ETV Bharat / bharat

ತೆಲಂಗಾಣದಲ್ಲೂ ಕರ್ನಾಟಕದ ಚುನಾವಣಾ ರಣತಂತ್ರ​: 'ಕೈ' ಹಿಡಿಯಲು BRS ನಾಯಕರು ಸಜ್ಜು! - ವಿಕ್ರಮಾಕ್ ಭಟ್ಟಿ

ಕರ್ನಾಟಕದಲ್ಲಿ ಅಳವಡಿಸಿಕೊಂಡ ಚುನಾವಣಾ ಕಾರ್ಯತಂತ್ರವನ್ನೇ ತೆಲಂಗಾಣದಲ್ಲೂ ಕಾಂಗ್ರೆಸ್​ ನೆಚ್ಚಿಕೊಳ್ಳಲು ನಿರ್ಧರಿಸಿದೆ. ಆಡಳಿತಾರೂಢ ಬಿಆರ್‌ಎಸ್‌ನ ಹಲವು ನಾಯಕರು ಕಾಂಗ್ರೆಸ್​ ಸೇರಲು ಸಜ್ಜಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಪಕ್ಷ ಸೇರುವ ನಿರೀಕ್ಷೆ ಇದೆ.

Congress employs Karnataka tactic in Telangana, key BRS rebels set to join party
ತೆಲಂಗಾಣದಲ್ಲೂ ಕರ್ನಾಟಕದ ಚುನಾವಣಾ ಕಾರ್ಯತಂತ್ರ ನೆಚ್ಚಿಕೊಂಡ ಕಾಂಗ್ರೆಸ್​: ಕೈ ಹಿಡಿಯಲು ಬಿಆರ್‌ಎಸ್ ನಾಯಕರು ಸಜ್ಜು!
author img

By

Published : Jun 23, 2023, 9:32 AM IST

ನವದೆಹಲಿ: ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ​ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನೆರೆ ರಾಜ್ಯ ಕರ್ನಾಟಕ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೈ ಪಡೆಯು ಕರ್ನಾಟಕದಲ್ಲಿ ಅಳವಡಿಸಿರುವ ಕಾರ್ಯತಂತ್ರವನ್ನೇ ತೆಲಂಗಾಣದಲ್ಲೂ ಅನುಸರಿಸಲು ಮುಂದಾಗಿದೆ. ಈ ಮೂಲಕ ಆಡಳಿತಾರೂಢ ಬಿಆರ್‌ಎಸ್‌ನ ಹಲವಾರು ನಾಯಕರನ್ನು ಸೆಳೆಯಲು ಯೋಜಿಸುತ್ತಿದೆ. ಕರ್ನಾಟಕದ ಗೆಲುವಿನ ಪ್ರಭಾವ ನೆರೆಯ ರಾಜ್ಯದಲ್ಲೂ ಬೀರಲಿದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.

ಕರ್ನಾಟಕ ಚುನಾವಣೆಗೂ ಮುನ್ನ ಬಿಜೆಪಿ ಅಧಿಕಾರದ ಚುಕ್ಕಾಣಿ ಕಳೆದುಕೊಳ್ಳುತ್ತಿದೆ ಎಂದು ಗೊತ್ತಾಗಿ ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ತೆಲಂಗಾಣದಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ಗಮನಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ಬದಲಾಯಿಸಲು ಸಿದ್ಧರಿರುವ ಪ್ರಮುಖ ಬಿಆರ್‌ಎಸ್ ನಾಯಕರೊಂದಿಗೆ ಅವರು ಕೈ ನಾಯಕರು ಈಗಾಗಲೇ ಸಂಪರ್ಕದಲ್ಲಿದ್ದಾರೆ.

ಕಾಂಗ್ರೆಸ್‌ ಸೇರಲು ಇಚ್ಛಿಸುವ ಹಲವು ನಾಯಕರು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಆ ನಾಯಕರು ಯಾವ ಪಕ್ಷಕ್ಕೆ ಸೇರಿದವರು ಎಂದು ನಾನು ಹೆಸರಿಸಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳು ಕ್ರಮೇಣ ತೆರೆದುಕೊಳ್ಳುತ್ತವೆ. ತೆಲಂಗಾಣದಲ್ಲೂ ಕರ್ನಾಟಕದಂತಹ ಟ್ರೆಂಡ್ ರೂಪುಗೊಳ್ಳುತ್ತಿದೆ. ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಮುಂದಿನ ಸರ್ಕಾರ ರಚಿಸುವ ವಿಶ್ವಾಸವೂ ಇದೆ ಎಂದು ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್​ ರಾವ್ ಠಾಕ್ರೆ 'ಈಟಿವಿ ಭಾರತ್‌'ಗೆ ತಿಳಿಸಿದರು.

ವಿವಿಧ ನಾಯಕರ ಭೇಟಿ, ಮಾತುಕತೆ ಶುರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗಳು ನಡೆದ ನಂತರ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಬುಧವಾರವಷ್ಟೇ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಹಿರಿಯ ನಾಯಕ ಮತ್ತು ಸಂಸದ ವೆಂಕಟ್ ರೆಡ್ಡಿ ಅವರೊಂದಿಗೆ ಮಾಜಿ ಸಂಸದರ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ, ಗುರುವಾರ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಕ್ರಮಾಕ್ ಭಟ್ಟಿ ಅವರನ್ನೂ ಭೇಟಿಯಾಗಿ ಪಕ್ಷಕ್ಕೆ ಸೇರುವ ವಿಚಾರವಾಗಿ ಸಮಲೋಚಿಸಿದ್ದಾರೆ.

ಮತ್ತೊಂದೆಡೆ, ರೇವಂತ್ ರೆಡ್ಡಿ ಅವರು ಮಾಜಿ ಸಚಿವ ಮತ್ತು ಬಿಆರ್‌ಎಸ್ ನಾಯಕ ಜೂಪಲ್ಲಿ ಕೃಷ್ಣರಾವ್ ಅವರನ್ನೂ ಭೇಟಿಯಾಗಿದ್ದಾರೆ. ಇವರು ಶೀಘ್ರದಲ್ಲೇ ಕಾಂಗ್ರೆಸ್ ಸೇರಬಹುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಜೂನ್ ಅಂತ್ಯದ ವೇಳೆಗೆ ಖಮ್ಮಂನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಬಿಆರ್‌ಎಸ್ ನಾಯಕ ಜೂಪಲ್ಲಿ ಕೃಷ್ಣರಾವ್ ಮತ್ತು ಕೆಲವು ಮಾಜಿ ಶಾಸಕರು ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣದ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಶೇಷ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ, ಕಾಂಗ್ರೆಸ್ ಸಂಸದ ವೆಂಕಟ್ ರೆಡ್ಡಿ ಸಹ ಪ್ರಿಯಾಂಕಾ ಅವರೊಂದಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲದೇ, ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಮೇ 8ರಂದು ಹೈದರಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪ್ರಿಯಾಂಕಾ ಪಾಲ್ಗೊಂಡಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ಜನರ ಹಿತಕ್ಕಾಗಿ ಕಾಂಗ್ರೆಸ್ ಕೈಗೊಳ್ಳಲಿರುವ ಕಲ್ಯಾಣ ಕ್ರಮಗಳನ್ನೂ ಪ್ರಿಯಾಂಕಾ ಘೋಷಿಸಿದ್ದರು. ಇದೇ ಸಮಾವೇಶದಲ್ಲಿ ವೆಂಕಟ್ ರೆಡ್ಡಿ ಅವರು ನಲ್ಗೊಂಡದಲ್ಲೂ ಇಂತಹದ್ದೇ ಸಮಾವೇಶ ಮಾಡಲು ಪ್ರಿಯಾಂಕಾ ಅವರಿಗೆ ಮನವಿ ಮಾಡಿದ್ದರು.

ನಿರಂತರ ಪಾದಯಾತ್ರೆ: ರಾಜ್ಯ ಚುನಾವಣೆ ಹೊಸ್ತಿಲಿನಲ್ಲೇ ಕಾಂಗ್ರೆಸ್​ ನಾಯಕರು ನಿರಂತರ ಪಾದಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಮತ್ತು ಶಾಸಕಾಂಗ ಪಕ್ಷದ ನಾಯಕ ವಿಕ್ರಮಾಕ್ ಭಟ್ಟಿ ಸೇರಿದಂತೆ ಪ್ರಮುಖ ನಾಯಕರು ಕಳೆದ ತಿಂಗಳಿಂದ ರಾಜ್ಯಾದ್ಯಂತ ವ್ಯಾಪಕ ಯಾತ್ರೆಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ಲೋಪದೋಷ, ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಸಾಮೂಹಿಕ ನಾಯಕತ್ವ, ಬಸ್ ಯಾತ್ರೆ: ಮುಂಬರುವ ದಿನಗಳಲ್ಲಿ ಕರ್ನಾಟಕದ ಮಾದರಿಯಲ್ಲಿ ತೆಲಂಗಾಣದಲ್ಲೂ ಬಸ್ ಯಾತ್ರೆ ನಡೆಸಲು ಕಾಂಗ್ರೆಸ್​ ಸಜ್ಜಾಗಿದೆ. ಕರ್ನಾಟಕದಂತೆಯೇ ತೆಲಂಗಾಣದಲ್ಲಿ ಈ ಬಸ್ ಯಾತ್ರೆಯು ರಾಜ್ಯ ನಾಯಕರ ನಡುವೆ ಒಗ್ಗಟ್ಟು ಪ್ರದರ್ಶಿಸುತ್ತದೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವದ ಮಾದರಿಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ಚುನಾವಣೆಯಲ್ಲೂ ಸಾಮೂಹಿಕ ನಾಯಕತ್ವದ ಮಾದರಿಯೇ ಕೆಲಸ ಮಾಡಿದ್ದು ಎಂದು ಕೈಪಾಳಯ ಬಲವಾಗಿ ನಂಬಿದೆ.

ನಾಯಕರ ಬಸ್​ ಯಾತ್ರೆ ಬಗ್ಗೆ ಪಕ್ಷದ ಉಸ್ತುವಾರಿ ಮಾಣಿಕ್​ ರಾವ್ ಖಚಿತಪಡಿಸಿದ್ದಾರೆ. ಇದು ಜೂನ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಈಗ ಮಳೆ ವಾತಾವರಣ ಇರುವುದರಿಂದ ಇದು ಮುಗಿದ ನಂತರ ಯಾತ್ರೆ ಪ್ರಾರಂಭಿಸಲಾಗುವುದು ಎಂದು ಪಕ್ಷದೊಳಗಿನವರು ಹೇಳಿದ್ದಾರೆ. ಯಾವುದೇ ನಾಯಕನ ಅತಿಯಾಗಿ ಪ್ರತಿಬಿಂಬಿಸುವುದನ್ನು ತಪ್ಪಿಸಬೇಕು. ಪಕ್ಷದ ಕಾರ್ಯಕ್ರಮಗಳು ಮತ್ತು ನೀತಿಗಳಿಗೆ ಮತದಾರರನ್ನು ಸೆಳೆಯುವ ಸಾಮೂಹಿಕ ನಾಯಕತ್ವದ ತತ್ವ ಅನುಸರಿಸುವುದು ಯಾವಾಗಲೂ ಉತ್ತಮ. ಚುನಾವಣೆಯಲ್ಲಿ ಪಕ್ಷ ಗೆದ್ದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಸಮಾಲೋಚನೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Opposition meet: ಆಪ್ ಅಪಸ್ವರ, ಬಿಆರ್​ಎಸ್​ ಗೈರು: ಮೈತ್ರಿ ಸಭೆಗೂ ಮುನ್ನವೇ ಬಿಜೆಪಿಯೇತರ ಕೂಟದಲ್ಲಿ ಬಿರುಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.