ETV Bharat / bharat

ಮೋಹನ್​ ಭಾಗವತ್​ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ ವಕೀಲ: ಫೆ.20ರಂದು ವಿಚಾರಣೆ - ಭಾಗವತ್​ ಹೇಳಿಕೆ ಬಗ್ಗೆ ಸಂಘ ಸ್ಪಷ್ಟನೆ

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

complaint-filed-against-rss-chief-mohan-bhagwat-in-cjm-court-in-bihar
ಮೋಹನ್​ ಭಾಗವತ್​ ವಿರುದ್ಧ ನ್ಯಾಯಾಲಯಕ್ಕೆ ವಕೀಲನ ದೂರು: ಫೆ.20ರಂದು ಪ್ರಕರಣದ ವಿಚಾರಣೆ
author img

By

Published : Feb 7, 2023, 8:09 PM IST

ಮುಜಾಫರ್‌ಪುರ (ಬಿಹಾರ) : ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್)ದ ಸರಸಂಚಾಲಕ ಮೋಹನ್​ ಭಾಗವತ್​ ವಿರುದ್ಧ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಈ ದೂರು ನೀಡಿದ್ದು, ಫೆಬ್ರವರಿ 20ರಂದು ವಿಚಾರಣೆ ನಡೆಯಲಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಇತ್ತೀಚೆಗೆ ಮೋಹನ್​ ಭಾಗವತ್,​ ಬ್ರಾಹ್ಮಣ ಪಂಡಿತರು, ತಮ್ಮ ಲಾಭಕ್ಕಾಗಿ ಸಮಾಜವನ್ನು ವಿಭಜನೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ದ್ವೇಷ ಹಾಗೂ ಒಡಕು ಮೂಡಿಸುವ ಭಾಗವತ್ ಅವರ ಹೇಳಿಕೆಯು ಇಡೀ ಸಮಾಜವನ್ನು ಒಡೆಯುವಂತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 'ಜನರಿಗೆ ಬಜೆಟ್‌ ಅಂಶಗಳನ್ನು ತಲುಪಿಸಿ': ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ

ಈ ಕುರಿತು ವಕೀಲ, ದೂರುದಾರ ಸುಧೀರ್ ಕುಮಾರ್ ಓಜಾ ಪ್ರತಿಕ್ರಿಯಿಸಿ, ಫೆಬ್ರವರಿ 5 ರಂದು ಮುಂಬೈನಲ್ಲಿ ರವಿದಾಸ್ ಜಯಂತಿ ಕಾರ್ಯಕ್ರದಮಲ್ಲಿ ಪಾಲ್ಗೊಂಡಿದ್ದ ಆರ್​ಎಸ್​​ಎಸ್​ ಮುಖ್ಯಸ್ಥರು, ಹಿಂದೂಗಳಲ್ಲಿ ಜಾತಿ ವಿಭಜನೆಯನ್ನು ಬ್ರಾಹ್ಮಣ ಪಂಡಿತರು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಉದ್ದೇಶಪೂರ್ವಕವಾಗಿ ಬ್ರಾಹ್ಮಣರ ಮಾನಹಾನಿ ಮತ್ತು ಅವಮಾನ ಮಾಡುವ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ, ಇಡೀ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹರಡುವ ಮತ್ತು ವಿಧ್ವಂಸಕತೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ರೀತಿಯ ಹೇಳಿಕೆಯನ್ನು ಭಾಗವತ್ ನೀಡಿದ್ದಾರೆ. ಹೀಗಾಗಿ ಇಂದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ನನ್ನ ದೂರನ್ನು ಪುರಸ್ಕರಿಸಿರುವ ನ್ಯಾಯಾಲಯವು ಫೆಬ್ರವರಿ 20ರಂದು ವಿಚಾರಣೆ ನಿಗದಿಪಡಿಸಿದೆ ಎಂದು ತಿಳಿಸಿದರು.

ಸಂಘದ ಸ್ಪಷ್ಟನೆ: ಮೋಹನ್​ ಭಾಗವಾತ್ ಅವರು ಜಾತಿ ಬಗ್ಗೆ ಉಲ್ಲೇಖಿಸುತ್ತ ಪಂಡಿತರ ವಿಚಾರವನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿದ್ದರು. ಜಾತಿಯನ್ನು ಹುಟ್ಟು ಹಾಕಿದ್ದು ದೇವರಲ್ಲ, ಪಂಡಿತರು ಜಾತಿಯನ್ನು ಹುಟ್ಟು ಹಾಕಿದ್ದಾರೆ. ದೇವರಿಗೆ ಎಲ್ಲರೂ ಒಂದೇ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯು ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಭಾಗವಾತ್ ಅವರ ಬಗ್ಗೆ ರಾಜಕೀಯ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಂಘವು ಭಾಗವತ್​ ಅವರು ಬುದ್ಧಿಜೀವಿಗಳ ಬಗ್ಗೆ ಹೇಳಿದ್ದಾರೆ, ಹೊರತು ಬ್ರಾಹ್ಮಣರ ಬಗ್ಗೆ ಅಲ್ಲ ಎಂದು ಸೋಮವಾರ ಸ್ಪಷ್ಟನೆ ನೀಡಿತ್ತು.

ಆರ್‌ಜೆಡಿ ದಾಳಿ: ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಮಾತನಾಡಿ, ಎಲ್ಲರೂ ಒಂದೇ ನೀತಿಯನ್ನು ಆರ್‌ಎಸ್‌ಎಸ್ ಮತ್ತು ಭಾರತೀಯ ಜನತಾ ಪಕ್ಷದಲ್ಲಿ ಮೊದಲು ಜಾರಿಗೆ ತರಬೇಕು. ಏಕೆಂದರೆ, ಇಡೀ ದೇಶದಲ್ಲಿ ಯಾರಾದರೂ ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದರೆ ಅದು ಸಂಘ ಪರಿವಾರ ಮಾತ್ರ. ಅದರಲ್ಲೂ, ಬಿಜೆಪಿಯು ಇಡೀ ದೇಶದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ತಮ್ಮ ಜಾತಿಯನ್ನು ಹೇಳುವ ಮೂಲಕ ಜನರ ಸಿಂಪತಿ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕೇಸರಿ ಧ್ವಜ ನಮ್ಮ ತತ್ವಗಳ ಸಂಕೇತ, ದೇಶ ಸೇವೆಗಾಗಿ ಸ್ವಯಂಸೇವಕರು ಶಾಖೆಗಳಿಗೆ ಬರ್ತಾರೆ: ಮೋಹನ್‌ ಭಾಗವತ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.