ETV Bharat / bharat

ರಾಕೇಶ್ ಟಿಕಾಯತ್​​ ವಿರುದ್ಧ ಪ್ರಕರಣ ದಾಖಲು: ಏ. 8 ರಂದು ನ್ಯಾಯಾಲಯದಲ್ಲಿ ವಿಚಾರಣೆ - ಏ. 8 ರಂದು ನ್ಯಾಯಾಲಯದಲ್ಲಿ ವಿಚಾರಣೆ

ರೈತ ಮುಖಂಡ ರಾಕೇಶ್ ಟಿಕಾಯತ್​​ ವಿರುದ್ಧ ವಕೀಲ ಸುಧೀರ್ ಓಜಾ ಅವರು ಮುಜಾಫರ್​​ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 8 ರಂದು ನಡೆಸಲಿದೆ.

Rakesh Tikait in Muzaffarpur court
ರೈತ ಮುಖಂಡ ರಾಕೇಶ್ ಟಿಕಾಯತ್​​
author img

By

Published : Apr 2, 2021, 8:27 AM IST

ಮುಜಾಫರ್​​ಪುರ್ (ಬಿಹಾರ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್​​ ವಿರುದ್ಧ ಮುಜಾಫರ್​​ಪುರ ನ್ಯಾಯಾಲಯದಲ್ಲಿ ಗುರುವಾರ ದೂರು ದಾಖಲಾಗಿದೆ.

ರಾಕೇಶ್ ಟಿಕಾಯತ್​​ ವಿರುದ್ಧ ಪ್ರಕರಣ ದಾಖಲು

ರಾಕೇಶ್ ಟಿಕಾಯತ್​​​ ವಿರುದ್ಧ ಐಪಿಸಿ ಸೆಕ್ಷನ್ 504, 506, 153 ಎ, 153 ಬಿ ಮತ್ತು 160 ರ ಅಡಿ ವಕೀಲ ಸುಧೀರ್ ಓಜಾ ಪ್ರಕರಣ ದಾಖಲಿಸಿದ್ದಾರೆ.

ರಾಜಸ್ಥಾನದಲ್ಲಿ ಮಹಾಪಂಚಾಯತ್ ನಡೆಯುವ ವೇಳೆ, ರೈತ ಮುಖಂಡ ರಾಕೇಶ್ ಟಿಕಾಯತ್​​ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಸರ್ಕಾರವು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. ಮುಂದೊಂದು ದಿನ ಈ ಸರ್ಕಾರ ರೈತರಿಗೆ ಕರೆಂಟ್​ ಕೂಡ ಕಟ್​ ಮಾಡುತ್ತದೆ. ಆಗ 16 ರಾಜ್ಯಗಳ ರೈತರಿಗೆ ವಿದ್ಯುತ್ ಅಭಾವ ಉಂಟಾಗುತ್ತದೆ" ಎಂದು ವಕೀಲ ಸುಧೀರ್ ಓಜಾ ಹೇಳಿದ್ದಾರೆ.

ಓದಿ:ಲವ್​ ಜಿಹಾದ್​ ಸಂಬಂಧಿತ ವಿಧೇಯಕ ಅಂಗೀಕರಿಸಿದ ವಿಧಾನಸಭೆ

ಟಿಕಾಯತ್​​ ಅವರ ಈ ಮಾತುಗಳು ನನ್ನನ್ನು ಚಿಂತೆಗೀಡು ಮಾಡಿತು. ಹಾಗಾಗಿ ನಾನು ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ ಎಂದಿದ್ದಾರೆ. ಪ್ರಕರಣದ ವಿಚಾರಣೆಗೆ ನ್ಯಾಯಾಲಯವು ಏಪ್ರಿಲ್ 8 ರಂದು ದಿನಾಂಕ ನಿಗದಿಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.