ETV Bharat / bharat

ಮತ ಎಣಿಕೆ ನಡೆಯುತ್ತಿರುವಾಗಲೇ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್​

ಗೋವಾದಲ್ಲಿ ಬಹುಮತ ಗಳಿಸುವ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್​ ಮತ ಎಣಿಕೆಗೂ ಮೊದಲೇ ರಾಜ್ಯಪಾಲ ಪಿ.ಎಸ್​.ಶ್ರೀಧರನ್​​ ಪಿಳ್ಳೈ ಅವರನ್ನು ಭೇಟಿ ಮಾಡಲು ಅಪಾಯಿಂಟ್​ಮೆಂಟ್​ ಕೊಡಿಸುವಂತೆ ಕೋರಿದೆ ಎಂದು ತಿಳಿಸಿದೆ. ಆದರೆ, ಈವರೆಗೆ ಯಾವುದೇ ಅಪಾಯಿಂಟ್​ಮೆಂಟ್​ ನೀಡಲಾಗಿಲ್ಲ. 2017ರ ಚುನಾವಣೆಯಲ್ಲಿ ಮಾಡಿರುವ ತಪ್ಪಿನಿಂದ ಪಾಠ ಕಲಿತಿರುವ ಕಾಂಗ್ರೆಸ್​ ಈ ಬಾರಿ ಪಕ್ಷದ ನಾಯಕರಿಂದ ಬೇಕಾದ ತಯಾರಿಯನ್ನು ಮಾಡಿಕೊಂಡಿದೆ.

Goa Congress
ಕಾಂಗ್ರೆಸ್​
author img

By

Published : Mar 10, 2022, 10:27 AM IST

ಪಣಜಿ: ಗೋವಾದಲ್ಲಿ ಮತ ಎಣಿಕೆ ಪ್ರಾರಂಭವಾಗುವ ಮುನ್ನವೇ ಬಹುಮತ ಗಳಿಸುವ ವಿಶ್ವಾಸ ವ್ಯಕ್ತಿಪಡಿಸಿರುವ ಕಾಂಗ್ರೆಸ್​ ಮಧ್ಯಾಹ್ನದ ವೇಳೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ನೀಡುವಂತೆ ಕೋರಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್​, ಪಕ್ಷದ ನಾಯಕರು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಪಿ.ಎಸ್​.ಶ್ರೀಧರನ್​​ ಪಿಳ್ಳೈ ಅವರನ್ನು ಭೇಟಿ ಮಾಡಲು ಅಪಾಯಿಂಟ್​ಮೆಂಟ್​ ಕೊಡಿಸುವಂತೆ ಕೋರಿದೆ ಎಂದು ತಿಳಿಸಿದೆ. ಆದರೆ, ಈವರೆಗೆ ಯಾವುದೇ ಅಪಾಯಿಂಟ್​ಮೆಂಟ್​ ನೀಡಲಾಗಿಲ್ಲ.

2017ರ ಚುನಾವಣೆಯಲ್ಲಿ ಮಾಡಿರುವ ತಪ್ಪುಗಳಿಂದ ಪಾಠ ಕಲಿತಿರುವ ಈ ಬಾರಿ ಬಹುಮತ ಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಹಾಗಾಗಿ ಮುಂಚಿತವಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ ಎಂದು ಕಾಂಗ್ರೆಸ್​ ಹೇಳಿದೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್​ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಮಿತ್ರಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಳಂಬವಾಗಿ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಬಿಜೆಪಿ ಕಾಂಗ್ರೆಸ್​ಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ್ದರೂ, ಮಹಾರಾಷ್ಟ್ರ ಗೋಮಾಂತಕ್​ ಪಕ್ಷ ಹಾಗೂ ಇತರ ಸ್ವತಂತ್ರ ಶಾಸಕರ ಬೆಂಬಲವನ್ನು ಪಡೆದು ಸರ್ಕಾರ ರಚಿಸಿತ್ತು.

ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿತಿರುವ ಕಾಂಗ್ರೆಸ್​ ಈ ಬಾರಿ ಹೆಚ್ಚು ಕ್ರಿಯಾಶೀಲವಾಗಿದ್ದು, ಕಾಂಗ್ರೆಸ್​ ಪಕ್ಷದ ನಾಯಕರಾದ ಪಿ.ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್​ ಅವರ ಮೂಲಕ ಸಂಭವನೀಯ ಮೈತ್ರಿ ಬಗ್ಗೆ ಅಗತ್ಯವಿರುವ ಮಾತುಕತೆ ಹಾಗೂ ನಿರ್ಧಾರಗಳನ್ನು ಈಗಾಗಲೇ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.