ETV Bharat / bharat

ಹಾಸ್ಯ ನಿರೂಪಕ ಕಪಿಲ್ ಶರ್ಮಾ ವಿರುದ್ಧ ಮಧ್ಯಪ್ರದೇಶದಲ್ಲಿ ದೂರು - ಕಪಿಲ್ ಶರ್ಮಾ ವಿರುದ್ಧ ದೂರು

'ದಿ ಕಪಿಲ್ ಶರ್ಮಾ ಶೋ'ದ ನಿರೂಪಕ ಕಪಿಲ್ ಶರ್ಮಾ ಅವರ ವಿರುದ್ಧ ಮಧ್ಯಪ್ರದೇಶದ ಶಿವಪುರಿಯ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

Complaint against Kapil Sharma in Madhya Pradesh's district
ಹಾಸ್ಯ ನಿರೂಪಕ ಕಪಿಲ್ ಶರ್ಮಾ ವಿರುದ್ಧ ಮಧ್ಯಪ್ರದೇಶದಲ್ಲಿ ದೂರು
author img

By

Published : Sep 25, 2021, 5:28 AM IST

ಶಿವಪುರಿ, ಮಧ್ಯಪ್ರದೇಶ: ಹಿಂದಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳಲ್ಲಿ ಒಂದಾದ 'ದಿ ಕಪಿಲ್ ಶರ್ಮಾ ಶೋ'ದ ನಿರೂಪಕ ಕಪಿಲ್ ಶರ್ಮಾ ಅವರ ವಿರುದ್ಧ ಮಧ್ಯಪ್ರದೇಶದ ಶಿವಪುರಿಯ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

'ದಿ ಕಪಿಲ್ ಶರ್ಮಾ ಶೋ' ಕಾರ್ಯಕ್ರಮದ ದೃಶ್ಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಕಪಿಲ್ ಶರ್ಮಾ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಅಕ್ಟೋಬರ್ 1ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

2020ನೇ ಜನವರಿ 19ರಂದು ಪ್ರಸಾರವಾದ ಎಪಿಸೋಡ್​​ 2021 ಏಪ್ರಿಲ್ 24ರಂದು ಮರುಪ್ರಸಾರವಾಗಿದ್ದು, ಈ ಎಪಿಸೋಡ್​ನಲ್ಲಿ ನ್ಯಾಯಾಲಯ ಮತ್ತು ಕಾನೂನುಗಳಿಗೆ ಅವಮಾನ ಮಾಡುವಂತೆ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂಬುದು ವಕೀಲರ ಆರೋಪವಾಗಿದೆ.

ಜೊತೆಗೆ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾದ ಟೀಕೆಗಳನ್ನು ಮಾಡಲಾಗುತ್ತದೆ ಎಂದೂ ವಕೀಲರು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಹಾಕುವ ಶಿಕ್ಷೆ ನೀಡಿದ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.