ETV Bharat / bharat

ಕಾಂಗ್ರೆಸ್ ಮಾತ್ರವಲ್ಲ, ಲಕ್ಷಾಂತರ ಜನರು ಭಾರತ್ ಜೋಡೋ ಯಾತ್ರೆ ಅಗತ್ಯ ಮನಗಂಡಿದ್ದಾರೆ: ರಾಹುಲ್​ ಗಾಂಧಿ - ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ನಿಯಂತ್ರಿಸುತ್ತಿತ್ತು

ಆಗ ಒಂದು ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ನಿಯಂತ್ರಿಸುತ್ತಿತ್ತು. ಈಗ 3-4 ಕಂಪನಿಗಳು ಭಾರತವನ್ನು ನಿಯಂತ್ರಿಸುತ್ತಿವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

congress-leader-rahul-gandhi-launch-bharat-jodo-yatra-in-kanniyakumari
ಕಾಂಗ್ರೆಸ್ ಮಾತ್ರವಲ್ಲ, ಲಕ್ಷಾಂತರ ಜನರು ಭಾರತ್ ಜೋಡೋ ಯಾತ್ರೆಯ ಅಗತ್ಯ ಮನಗಂಡಿದ್ದಾರೆ
author img

By

Published : Sep 7, 2022, 7:54 PM IST

ಕನ್ಯಾಕುಮಾರಿ (ತಮಿಳುನಾಡು): ಕಾಂಗ್ರೆಸ್​​ನ ಭಾರತ್ ಜೋಡೋ ಯಾತ್ರೆಯು ಭಾರತದ ಜನರನ್ನು ಧ್ವನಿ ಕೇಳುವ ಗುರಿಯನ್ನು ಹೊಂದಿದೆ. ನಾವು ಜನರ ಧ್ವನಿಯನ್ನು ಹತ್ತಿಕ್ಕಲು ಬಯಸುವುದಿಲ್ಲ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇಂದು ಮಹತ್ವದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಮಾತ್ರವಲ್ಲ, ಲಕ್ಷಾಂತರ ಜನರು ಇಂದು ಭಾರತ್ ಜೋಡೋ ಯಾತ್ರೆಯ ಅಗತ್ಯವನ್ನು ಮನಗಂಡಿದ್ದಾರೆ. ಭಾರತವನ್ನು ಒಗ್ಗೂಡಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಲಕ್ಷಾಂತರ ಜನರು ಭಾವಿಸಿದ್ದಾರೆ. ಜನರನ್ನು ಒಟ್ಟಿಗೆ ಸೇರಿಸುವುದು ಹಾಗೂ ಒಗ್ಗಟ್ಟಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳುವುದೇ ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

  • तिरंगा हमारी एकता और विविधता की पहचान है, हमारा स्वाभिमान है। आज, तिरंगे को हाथों में लेकर #BharatJodoYatra का पहला कदम लिया।

    अभी तो मीलों चलना है, मिलकर अपना भारत जोड़ना है। pic.twitter.com/4Q40M6ByZb

    — Rahul Gandhi (@RahulGandhi) September 7, 2022 " class="align-text-top noRightClick twitterSection" data=" ">

ಕೆಲ ಕಂಪನಿಗಳು ಭಾರತವನ್ನು ನಿಯಂತ್ರಿಸುತ್ತಿವೆ: ಆಗ ಒಂದು ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ನಿಯಂತ್ರಿಸುತ್ತಿತ್ತು. ಈಗ 3-4 ಕಂಪನಿಗಳು ಭಾರತವನ್ನು ನಿಯಂತ್ರಿಸುತ್ತಿವೆ. ಭಾರತವನ್ನು ವಿಭಜಿಸುವ ಮೂಲಕ ಬ್ರಿಟಿಷರು ಆಳಿದಂತೆ ಬಿಜೆಪಿ ಸರ್ಕಾರದ ಆಲೋಚನೆಯೂ ಇದೆ. ಇಂದು ಪ್ರತಿಯೊಂದು ಸಂಸ್ಥೆಯು ಆರ್‌ಎಸ್‌ಎಸ್-ಬಿಜೆಪಿಯಿಂದ ದಾಳಿಗೆ ಒಳಗಾಗಿವೆ. ಭಾರತವನ್ನು ಧಾರ್ಮಿಕ ನೆಲೆ ಹಾಗೂ ಭಾಷೆಗಳಲ್ಲಿ ವಿಭಜಿಸಬಹುದು ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿನವರು ಭಾವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಅದು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತದೆ. ತ್ರಿವರ್ಣ ಧ್ವಜವು ಸುಲಭವಾಗಿ ಬಂದಿಲ್ಲ. ಅದು ಭಾರತೀಯರು ಗಳಿಸಿದ್ದು, ಎಲ್ಲ ಧರ್ಮ ಮತ್ತು ಭಾಷೆಗೆ ತ್ರಿವರ್ಣ ಧ್ವಜ ಸೇರಿದೆ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಧರ್ಮ, ಭಾಷೆಯನ್ನು ಪ್ರತಿನಿಧಿಸುತ್ತದೆ. ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರೆ ಸಾಲದು. ಅದರ ಹಿಂದಿರುವ ವಿಚಾರಗಳನ್ನು ಸಮರ್ಥಿಸಿಕೊಳ್ಳುವುದು ಕೂಡ ಮುಖ್ಯ. ಆದರೆ, ಇಂದು ಈ ಧ್ವಜದ ಮೇಲೆ ದಾಳಿ ನಡೆಯುತ್ತಿದೆ. ಈ ಧ್ವಜವನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿನವರು ತಿಳಿಸಿದುಕೊಂಡಿದ್ದಾರೆ ಎಂದರು.

ದೊಡ್ಡ ವ್ಯಾಪಾರಗಳಿಗೆ ಸಹಾಯವಾಗುವ ನೀತಿಗಳು: ಭಾರತವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲದೇ, ಅತ್ಯಧಿಕ ನಿರುದ್ಯೋಗವನ್ನೂ ಎದುರಿಸುತ್ತಿದೆ. ಬಿಜೆಪಿ ಆಳಿಡತದಲ್ಲಿ ದೇಶವು ದುರಂತದತ್ತ ಸಾಗುತ್ತಿದೆ. ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿದೆ. ಇಂದು ಬೆರಳೆಣಿಕೆಯ ದೊಡ್ಡ ಉದ್ಯಮಗಳು ದೇಶವನ್ನು ನಿಯಂತ್ರಿಸುತ್ತವೆ ಎಂದು ಹೇಳಿದರು.

ಪ್ರಧಾನಿ ತಮಗೆ ಸಹಾಯ ಮಾಡುವ ದೊಡ್ಡ ವ್ಯಾಪಾರಗಳಿಗೆ ಸಹಾಯವಾಗುವಂತಹ ನೀತಿಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೃಷಿ ಕಾನೂನುಗಳನ್ನು ದೊಡ್ಡ ವ್ಯಾಪಾರಗಳಿಗೆ ಸಹಾಯ ಮಾಡಲೆಂದೇ ಜಾರಿ ಮಾಡಲಾಗಿತ್ತು ಎಂದು ಟೀಕಿಸಿದರು.

ಅಲ್ಲದೇ, ಸಿಬಿಐ, ಇಡಿ ಮತ್ತು ಐಟಿ ಬಳಸಿ ಪ್ರತಿಪಕ್ಷಗಳನ್ನು ಹೆದರಿಸಬಹುದು ಎಂದು ಬಿಜೆಪಿಯವರು ಭಾವಿಸುತ್ತಾರೆ. ಸಮಸ್ಯೆಯೆಂದರೆ ಅವರು ಭಾರತೀಯರನ್ನು ಅರ್ಥಮಾಡಿಕೊಳ್ಳುವುದಿಲ್ಲ. ಭಾರತೀಯರು ಯಾವುದಕ್ಕೂ ಹೆದರುವುದಿಲ್ಲ. ಒಬ್ಬ ವಿಪಕ್ಷ ನಾಯಕನೂ ಬಿಜೆಪಿಗೆ ಹೆದರುವುದಿಲ್ಲ ಎಂದು ರಾಹುಲ್​ ಗಾಂಧಿ ಹೇಳಿದರು.

ಯಾತ್ರೆ ಬಗ್ಗೆ ಸೋನಿಯಾ ಸಂದೇಶ: ಭಾರತ್ ಜೋಡೋ ಯಾತ್ರೆ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸಂದೇಶ ಕಳುಹಿಸಿದ್ದು, ಅದ್ಭುತ ಪರಂಪರೆಯನ್ನು ಹೊಂದಿರುವ ನಮ್ಮ ಪಕ್ಷಕ್ಕೆ ಭಾರತ್ ಜೋಡೋ ಯಾತ್ರೆಯು ಒಂದು ಹೆಗ್ಗುರುತಾಗಲಿದೆ. ನಮ್ಮ ಸಂಘಟನೆಯನ್ನು ಪುನಶ್ಚೇತನಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ ಯಾತ್ರೆ ಸಾಗಲಿದೆ. 12 ರಾಜ್ಯಗಳ ಮೂಲಕ ಹಾದು ಹೋಗುವ ಈ ಯಾತ್ರೆ 150 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 30ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ರಾಜ್ಯದಲ್ಲಿ 21 ದಿನಗಳ ಕಾಲ ನಡೆಯಲಿದೆ. ನಂತರ ಇತರ ಉತ್ತರ ಭಾರತದ ರಾಜ್ಯಗಳತ್ತ ಸಾಗಲಿದೆ.

ಇದನ್ನೂ ಓದಿ: ಇಂದು ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ 'ಭಾರತ್ ಜೋಡೋ' ಯಾತ್ರೆಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.