ETV Bharat / bharat

ಎಲ್ಲಾ ವೋಟಿಗಾಗಿ: ಹೊಸ ಚಪ್ಪಲಿ ಕೊಟ್ಟು ಹೊಡೆಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ!- ವಿಡಿಯೋ - ರತ್ಲಾಮ್

Congress candidate seeks blessings in slipper slaps: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಚುನಾವಣೆ ಗೆಲ್ಲಲು ವೃದ್ಧ ವ್ಯಕ್ತಿಯಿಂದ ಆಶೀರ್ವಾದ ರೂಪದಲ್ಲಿ ಚಪ್ಪಲಿಯಿಂದ ಹೊಡೆಸಿಕೊಂಡು ಗಮನ ಸೆಳೆದರು.

Congress candidate Paras Saklecha
ಕಾಂಗ್ರೆಸ್​ ಅಭ್ಯರ್ಥಿ ಪರಸ್ ಸಕ್ಲೇಚಾ
author img

By PTI

Published : Nov 19, 2023, 10:48 AM IST

ರತ್ಲಾಮ್(ಮಧ್ಯಪ್ರದೇಶ): ಇಲ್ಲಿನ ಕಾಂಗ್ರೆಸ್ ಪಕ್ಷದ​ ಅಭ್ಯರ್ಥಿ ಪರಸ್ ಸಕ್ಲೇಚಾ ಎಂಬವರು ಚುನಾವಣೆಗೂ ಮುನ್ನ ತನ್ನ ಗೆಲುವಿಗಾಗಿ ವೃದ್ಧ ವ್ಯಕ್ತಿಯೊಬ್ಬರಿಂದ ಚಪ್ಪಲಿಯಿಂದ ಹೊಡೆಸಿಕೊಂಡರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮಧ್ಯಪ್ರದೇಶ ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್ ​ಅಭ್ಯರ್ಥಿ ಹಾಗು ಮಾಜಿ ಶಾಸಕನ ವಿಡಿಯೋವೊಂದು ಎಲ್ಲೆಡೆ ಭಾರಿ ಸದ್ದಾಗುತ್ತಿದೆ. ರತ್ಲಾಮ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದ ಪರಸ್ ಸಕ್ಲೇಚಾ, ಇಲ್ಲಿ 'ದೇವಮಾನವ'ನೆಂದೇ ಕರೆಯುವ ವೃದ್ಧನ ಕೈಯಿಂದ ತಾವೇ ಹೊಸ ಚಪ್ಪಲಿ ಕೊಟ್ಟು ಹೊಡೆಸಿಕೊಂಡರು. ಇವರಿಂದ ಚಪ್ಪಲಿಯಿಂದ ಏಟು ತಿಂದರೆ ಅದೃಷ್ಟ ಖುಲಾಯಿಸುತ್ತದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ನಂಬಿರುವುದಾಗಿ ವರದಿಯಾಗಿದೆ. ಕೈ ಅಭ್ಯರ್ಥಿಗೆ ಚಪ್ಪಲಿಯಿಂದ ಹೊಡೆದ ವ್ಯಕ್ತಿಯನ್ನು ಜನತೆ ಫಕೀರ ಬಾಬಾ, ದೇವರು ಎಂದೆಲ್ಲ ಕರೆದು ಆರ್ಶಿವಾದ ಪಡೆಯುತ್ತಾರೆ.

  • In the Video, @INCIndia MLC Candidate from MP, Paras saklecha is seen handing slippers to an elderly Kamal Raza (fakir baba) asking to be beaten (blessing).

    Irony will be that this Congress leader will go and call others Andhbhakt! pic.twitter.com/wevoNyUMfF

    — Amit Rakksshit 🇮🇳 (@amitrakshitbjp) November 18, 2023 " class="align-text-top noRightClick twitterSection" data=" ">

ಚಪ್ಪಲಿ ಹೊಡೆತವೇ ಆಶೀರ್ವಾದ: ಈ ವೃದ್ಧ ರತ್ಲಾಮ್​ನ ಮೋವ್​ ರಸ್ತೆಯ ದರ್ಗಾದಲ್ಲಿ ವಾಸಿಸುತ್ತಿದ್ದಾರೆ. ಸ್ಥಳೀಯರು ಈ ಹಿರಿಕನನ್ನು ಪ್ರೀತಿಯಿಂದ ಅಬ್ಬಾ ಎಂದೂ ಕರೆಯುತ್ತಿದ್ದಾರೆ. ಇವರ ಬಳಿ ಅನೇಕರು ಆಶೀರ್ವಾದ ಪಡೆಯಲು ಬರುತ್ತಾರೆ. ವೃದ್ಧನಿಗೆ ಕಾಣಿಕೆಯಾಗಿ ಲುಂಗಿ ಮತ್ತು ಪಾದರಕ್ಷೆಗಳನ್ನು ಒಪ್ಪಿಸುತ್ತಾರೆ. ಭಕ್ತರು ನೀಡುವ ಕಾಣಿಕೆಗಳ ಪೈಕಿ ಕೆಲವನ್ನು ಸ್ವೀಕರಿಸಿದರೆ ಕೆಲವನ್ನು ಎಸೆದು ಬಿಡುತ್ತಾರೆ. ಆ ಬಳಿಕ ತನ್ನ ಬಳಿ ಬಂದಿರುವ ಭಕ್ತರಿಗೆ ಚಪ್ಪಲಿಯಿಂದ ಏಟು ನೀಡುತ್ತಾರೆ. ಫಕೀರ ಬಾಬ ಅವರಿಂದ ಚಪ್ಪಲಿಯಿಂದ ಹೊಡೆಸಿಕೊಂಡರೆ ಶುಭವಾಗುತ್ತದೆ ಎಂಬುದು ಜನರ ನಂಬಿಕೆ.

ಇದೇ ನಂಬಿಕೆಯಿಂದ ಸಕ್ಲೇಚಾ ಅವರು ಕೂಡ ಬಾಬರನ್ನು ಭೇಟಿಯಾಗಿ ಚಪ್ಪಲಿಯಲ್ಲಿ ಏಟು ತಿಂದಿದ್ದಾರೆ. ಸಕ್ಲೇಚಾ 2013 ಮತ್ತು 2018ರ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತದಾನಕ್ಕೆ ಮೊದಲು ಶುಕ್ರವಾರ ಬಾಬಾನ ಬಳಿ ತೆರಳಿ ಅವರಿಗೆ ಹೊಸ ಪಾದರಕ್ಷೆ ಮತ್ತು ಲುಂಗಿ ನೀಡಿ ಅವರ ಕೈಯಿಂದ ತಲೆ, ಕೆನ್ನೆ, ಕಾಲಿಗೆ ಚಪ್ಪಲಿಯಿಂದ ಹೊಡೆಸಿಕೊಂಡು ಆಶೀರ್ವಾದ ಪಡೆದು ಸಂಭ್ರಮಿಸಿದರು.

ವೈರಲ್​ ಆಗಿರುವ ವಿಡಿಯೋದಲ್ಲಿ ವೃದ್ಧ ಮುಚ್ಚಿದ ಅಂಗಡಿ ಎದುರು ಕುಳಿತಿದ್ದು, ಅಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಚಪ್ಪಲಿಯಲ್ಲಿ ಹೊಡೆಯುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್​ ಮುಖಂಡರು ಸಾಕು ಸಾಕು ಅಷ್ಟು (ಬಸ್​​ ಬಸ್ ಹೋ ಗಯ) ಎಂದಿರುವ ಆಡಿಯೋ ಕೂಡ ದಾಖಲಾಗಿದೆ. ಇದಾದ ಬಳಿಕ ಪರಸ್ ಸಕ್ಲೇಚಾ ಮಾತನಾಡಿ, ಫಕೀರ ಬಾಬಾ ನನ್ನ ಮೇಲಿದ್ದ ದುಷ್ಟ ನೆರಳುಗಳನ್ನು ನಿವಾರಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಇಸ್ರೇಲ್​ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು': ಕೇರಳ ಕಾಂಗ್ರೆಸ್​ ಸಂಸದ ಆಘಾತಕಾರಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.