ಚಿತ್ತೋರಗಢ( ರಾಜಸ್ಥಾನ) : ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಕೈಯಲ್ಲೂ ಇರುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೂ ಮೊಬೈಲ್ ಬಳಸುತ್ತಿದ್ದಾರೆ. ಅದರಲ್ಲೂ ಯುವಕರು ಹೆಚ್ಚಾಗಿ ಇವುಗಳ ಬಳಕೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ, ಆನ್‌ಲೈನ್ ಗೇಮ್ಸ್ ನಲ್ಲಿ ಮುಳುಗಿ ಮಧ್ಯರಾತ್ರಿಯಾದರೂ ನಿದ್ದೆ ಮಾಡುವುದಿಲ್ಲ. ಇತ್ತೀಚಿಗೆ ಆನ್‌ಲೈನ್ ಗೇಮ್‌ಗಳ ಚಟಕ್ಕೆ ಬಿದ್ದು ವಿಚಿತ್ರವಾಗಿ ವರ್ತಿಸುವ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಇದೇ ರೀತಿಯ ಮತ್ತೊಂದು ಘಟನೆ ರಾಜಸ್ಥಾನದ ಚಿತ್ತೋರಗಢದಲ್ಲಿ ಬೆಳಕಿಗೆ ಬಂದಿದೆ.
ಬನ್ಸೇನ್ ಗ್ರಾಮದ ಯುವಕ ಇರ್ಫಾನ್ ಅನ್ಸಾರಿ ಎಂಬಾತ ಆನ್‌ಲೈನ್ ಗೇಮ್‌ಗಳಿಂದ ತೀವ್ರ ಪ್ರಭಾವಿತನಾಗಿ ಈಗ ಹುಚ್ಚನ ಹಾಗೆ ವರ್ತಿಸುತ್ತಿದ್ದಾನೆ. ರಸ್ತೆಗಳಲ್ಲಿ ಸಂಚರಿಸುವಾಗಲೂ ಹ್ಯಾಕರ್, ಹ್ಯಾಕರ್.. ಪಾಸ್ ವರ್ಡ್ ಅಂತೆಲ್ಲಾ ಹೇಳುತ್ತಾ ಹುಚ್ಚುಚ್ಚಾಗಿ ಕೂಗಾಡುತ್ತಿದ್ದಾನೆ. ಅನ್ಸಾರಿ ಬಿಹಾರದ ಚಾಪ್ರಾ ಪ್ರದೇಶದಲ್ಲಿ ವಾಸವಾಗಿದ್ದು, ಕೆಲ ದಿನಗಳ ಹಿಂದೆ ರಾಜಸ್ಥಾನದ ಬನ್ಸೇನ್ ಗೆ ಆಗಮಿಸಿದ್ದ. ಇಲ್ಲಿ ಯಾವತ್ತೂ ಮೊಬೈಲ್ ಹಿಡಿದುಕೊಂಡೇ ಇರುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೀನುಗಾರರ ಸಹಕಾರ ಒಕ್ಕೂಟದ ಅಧ್ಯಕ್ಷನ ಹೆಸರು: 66 ಜನರ ಬಂಧನ!
ಆತ ಗಂಟೆಗಟ್ಟಲೇ ಮೊಬೈಲ್ ಹಿಡಿದುಕೊಂಡಿದ್ದು, ಫೈರಿಂಗ್ ಗೇಮ್‌ಗಳನ್ನು ಹೆಚ್ಚಾಗಿ ಆಡುತ್ತಿದ್ದನಂತೆ. ಕಳೆದ ಗುರುವಾರ ರಾತ್ರಿ ಗೇಮ್ಸ್ ಆಡುತ್ತಿದ್ದಾಗ ಫೋನ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿತ್ತು. ಆ ನಂತರ ವಿವೇಕ ಕಳೆದುಕೊಂಡವನಂತೆ ವರ್ತಿಸತೊಡಗಿದ್ದಾನೆ. ಶುಕ್ರವಾರ ಬೆಳಗ್ಗೆ ಉದಯಪುರ ರಸ್ತೆಗೆ ಆಗಮಿಸಿ ವಾಹನಗಳನ್ನು ನಿಲ್ಲಿಸಿ ಪಾಸ್ ವರ್ಡ್ ಬದಲಾಯಿಸುವಂತೆ ಕೂಗಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಹಿಡಿದು ಮಂಚಕ್ಕೆ ಕಟ್ಟಿ ನಂತರ ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ. ಈತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮನೋವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.