ಹೈದರಾಬಾದ್: ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ಇತ್ತೀಚಿನ ವರದಿಗಳಂತೆ 66 ಸ್ಥಾನಗಳಲ್ಲಿ ಕಾಂಗ್ರೆಸ್ ಮುಂದಿದ್ದು, ಅಧಿಕಾರದ ಗದ್ದುಗೆ ಹಿಡಿಯುವತ್ತ ಮುನ್ನುಗ್ಗುತ್ತಿದೆ. ಆದರೆ ತನ್ನ ಪಕ್ಷದ ಶಾಸಕರನ್ನು ಯಾರೂ ಸೆಳೆಯದಂತೆ ಇದೀಗ ಶಾಸಕರನ್ನು ಸ್ಥಳಾಂತರಗೊಳಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಬಸ್‌ಗಳನ್ನು ಸಿದ್ಧಪಡಿಸಿದೆ. ಹೈದರಾಬಾದ್‌ನ ತಾರಾ ಹೋಟೆಲ್‌ನಲ್ಲಿ ಈಗಾಗಲೇ ಬಸ್‌ಗಳನ್ನು ರೆಡಿಯಾಗಿ ಇರಿಸಿಕೊಂಡಿದೆ.
ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಷ್ಟೇ ಅಲ್ಲದೇ, ಪಕ್ಷದ ವೀಕ್ಷಕರು ಮತ ಎಣಿಕೆಯ ಮೇಲೆ ನಿಗಾವಹಿಸಿದ್ದು, ಪಕ್ಷದ ನಾಯಕರಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿರುವ ಕಾರಣ ಯಾರೂ ಪಕ್ಷಾಂತರಗೊಳ್ಳುವುದಿಲ್ಲ ಎಂದು ತಿಳಿಸಿದರು.
-
Telangana | Luxury buses have been stationed at Hyderabad's Taj Krishna. pic.twitter.com/1hJsAsfJrd
— ANI (@ANI) December 3, 2023 " class="align-text-top noRightClick twitterSection" data="
">Telangana | Luxury buses have been stationed at Hyderabad's Taj Krishna. pic.twitter.com/1hJsAsfJrd
— ANI (@ANI) December 3, 2023Telangana | Luxury buses have been stationed at Hyderabad's Taj Krishna. pic.twitter.com/1hJsAsfJrd
— ANI (@ANI) December 3, 2023
ಡಿ.ಕೆ.ಶಿವಕುಮಾರ್ ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಶುಕ್ರವಾರ ತಡರಾತ್ರಿಯೇ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೈದರಾಬಾದ್‌ಗೆ ಆಗಮಿಸಿದ್ದರು. ಡಿ.ಕೆ.ಶಿವಕುಮಾರ್, ದೀಪಾ ದಾಸ್ ಮುನ್ಷಿ, ಡಾ.ಅಜೋಯ್ ಕುಮಾರ್, ಕೆ.ಜೆ.ಜಾರ್ಜ್ ಮತ್ತು ಕೆ.ಮುರಳೀಧರನ್ ತೆಲಂಗಾಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಸಂಘಟಿಸಲು ವೀಕ್ಷಕರಾಗಿ ನೇಮಕಗೊಂಡಿದ್ದಾರೆ.
ಏತನ್ಮಧ್ಯೆ, ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 70ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ; ಡಿಕೆಶಿ ಸೇರಿ ರಾಜ್ಯ ನಾಯಕರಿಗೆ ಕೈ ಅಭ್ಯರ್ಥಿಗಳ ರಕ್ಷಣೆ ಹೊಣೆ