ETV Bharat / bharat

ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ ಸೇರಿ ಐದು ಕೊಡುಗೆ ಘೋಷಿಸಿದ ಅಸ್ಸೋಂ ಕಾಂಗ್ರೆಸ್ - ಪ್ರಿಯಾಂಕಾ ಗಾಂಧಿ ಸುದ್ದಿ

ಅಸ್ಸೋಂ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಭರ್ಜರಿ ಮತಬೇಟೆ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಈಶಾನ್ಯದ ಪ್ರಮುಖದ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ.

Priyanka Gandhi
Priyanka Gandhi
author img

By

Published : Mar 2, 2021, 5:38 PM IST

ತೇಜ್​ಪುರ್​(ಅಸ್ಸೋಂ): ಮುಂಬರುವ ಅಸ್ಸೋಂ ಚುನಾವಣೆ ಗೆಲ್ಲಲು ಭಾರೀ ಯೋಜನೆ ರೂಪಿಸಿಕೊಂಡಿರುವ ಕಾಂಗ್ರೆಸ್​ ಇದೀಗ ಭರ್ಜರಿ ಕೊಡುಗೆ ಘೋಷಿಸಿದೆ. ಅಸ್ಸೋಂ ರಾಜ್ಯದ ಗೃಹಿಣಿಯರಿಗೆ ಗ್ರಹಿನಿ ಸಮ್ಮಾನ್​ ಮೂಲಕ ತಿಂಗಳಿಗೆ 2 ಸಾವಿರ ರೂ., ಚಹಾ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ದಿನಕ್ಕೆ 365 ರೂ ಜತೆಗೆ 5 ಲಕ್ಷ ಹೊಸ ಸರ್ಕಾರಿ ಉದ್ಯೋಗ ರಚಿಸುವ ಭರವಸೆಯನ್ನು ಕೈ ಪಕ್ಷ ಕೊಟ್ಟಿದೆ.

ಅಸ್ಸೋಂನಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರ

ತೇಜ್​ಪುರದಲ್ಲಿ ಪ್ರಚಾರ ಸಭೆ ನಡೆಸಿದ ಪ್ರಿಯಾಂಕಾ ಗಾಂಧಿ ಈ ಘೋಷಣೆ ಮಾಡಿದ್ದಾರೆ. ಕಳೆದೆರಡು ದಿನಗಳಿಂದಲೂ ರಾಜ್ಯದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಅವರು ಇಂದು ಬೆಳಗ್ಗೆ ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡಿದ್ದ ವಿಡಿಯೋ ಕೂಡ ವೈರಲ್​ ಅಗಿತ್ತು.

ಇದನ್ನೂ ಓದಿ: ದೀದಿ ನಾಡಲ್ಲಿ ಗದ್ದುಗೆ ಗುದ್ದಾಟ: ಮಮತಾ ವಿರುದ್ಧ ಯುಪಿ ಸಿಎಂ ಮತ ಸಮರ

ಇದಾದ ಬಳಿಕ ಚುನಾವಣಾ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಅಸ್ಸೋಂನಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಯಾಗದಂತೆ ನೋಡಿಕೊಳ್ಳುವ ಕಾನೂನು ಜಾರಿಗೆ ತರಲಾಗುವುದು. ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್​ ಉಚಿತವಾಗಿ ನೀಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.