ETV Bharat / bharat

ಸಾವರ್ಕರ್ ಅವರನ್ನು​ ಓದಿದವರಿಗೆ ಭಾರತದ ನಿಜವಾದ ಅರ್ಥ ಗೊತ್ತಿಲ್ಲ: ರಾಹುಲ್​ ಗಾಂಧಿ - ರಾಹುಲ್​​ ಸಂಸದೀಯ ಕ್ಷೇತ್ರ ಮಲಪ್ಪುರಂ

ಪ್ರಧಾನಿ ಮೋದಿ ಭಾರತೀಯರ ನಡುವಿನ ಸಂಬಂಧವನ್ನು ಮುರಿಯುವ ಕೆಲಸ ಮಾಡುತ್ತಿದ್ದರೆ, ನಾನು ಜನರ ನಡುವೆ ಸೇತುವೆಯಾಗಿ ನಿಲ್ಲುವ ಕೆಲಸ ಮಾಡುತ್ತಿದ್ದೇನೆ- ಕೇರಳದ ಮಲಪ್ಪುರಂನಲ್ಲಿ ರಾಹುಲ್ ಗಾಂಧಿ ಮಾತು

Congress leader Rahul Gandhi
Congress leader Rahul Gandhi
author img

By

Published : Sep 29, 2021, 3:23 PM IST

ಮಲಪ್ಪುರಂ(ಕೇರಳ): ಸಂಸದೀಯ ಕ್ಷೇತ್ರ ಮಲಪ್ಪುರಂಗೆ ಭೇಟಿ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್​​ ಗಾಂಧಿ, ವೀರ ಸಾವರ್ಕರ್​ ಓದಿದವರಿಗೆ ಭಾರತದ ನಿಜವಾದ ಅರ್ಥ ಗೊತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋಯಿಕ್ಕೋಡ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್​ ಗಾಂಧಿಗೆ ಕೇರಳ ಕಾಂಗ್ರೆಸ್​​ ಆತ್ಮೀಯ ಸ್ವಾಗತ ನೀಡಿತು. ಇದಾದ ಬಳಿಕ ಮಲಪ್ಪುರಂ ತಲುಪಿದ ಅವರು​, ಹಿಮಾ ಡಯಾಲಿಸಿಸ್​ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

  • The political question being asked today is - what is India? If you read people like Savarkar, they'll say India is a geography. They take a pen, draw a map & say this is India; outside this line it is not India & inside this line it is India: Rahul Gandhi, in Malappuram (Kerala) pic.twitter.com/eZt89Kapif

    — ANI (@ANI) September 29, 2021 " class="align-text-top noRightClick twitterSection" data=" ">

'ಸಾವರ್ಕರ್​ ಅವರಂತಹ ಜನರನ್ನು ಓದಿದರೆ ನಿಜವಾದ ಭಾರತ ಅರ್ಥವಾಗಲ್ಲ. ಅವರ ಪ್ರಕಾರ ಭಾರತ ಒಂದು ಭೂಗೋಳ. ಕೈಯಲ್ಲಿ ಪೆನ್ನು ತೆಗೆದುಕೊಂಡು ಅದರಿಂದ ನಕ್ಷೆ ಬಿಡಿಸಿ ಇದು ಭಾರತ ಎಂದು ಹೇಳುತ್ತಾರೆ. ಆದರೆ ನಮಗೆ ಭಾರತವೆಂದರೆ ಇಲ್ಲಿ ವಾಸಿಸುವ ಜನರು. ಭಾರತವು ಜನರ ನಡುವಿನ ಸಂಬಂಧ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್​ ಹಾಗು ತಮಿಳು, ಉರ್ದು, ಹಿಂದಿ, ಬಂಗಾಳಿ ಭಾಷಿಕರ ಸಂಬಂಧವಿದೆ' ಎಂದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಅರೆಸ್ಟ್

ಮೋದಿ ವಿರುದ್ಧ ವಾಗ್ದಾಳಿ

'ಪ್ರಧಾನಿ ನರೇಂದ್ರ ಮೋದಿ ಭಾರತೀಯರ ನಡುವಿನ ಸಂಬಂಧ ಮುರಿಯುತ್ತಿದ್ದಾರೆ. ಭಾರತದ ಕಲ್ಪನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮೋದಿ ಅವರಿಗೆ ನನ್ನ ವಿರೋಧವಿದೆ. ಭಾರತೀಯರ ನಡುವಿನ ಸಂಬಂಧವನ್ನು ಮುರಿಯುವ ಕೆಲಸ ಅವರು ಮಾಡುತ್ತಿದ್ದರೆ, ನಾನು ಜನರ ನಡುವೆ ಸೇತುವೆಯಾಗಿ ನಿಲ್ಲುವ ಕೆಲಸ ಮಾಡುತ್ತಿದ್ದೇನೆ. ಇಬ್ಬರು ಭಾರತೀಯರ ನಡುವಿನ ಸೇತುವೆ ಮುರಿಯಲು ಪ್ರತಿ ಬಾರಿ ಅವರು ದ್ವೇಷದ ಬೀಜ ಬಿತ್ತುತ್ತಿದ್ದಾರೆ' ಎಂದು ಟೀಕಾ ಪ್ರಹಾರ ನಡಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.