ಶ್ರೀನಗರ: ಕಳೆದ ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶ್ರೀನಗರದಾದ್ಯಂತ ಭದ್ರತಾ ಪಡೆಗಳ ನಿಯೋಜನೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
ಮದುವೆ ಮಂಟಪ ಸೇರಿದಂತೆ ವಿವಿಧ ಸಮುದಾಯ ಕೇಂದ್ರಗಳಲ್ಲಿಯೂ ಸಿಆರ್ಪಿಎಫ್ ಪಡೆಗಳನ್ನು ಇರಿಸಲಾಗಿದೆ. ಇನ್ನು ಎಷ್ಟು ದಿನಗಳ ಕಾಲ ಅವರನ್ನು ಇಂಥಹ ಸಮುದಾಯ ಕೇಂದ್ರಗಳ ಇಡಲಾಗುತ್ತದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೆ ನಗರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಕೆಲವೇ ಕೆಲವು ಸಮುದಾಯ ಕೇಂದ್ರಗಳಲ್ಲಿ ಭದ್ರತಾ ಪಡೆಗಳನ್ನು ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳಿಗೆ ಭದ್ರತಾ ಪಡೆಗಳನ್ನು ಸ್ಥಳಾಂತರ ಮಾಡಲು ಮನವಿ ಮಾಡಲಾಗಿದೆ ಎಂದು ಅಧಿಕಾರಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಭದ್ರತಾ ಪಡೆಗಳಿರುವ ಸ್ಥಳಗಳಲ್ಲ ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದ್ದು, ಇಲಾಹಿ ಬಾಗ್ ಮತ್ತು ಶೂತ್ರಾಶಾಹಿ ಸಮುದಾಯ ಕೇಂದ್ರಗಳಲ್ಲಿ ಭದ್ರತಾ ಪಡೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಬಂಕರ್ಗಳನ್ನೂ ಕೂಡಾ ನಿರ್ಮಾಣ ಮಾಡಲಾಗುತ್ತಿದೆ.
ಭದ್ರತಾ ಪಡೆಗಳ ನಿಯೋಜನೆಯಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೇ ಮದುವೆಗಳು ಮತ್ತು ಮುಂತಾದ ಕಾರ್ಯಕ್ರಮಗಳು ಸಮುದಾಯ ಕೇಂದ್ರದಲ್ಲಿ ನಡೆಯುತ್ತಿದ್ದವು. ಆದರೆ ಈಗ ಅವೆಲ್ಲವೂ ರದ್ದಾಗಿವೆ. ಮನೆಗಳಲ್ಲಿ ಸಾಕಷ್ಟು ಸ್ಥಳವಿಲ್ಲ ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಯುಮಾರ್ಗ ಬಳಕೆಗೆ ಅವಕಾಶ ನೀಡುವಂತೆ ಪಾಕ್ಗೆ ಭಾರತ ಮನವಿ