ನವದೆಹಲಿ: ದೇಶದಲ್ಲಿ ಇಂಧನ, ಸಿಲಿಂಡರ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ನಾಯಕ ರಾಹುಲ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನಧನ್ ಯೋಜನೆ ಬಗ್ಗೆ ವಿಡಂಬನಾತ್ಮಕ ಟ್ವೀಟ್ ಮಾಡಿದ್ದಾರೆ.
-
Pradhan Mantri Jan Dhan LOOT Yojana pic.twitter.com/OQPiV4wXTq
— Rahul Gandhi (@RahulGandhi) April 4, 2022 " class="align-text-top noRightClick twitterSection" data="
">Pradhan Mantri Jan Dhan LOOT Yojana pic.twitter.com/OQPiV4wXTq
— Rahul Gandhi (@RahulGandhi) April 4, 2022Pradhan Mantri Jan Dhan LOOT Yojana pic.twitter.com/OQPiV4wXTq
— Rahul Gandhi (@RahulGandhi) April 4, 2022
ಇಂಧನವನ್ನು ಬೈಕ್, ಕಾರು, ಲಾರಿಗಳಿಗೆ ತುಂಬಿಸಿಕೊಳ್ಳಲು ದುಪ್ಪಟ್ಟು ದರ ನೀಡಬೇಕು ಎಂಬುದನ್ನು ತೋರಿಸುವ ರೀತಿಯ ಚಿತ್ರವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಇದೊಂದು ಲೂಟ್ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.
2014 ಕ್ಕೂ ಮೊದಲು ಬೈಕ್ ಇಂಧನಕ್ಕಾಗಿ 714 ರೂಪಾಯಿ ಬಳಸುತ್ತಿದ್ದರೆ, ಈಗ 1,038 ರೂಪಾಯಿ ನೀಡಬೇಕು. ಕಾರಿಗೆ 2,856 ಬದಲಾಗಿ 4,152 ರೂ., ಟ್ರ್ಯಾಕ್ಟರ್ಗೆ 2749 ರಷ್ಟಿದ್ದ ಇಂಧನ ಇದೀಗ 4,563 ರೂ., ಟ್ರಕ್ ಫುಲ್ ಮಾಡಲು 11,456 ರೂ.ಗೆ 19,014 ರೂಪಾಯಿ ನೀಡಬೇಕಿದೆ ಎಂದು ಹೇಳಿದ್ದಾರೆ.
ಓದಿ: ಲಂಕಾ ದಿವಾಳಿ, ಪಾಕ್ನಲ್ಲಿ ರಾಜಕೀಯ ಬಿಕ್ಕಟ್ಟು.. ಪ್ರಧಾನಿ ಭೇಟಿ ಮಾಡಲಿರುವ ಜೈ ಶಂಕರ್