ETV Bharat / bharat

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢಕ್ಕೆ ಎಐಸಿಸಿ ವೀಕ್ಷಕರ ನೇಮಿಸಿದ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ - ಎಐಸಿಸಿ ವೀಕ್ಷಕರ ನೇಮಿಸಿದ ಖರ್ಗೆ

''ದೇಶಾದ್ಯಂತದ ಹಿರಿಯ ನಾಯಕರಾಗಿರುವ ಎಐಸಿಸಿ ವೀಕ್ಷಕರು, ಸಾರ್ವಜನಿಕ ಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಉದ್ದೇಶವನ್ನು ಸಾಧಿಸಲು ಕಾಂಗ್ರೆಸ್​ ಪಕ್ಷಕ್ಕೆ ಸಹಾಯ ಮಾಡುತ್ತಾರೆ'' ಎಂದು ಮಧ್ಯಪ್ರದೇಶದ ಎಐಸಿಸಿ ಉಸ್ತುವಾರಿ ಜೆಪಿ ಅಗರ್ವಾಲ್ ಈಟಿವಿ ಭಾರತಕ್ಕೆ ತಿಳಿಸಿದರು.

Congress chief Kharge appoints AICC observers
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢಕ್ಕೆ ಎಐಸಿಸಿ ವೀಕ್ಷಕರ ನೇಮಿಸಿದ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ..
author img

By

Published : Aug 1, 2023, 8:33 PM IST

ನವದೆಹಲಿ: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸಾರ್ವಜನಿಕರ ಬೆಂಬಲವನ್ನು ಮತಗಳಾಗಿ ಪರಿವರ್ತಿಸಲು ಲೋಕಸಭೆ ಕ್ಷೇತ್ರವಾರು ಎಐಸಿಸಿ ವೀಕ್ಷಕರನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.

''ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅವಕಾಶವಿದೆ. ಉತ್ತಮ ಆಡಳಿತದ ಕೊರತೆ ಮತ್ತು ಭ್ರಷ್ಟಾಚಾರದ ಸಮಸ್ಯೆಗಳಿಂದ ಜನರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆದರೆ, ಸಾರ್ವಜನಿಕ ಬೆಂಬಲವನ್ನು ಮತಗಳಾಗಿ ಪರಿವರ್ತಿಸುವುದು ಸವಾಲಾಗಿದೆ. ದೇಶಾದ್ಯಂತದ ಹಿರಿಯ ನಾಯಕರಾಗಿರುವ ಎಐಸಿಸಿ ವೀಕ್ಷಕರು ಆ ಉದ್ದೇಶವನ್ನು ಸಾಧಿಸಲು ಪಕ್ಷಕ್ಕೆ ಸಹಾಯ ಮಾಡುತ್ತಾರೆ ಎಂದು ಮಧ್ಯಪ್ರದೇಶದ ಎಐಸಿಸಿ ಉಸ್ತುವಾರಿ ಜೆಪಿ ಅಗರ್ವಾಲ್ ಈಟಿವಿ ಭಾರತಕ್ಕೆ ತಿಳಿಸಿದರು.

ಮತದಾರರನ್ನು ಬೆಂಬಲ ಸೆಳೆಯಲಿವೆ ಬೂತ್ ಮಟ್ಟದ ತಂಡಗಳು: "ಎಐಸಿಸಿ ವೀಕ್ಷಕರು ವಿಧಾನಸಭೆ ಸ್ಥಾನದ ಮಟ್ಟದಲ್ಲಿ ಪಕ್ಷಕ್ಕೆ ನಾಯಕತ್ವದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಲೋಕಸಭಾ ಕ್ಷೇತ್ರದ ಉಸ್ತುವಾರಿ ವ್ಯಕ್ತಿ ವಾಸ್ತವವಾಗಿ ತನ್ನ ಅಡಿಯಲ್ಲಿ ಬರುವ ಎಂಟು ವಿಧಾನಸಭಾ ಸ್ಥಾನಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅವರು ನಮ್ಮೊಂದಿಗೆ ಸಮನ್ವಯ ಸಾಧಿಸುತ್ತಾರೆ. ಮತದಾರರನ್ನು ಬೆಂಬಲ ಸೆಳೆಯಲು ಬೂತ್ ಮಟ್ಟದ ತಂಡಗಳು ಕೆಲಸ ಮಾಡಲಿವೆ" ಎಂದು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕಿ ಶೋಭಾ ಓಜಾ ಹೇಳಿದ್ದಾರೆ.

''ಚುನಾವಣೆಯ ಸಮಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಎಐಸಿಸಿ ಉಸ್ತುವಾರಿ ಅಥವಾ ಪಿಸಿಸಿ ಮುಖ್ಯಸ್ಥರು ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಹೈಕಮಾಂಡ್‌ಗೆ ತಿಳಿಸಬೇಕಾಗುತ್ತದೆ. ಇಲ್ಲಿ, ಎಐಸಿಸಿ ವೀಕ್ಷಕರು ಸೂಕ್ತವಾಗಿ ಬರುತ್ತಾರೆ. ಅವರು ತಮ್ಮೊಂದಿಗೆ ಚುನಾವಣಾ ಹೋರಾಟದ ಅನುಭವವನ್ನು ನೀಡಲಿದ್ದಾರೆ. ಸ್ಥಳೀಯ ಕಾರ್ಯಕರ್ತರ ಮೇಲೆ ಪ್ರಭಾವ ಬೀರುತ್ತಾರೆ'' ಎಂದರು.

ಮಧ್ಯಪ್ರದೇಶಕ್ಕೆ ರಣದೀಪ್ ಸುರ್ಜೆವಾಲಾ, ಚಂದ್ರಕಾಂತ್ ಹಂಡೋರೆ ನೇಮಕ: ಹೆಚ್ಚುವರಿಯಾಗಿ, ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರನ್ನು ಹಿರಿಯ ವೀಕ್ಷಕರಾಗಿ ಮತ್ತು ಮಹಾರಾಷ್ಟ್ರದ ಅನುಭವಿ ಚಂದ್ರಕಾಂತ್ ಹಂಡೋರೆ ಅವರನ್ನು ಮಧ್ಯಪ್ರದೇಶಕ್ಕೆ ವೀಕ್ಷಕರಾಗಿ ನಿಯೋಜಿಸಿದ್ದಾರೆ. 2018 ರಲ್ಲಿ ಪಕ್ಷವು ಗೆದ್ದಿತ್ತು. ಆದರೆ, ನಂತರ 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ತೆರಳಿದ ನಂತರ, ಸರ್ಕಾರ ಕಳೆದುಕೊಂಡಿತು. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲೂ ಖರ್ಗೆ ಇದೇ ತಂತ್ರ ಅನುಸರಿಸಿದ್ದು, ಲೋಕಸಭೆ ಕ್ಷೇತ್ರವಾರು ಎಐಸಿಸಿ ವೀಕ್ಷಕರನ್ನು ನಿಯೋಜಿಸಿದ್ದಾರೆ. ಆದರೆ, ಅವರ ಪಾತ್ರ ವಿಭಿನ್ನವಾಗಿರುತ್ತದೆ.

ಎಐಸಿಸಿ ವೀಕ್ಷಕರು ಪಕ್ಷದ ಕಾರ್ಯಕರ್ತರ ಯಾವುದೇ ಅಸಮಾಧಾನ ವಿದ್ದರೂ ಅದನ್ನು ನಿವಾರಿಸುತ್ತಾರೆ. ಸಂಘಟನೆ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಸಮನ್ವಯವನ್ನು ಖಚಿತಪಡಿಸುತ್ತಾರೆ. ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯೊಂದರಲ್ಲಿ ರಾಹುಲ್ ಜೀ ಅವರು ರಾಜಸ್ಥಾನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ಎಐಸಿಸಿ ರಾಜಸ್ಥಾನದ ಉಸ್ತುವಾರಿ ಕಾರ್ಯದರ್ಶಿ ಖಾಜಿ ನಿಜಾಮುದ್ದೀನ್ ಹೇಳಿದ್ದಾರೆ. ಖಾಜಿ ಅವರ ಪ್ರಕಾರ, ಎಐಸಿಸಿ ಕಾರ್ಯದರ್ಶಿಗಳು ಮತ್ತು ರಾಜ್ಯ ನಾಯಕರು ತಮ್ಮ ನೈತಿಕ ಬಲವನ್ನು ಹೆಚ್ಚಿಸಲು ವಿಧಾನಸಭಾ ಕ್ಷೇತ್ರವಾರು ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಅವರು ಹೇಳಿದರು.

''ಚಲೋ ಬೂತ್" ಉಪಕ್ರಮ: ಮಧ್ಯಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 25 ಮತ್ತು ಛತ್ತೀಸ್‌ಗಢದಲ್ಲಿ 11 ಲೋಕಸಭಾ ಸ್ಥಾನಗಳಿವೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ "ಚಲೋ ಬೂತ್" ಎಂಬ ಉಪಕ್ರಮವನ್ನು ಛತ್ತೀಸ್‌ಗಢದಲ್ಲಿಯೂ ನಡೆಸಲಾಗುತ್ತಿದೆ. ಅಲ್ಲಿ ಖರ್ಗೆ ಅವರು ಇತ್ತೀಚೆಗೆ ಬಸ್ತಾರ್ ಸಂಸದ ದೀಪಕ್ ಬೈಜ್ ಅವರನ್ನು ಹೊಸ ಪಿಸಿಸಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ನಿರ್ಗಮಿತ ಪಿಸಿಸಿ ಮುಖ್ಯಸ್ಥ ಮೋಹನ್ ಮಾರ್ಕಮ್ ಅವರನ್ನು ರಾಜ್ಯ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಯಿತು. ಜೊತೆಗೆ ಹಿರಿಯ ಸಚಿವ ಟಿ.ಎಸ್. ಸಿಂಗ್ ದೇವ್ ಅವರಿಗೆ ಬಡ್ತಿ ನೀಡಲಾಯಿತು. ಅವರನ್ನು ನಿರ್ಣಾಯಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಬೈಜ್ ಅವರಿಗೆ ರಾಜ್ಯ ಘಟಕದ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ನೀಡಿದಾಗ ಸಿಂಗ್ ದೇವ್ ಮತ್ತು ಮಾರ್ಕಮ್ ಅವರ ಬೆಂಬಲಿಗರಿಗೆ ಭರವಸೆ ನೀಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮಧ್ಯಪ್ರದೇಶದ ಮಾದರಿಯಲ್ಲೇ ವೀಕ್ಷಕರ ನೇಮಕ: ಮಧ್ಯಪ್ರದೇಶದ ಮಾದರಿಯಲ್ಲಿ, ಖರ್ಗೆ ಅವರು ಹಿರಿಯ ವೀಕ್ಷಕರಾಗಿ ಮಧುಸೂದನ್ ಮಿಸ್ತ್ರಿ ಮತ್ತು ರಾಜಸ್ಥಾನದ ವೀಕ್ಷಕರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರಾಖಂಡದ ನಾಯಕ ಪ್ರೀತಮ್ ಸಿಂಗ್ ಅವರನ್ನು ಹಿರಿಯ ವೀಕ್ಷಕರಾಗಿ ಮತ್ತು ಮೀನಾಕ್ಷಿ ನಟರಾಜನ್ ಅವರನ್ನು ಛತ್ತೀಸ್​ಗಢಕ್ಕೆ ವೀಕ್ಷಕರಾಗಿ ನೇಮಿಸಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿಗೆ ಲೋಕಮಾನ್ಯ ​ತಿಲಕ್​ ರಾಷ್ಟ್ರೀಯ ಪ್ರಶಸ್ತಿ ಪ್ರದಾನ..140 ಕೋಟಿ ಜನರಿಗೆ ಅರ್ಪಿಸಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.