ಮೊಬೈಲ್ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

"ಆಸ್ಕರ್ ಎಲ್ಲರ ಪ್ರೀತಿಪಾತ್ರರು. ನಿಮ್ಮ ದುಃಖದ ಜತೆ ನಾವಿದ್ದೇವೆ" ಎಂದು ಸೋನಿಯಾ ಧೈರ್ಯ ತುಂಬಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಪತ್ನಿಗೆ ಸೋನಿಯಾ ಗಾಂಧಿ ಸಾಂತ್ವನ

ಈ ವೇಳೆ ಬ್ಲೋಸಂ ಫರ್ನಾಂಡಿಸ್, ಎರಡು ದಿನಗಳ ಬಳಿಕ ಆಸ್ಕರ್​ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುವುದು. ಅಲ್ಲಿಗೆ ತಾವು ಹಾಗೂ ರಾಹುಲ್ ಗಾಂಧಿ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪಾರ್ಥಿವ ಶರೀರವನ್ನು ಉಡುಪಿ ಹಾಗೂ ಮಂಗಳೂರು ಕಾಂಗ್ರೆಸ್ ಕಚೇರಿಗೆ ಕೊಂಡೊಯ್ದು ಬಳಿಕ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಅಂತಿಮ ದರ್ಶನಕ್ಕಾಗಿ ಕೊಂಡೊಯ್ಯಲು ಮಗಳು ನಿರ್ಧರಿಸಿದ್ದಾಳೆ ಎಂದು ಬ್ಲೋಸಂ ಫರ್ನಾಂಡಿಸ್ ದೂರವಾಣಿ ಕರೆಯಲ್ಲಿ ಸೋನಿಯಾ ಗಾಂಧಿಗೆ ತಿಳಿಸಿದ್ದಾರೆ.

'"ನಿಮ್ಮ ನಿರ್ಧಾರವೇ ನಮ್ಮದು. ನಾವೆಲ್ಲಾ ನಿಮ್ಮ ಜತೆಗಿದ್ದೇವೆ" ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದೊಂದು ತಿಂಗಳಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: 5 ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ, ಕೃಷಿಯಲ್ಲೂ ಎತ್ತಿದ 'ಕೈ': ಇಲ್ಲಿದೆ ಆಸ್ಕರ್ ಫರ್ನಾಂಡಿಸ್ ಜೀವನ ಚಿತ್ರಣ

Last Updated : Sep 13, 2021, 6:10 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.