ETV Bharat / bharat

ಜಿ20 ಶೃಂಗಸಭೆಗೆ ಎಲ್ಲ ಹೆಲಿಕಾಪ್ಟರ್​ಗಳನ್ನು ಕಾಯ್ದಿರಿಸಿದ ಭಾರತ ಸರ್ಕಾರ : ಕೇದಾರನಾಥ್​ ಧಾಮ್​ ಹೆಲಿ ಸೇವೆ ಸ್ಥಗಿತ - ಕೇದಾರನಾಥ

G20 summit: ದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆ ಹಿನ್ನೆಲೆ 3 ದಿನಗಳ ಕಾಲ ಕೇದಾರನಾಥದಲ್ಲಿ ಹೆಲಿ ಸೇವೆ ಸ್ಥಗಿತಗೊಳ್ಳಲಿದೆ.

ಜಿ20 ಶೃಂಗಸಭೆ
ಜಿ20 ಶೃಂಗಸಭೆ
author img

By ETV Bharat Karnataka Team

Published : Sep 6, 2023, 7:36 PM IST

ಡೆಹ್ರಾಡೂನ್​​ (ಉತ್ತರಾಖಂಡ): ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಭಾರತ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. ಜಿ-20 ಸಮಾವೇಶದ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಕೂಡ ಏರ್ಪಡಿಸಲಾಗಿದೆ. ಇದಲ್ಲದೇ, ಜಿ 20 ಸಭೆಗೆ ಭಾರತಕ್ಕೆ ಆಗಮಿಸುವ ಅತಿಥಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಿ20 ಸಭೆ ಹಿನ್ನೆಲೆ ಸೆ.7 ರಿಂದ 11ರವರೆಗೆ ಕೇದಾರನಾಥ ಯಾತ್ರೆಯ ಹೆಲಿ ಸೇವೆಯನ್ನು ರದ್ದುಗೊಳಿಸಲಾಗಿದೆ. ಈ ಗಾಗಲೇ ಹೆಲಿ ಸೇವೆ ಒದಗಿಸುತ್ತಿರುವ ಎಲ್ಲಾ ಕಂಪನಿಗಳಿಗೆ ಸ್ಥಗಿತಗೊಳಿಸಲು ತಿಳಿಸಲಾಗಿದೆ. ಕಾರಣ ಜಿ 20 ಸಭೆಗೆ ಆಗಮಿಸಲಿರುವ ವಿವಿಧ ರಾಷ್ಟ್ರದ ನಾಯಕರಿಗೆ ಹೆಲಿಕಾಪ್ಟರ್​ ಮೂಲಕ ಕರೆತರುವ ಉದ್ದೇಶದಿಂದ ಈ ಹೆಲಿ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಇದಕ್ಕಾಗಿಯೆ ಭಾರತ ಸರ್ಕಾರ ಕೇದಾರನಾಥದಲ್ಲಿ ಹಾರಾಟ ನಡೆಸುತ್ತಿದ್ದ ಎಲ್ಲ ಹೆಲಿಕಾಪ್ಟರ್​ಗಳನ್ನು ಕಾಯ್ದಿರಿಸಿದೆ. ಪ್ರಸ್ತುತ, ಸುಮಾರು 8 ಹೆಲಿಕಾಪ್ಟರ್ ಕಂಪನಿಗಳು ಕೇದಾರನಾಥದಲ್ಲಿ ಸೇವೆಗಳನ್ನು ಒದಗಿಸುತ್ತಿವೆ. ಜಿ20ಗೆ ಆಗಮಿಸುವ ಅತಿಥಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಏತನ್ಮಧ್ಯೆ, ಈಗಾಗಲೇ ಕೇದಾರನಾಥ ಧಾಮಕ್ಕೆ ಹೋಗಲು ಹೆಲಿಕಾಪ್ಟರ್ ಟಿಕೆಟ್​ಗಳನ್ನು ಕಾಯ್ದಿರಿಸಿರುವ ಪ್ರಯಾಣಿಕರಿಗೆ ಕೇದಾರನಾಥ ಧಾಮಕ್ಕೆ ಪ್ರಯಾಣಿಸಲು ಬೆಳಗ್ಗೆ 11 ಗಂಟೆಯ ನಂತರ ಅವಕಾಶ ನೀಡಲಾಗುತ್ತದೆ. ಉಳಿದಂತೆ ಈ ನಾಲ್ಕು ದಿನಗಳ ಕಾಲ ಭಕ್ತರು ಡೋಲಿ ಅಥವಾ ಕಾಲ್ನಡಿಗೆ ಮೂಲಕ ಕೇದಾರನಾಥ ಧಾಮಕ್ಕೆ ತೆರಳಬಹುದಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಪೊಲೀಸ್​ ಅಧಿಕಾರಿ ಕರಣ್ ಸಿಂಗ್ ನಗ್ಯಾಲ್ ಎಂಬುವವರು ಮಾತನಾಡಿ, ಜಿ20ಗೆ ಹಲವಾರು ದೇಶದ ನಾಯಕರು ಆಗಮಿಸುತ್ತಿದ್ದಾರೆ. ಹಾಗಾಗಿ ಈ ಸೆ.7ರಿಂದ 11 ರವರೆಗೆ ಎಲ್ಲ ಹೆಲಿಕಾಪ್ಟರ್‌ಗಳು ದೆಹಲಿಯಲ್ಲಿಯೇ ಇರಲಿವೆ. ಮೂರು ದಿನಗಳ ಕಾಲ ಕೇದರನಾಥ ಧಾಮ್​ದಲ್ಲಿ ಹೆಲಿ ಸೇವೆ ಸ್ಥಗಿತ ಗೊಳಿಸಲಾಗಿದೆ. ಸಧ್ಯ ಕೇದಾರನಾಥ ಯಾತ್ರಗೆ ಹೆಲಿ ಸೇವೆ ಒದಗಿಸುತ್ತಿರುವ ಎಲ್ಲ ಕಂಪನಿಗಳಿಗೆ ಈ ಸಂದೇಶವನ್ನು ಬರುವಂತಹ ಭಕ್ತರಿಗೆ ರವಾನಿಸಲು ಈ ಹಿಂದೆಯೇ ಸೂಚಿಸಲಾಗಿದೆ. ಕೇದಾರನಾಥ ಯಾತ್ರೆಗೆ ಹೆಲಿ ಸೇವೆ ಸೆಪ್ಟೆಂಬರ್ 11 ರಿಂದ ಎಂದಿನಂತೆ ಪುನಃ ಪ್ರಾರಂಭವಾಗಲಿದೆ ಎಂದು ಕರಣ್ ಸಿಂಗ್ ನಗ್ಯಾಲ್ ತಿಳಿಸಿದ್ದಾರೆ. ಜಿ20 ಶೃಂಗ ಸಭೆಗಾಗಿ ವಿವಿಧ ದೇಶಗಳ ಸುಮಾರು 1,000 ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: G20 ಶೃಂಗಸಭೆ: ವಿದೇಶಿ ಪ್ರತಿನಿಧಿಗಳಿಗೆ ಯುಪಿಐ ವ್ಯವಸ್ಥೆ ಪರಿಚಯಿಸಲಿದೆ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.