ETV Bharat / bharat

ದೆಹಲಿಯ ಜಂತರ್ ಮಂತರ್​ನಲ್ಲಿ 'ಅಗ್ನಿಪಥ್' ವಿರುದ್ಧ ಕಾಂಗ್ರೆಸ್ 'ಸತ್ಯಾಗ್ರಹ' - congress protest at Jantar Mantar

Congress opposes Agnipath..ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಇತರ ನಾಯಕರು ದೆಹಲಿಯ ಜಂತರ್ ಮಂತರ್‌ನಲ್ಲಿ 'ಅಗ್ನಿಪಥ್' ನೇಮಕಾತಿ ಯೋಜನೆಯ ವಿರುದ್ಧ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ದೆಹಲಿಯ ಜಂತರ್ ಮಂತರ್​ನಲ್ಲಿ 'ಅಗ್ನಿಪಥ್' ವಿರುದ್ಧ ಕಾಂಗ್ರೆಸ್ 'ಸತ್ಯಾಗ್ರಹ'

author img

By

Published : Jun 19, 2022, 3:13 PM IST

ನವದೆಹಲಿ: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಲ್ಲಿನ ಜಂತರ್ ಮಂತರ್‌ನಲ್ಲಿ ‘ಸತ್ಯಾಗ್ರಹ’ ಆರಂಭಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್, ಅಗ್ನಿಪಥ್ ಯೋಜನೆಯು ದೇಶದ ಯುವಜನರಿಗೆ ಪ್ರಯೋಜನಕಾರಿಯಲ್ಲ. ಯೋಜನೆಯನ್ನು ಶೀಘ್ರವೇ ಹಿಂಪಡೆಯಬೇಕು. ಇದು ರಾಷ್ಟ್ರೀಯ ಭದ್ರತೆಗೂ ಅಪಾಯವನ್ನುಂಟು ಮಾಡುತ್ತದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಮುಖಂಡರಾದ ಜೈ ರಾಮ್ ರಮೇಶ್, ರಾಜೀವ್ ಶುಕ್ಲಾ, ಸಚಿನ್ ಪೈಲಟ್, ಸಲ್ಮಾನ್ ಖುರ್ಷಿದ್ ಮತ್ತು ಅಲ್ಕಾ ಲಾಂಬಾ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

  • This scheme will kill the youth of the country, will finish Army... Please see the intent of this govt and topple it. Bring a govt that is true to the nation, protects country's assets. I urge you to do peaceful protest but don't stop: Congress's Priyanka GV on Agnipath scheme pic.twitter.com/rNoYtlqLgK

    — ANI (@ANI) June 19, 2022 " class="align-text-top noRightClick twitterSection" data=" ">

ದೇಶಾದ್ಯಂತ ಪ್ರತಿಭಟನಾನಿರತ ಯುವಕರು ಹಿಂಸಾಚಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದ ಕಾಂಗ್ರೆಸ್​ ನಾಯಕರು, ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸುವುದು ನಮ್ಮ ಹಕ್ಕು. ಆದರೆ, ಅದನ್ನು ಶಾಂತಿಯುತವಾಗಿ ನಡೆಸಬೇಕು, ಹಿಂಸಾಚಾರ ಬೇಡ ಎಂದು ಕೋರಿದರು.

ಜಂತರ್​ ಮಂತರ್​ನಲ್ಲಿ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿರುವ ಕಾರಣ, ಸ್ಥಳದಲ್ಲಿ ಭಾರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜಂತರ್ ಮಂತರ್‌ಗೆ ಪ್ರವೇಶಿಸುವ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಲಾಗಿದೆ.

ವಿವಾದಿತ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಪ್ರತಿಭಟನಾಕಾರರು ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸುವುದು, ರೈಲುಗಳಿಗೆ ಬೆಂಕಿ ಹಚ್ಚುವುದು ಮತ್ತು ರಸ್ತೆಗಳು ಮತ್ತು ರೈಲು ಹಳಿಗಳನ್ನು ನಿರ್ಬಂಧಿಸುವ ಘಟನೆಗಳು ವರದಿಯಾಗಿವೆ.

ಓದಿ: ವಿಡಿಯೋ: ದೆಹಲಿಯ ಐಟಿಪಿಒ ಸುರಂಗದಲ್ಲಿ ಕಸ ಎತ್ತಿದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.