ETV Bharat / bharat

ಕೇಂದ್ರ ಸರ್ಕಾರದ ಒತ್ತಡದಲ್ಲಿ ರಾಮಮಂದಿರ ತೀರ್ಪು: ಕಾಂಗ್ರೆಸ್​ನ ರಶೀದ್ ಅಲ್ವಿ ಆರೋಪ - central govt pressure on Ayodhya verdict

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ ಜಡ್ಜ್​ ನೇಮಕ- ಕರ್ನಾಟಕ ಮೂಲದ ಅಬ್ದುಲ್ ನಜೀರ್ ನೇಮಕ- ರಾಷ್ಟ್ರಪತಿಗಳ ನಿರ್ಧಾರ ವಿಪಕ್ಷಗಳ ಟೀಕೆಗೆ ಗುರಿ- ಒತ್ತಡದಲ್ಲಿ ಅಯೋಧ್ಯೆ ರಾಮಮಂದಿರ ತೀರ್ಪು- ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಆರೋಪ

congress-leader-rashid-alvi
ಕಾಂಗ್ರೆಸ್​ನ ರಶೀದ್ ಅಲ್ವಿ ಆರೋಪ
author img

By

Published : Feb 13, 2023, 4:22 PM IST

ನವದೆಹಲಿ: ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಕರ್ನಾಟಕ ಮೂಲದ ಎಸ್. ಅಬ್ದುಲ್ ನಜೀರ್ ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದು, ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಯೋಧ್ಯೆ ರಾಮಜನ್ಮಭೂಮಿ ತೀರ್ಪಿನ ಜಡ್ಜ್​ಗಳಲ್ಲಿ ಒಬ್ಬರಾಗಿದ್ದ ನಜೀರ್ ಅವರಿಗೆ ರಾಜಕೀಯ ಹುದ್ದೆ ನೀಡಿದ್ದು ಮತ್ತು ಅಯೋಧ್ಯೆ ತೀರ್ಪನ್ನು ತಳುಕು ಹಾಕಿ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಅಯೋಧ್ಯೆ ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ತೀರ್ಪಿನ ಮೇಲೆಯೇ ಜನರು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಸಂವಿಧಾನದ 50 ನೇ ವಿಧಿಯ ಅಡಿಯಲ್ಲಿ ನ್ಯಾಯಾಂಗವು ಕಾರ್ಯಾಂಗದಿಂದ ಸ್ವತಂತ್ರವಾಗಿರಬೇಕು ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದು ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಕಡಿಮೆ ಮಾಡಿದೆ. ಆಡಳಿತಾರೂಢ ಬಿಜೆಪಿ ದೇಶವನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುತ್ತಿದೆ ಎಂದು ಅಲ್ವಿ ಆರೋಪಿಸಿದರು. ಬಿಜೆಪಿಯು ಸಮಾಜವನ್ನು ವಿಭಜಿಸುತ್ತಿದೆ. ತುಷ್ಟೀಕರಣ ರಾಜಕಾರಣದ ಮೂಲಕ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಅ್ಲಪಸಂಖ್ಯಾತರಿಗೆ ನ್ಯಾಯಯುತವಾದ ಪಾಲು ಕೂಡ ಸರ್ಕಾರ ನೀಡಿಲ್ಲ. ನ್ಯಾಯಮೂರ್ತಿ ನಜೀರ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದು ನ್ಯಾಯಾಂಗದ ಮೇಲಿನ ನಂಬಿಕೆಯನ್ನೇ ಕುಗ್ಗಿಸುತ್ತಿದೆ ಎಂದು ಅಲ್ವಿ ಹೇಳಿದರು.

"ನ್ಯಾಯಾಧೀಶರಿಗೆ ಸರ್ಕಾರಿ ಹುದ್ದೆಗಳನ್ನು ನೀಡುವುದು ದುರದೃಷ್ಟಕರ. ಸರ್ಕಾರ ಶೇ.50 ರಷ್ಟು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ರಾಜಕೀಯ ಹುದ್ದೆಗಳಿಗೆ ನೇಮಿಸುತ್ತಿದೆ. ಇದು ಉತ್ತಮವಾದ ಬೆಳಗಣಿಗೆಯಲ್ಲ. ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ರಂಜನ್​ ಗೊಗೋಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ. ಈಗ ನಜೀರ್ ಅವರಿಗೆ ರಾಜ್ಯಪಾಲ ಹುದ್ದೆ ನೀಡಲಾಗಿದೆ. ಇದು ನ್ಯಾಯಾಂಗದ ಮೇಲೆಯೇ ಅನುಮಾನ ಮೂಡಿಸುತ್ತಿದೆ ಎಂದು ಆಪಾದಿಸಿದರು.

ರಾಜ್ಯಸಭೆಗೆ ರಂಜನ್​ ಗೊಗೋಯ್​: ಐತಿಹಾಸಿಕ ಅಯೋಧ್ಯೆ ತೀರ್ಪಿನ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಿರುವುದನ್ನು ಇದೇ ವೇಳೆ ನೆನಪಿಸಿಕೊಂಡ ಕಾಂಗ್ರೆಸ್ ನಾಯಕ ಅಲ್ವಿ, ಸರ್ಕಾರವು ನ್ಯಾಯಾಂಗವನ್ನು ಸಂಪೂರ್ಣವಾಗಿ ಸ್ವತಂತ್ರವಾಗಿ ಬಿಡಬೇಕು. ನಿವೃತ್ತಿ ಬಳಿಕ ಜಡ್ಜ್​ಗಳಿಗೆ ರಾಜಕೀಯ ಹುದ್ದೆ ನೀಡುವುದು ನ್ಯಾಯಾಂಗದ ಮೇಲೆ ಜನರ ಅಪನಂಬಿಕೆ ಉಂಟಾಗಲು ಕಾರಣವಾಗುತ್ತದೆ ಎಂದು ಹೇಳಿದರು.

ವಿಪಕ್ಷಗಳ ಆಕ್ಷೇಪಕ್ಕೆ ಕಾರಣವಿದು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಿ ಭಾನುವಾರ ಅಧಿಸೂಚನೆ ಹೊರಡಿಸಿದ್ದಾರೆ. ಜನವರಿ 4, 2023 ರಂದು ನ್ಯಾಯಮೂರ್ತಿ ನಜೀರ್ ಅವರು ನಿವೃತ್ತರಾಗಿದ್ದರು. ಇವರು ದೇಶ ಕಂಡ ಐತಿಹಾಸಿಕ ತೀರ್ಪುಗಳಾದ ತ್ರಿವಳಿ ತಲಾಖ್ ಪ್ರಕರಣ, ಅಯೋಧ್ಯೆ ರಾಮಮಂದಿರ ತೀರ್ಪು, ನೋಟು ಅಮಾನ್ಯೀಕರಣ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ನಜೀರ್​ ಅವರು ಜಡ್ಜ್​ ಆಗಿದ್ದರು.

ಓದಿ: ಭಾರತ ವಿಶ್ವ ಗುರುವಾಗಲು ಕರ್ನಾಟಕದಿಂದ ದೊಡ್ಡ ಕೊಡುಗೆ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.