ನವದೆಹಲಿ: ಕಾಂಗ್ರೆಸ್ ಪಕ್ಷವು ಮೂರು ಹೊಸ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದು, ಮೂರು ಸಮಿತಿಗಳಲ್ಲಿ ಐದು ಸದಸ್ಯರನ್ನು ನೇಮಿಸಿದೆ. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರಿಕೆ ಪ್ರಕಟಣೆ ಹೊರಡಿಸಿದ್ದಾರೆ.
ಆರ್ಥಿಕ ವ್ಯವಹಾರ, ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಿತಿಗಳು ರಚನೆಗೊಂಡಿದ್ದು, ಈ ವಿಷಯಗಳು ಕುರಿತು ಪರಿಗಣಿಸಲು ಮತ್ತು ಚರ್ಚೆ ಮಾಡಲು ಆದೇಶ ಹೊರಡಿಸಲಾಗಿದೆ.
ಇನ್ನು ಮೂರು ಸಮಿತಿಗಳಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸದಸ್ಯರಾಗಿದ್ದಾರೆ.