ETV Bharat / bharat

ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡ ಭೂಪ! - ಅಜಮ್‌ಗಡ್​ ಕೊರೊನಾ ಲಸಿಕೆ

ಆರೋಗ್ಯ ಕಾರ್ಯಕರ್ತನೆಂದು ಸುಳ್ಳು ಹೇಳಿಕೊಂಡು ವ್ಯಕ್ತಿವೋರ್ವ ಕೋವಿಡ್​ ಲಸಿಕೆ ಹಾಕಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಜಮ್‌ಗಡ್​ನಲ್ಲಿ ನಡೆದಿದೆ.

azamgarh
ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡ ಭೂಪ
author img

By

Published : Jan 30, 2021, 7:01 AM IST

ಅಜಮ್‌ಗಡ್ (ಉತ್ತರ ಪ್ರದೇಶ)​: ಕೊರೊನಾ ವ್ಯಾಕ್ಸಿನೇಷನ್ ಮಾರ್ಗಸೂಚಿಗಳ ಪ್ರಕಾರ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ವೈರಸ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರಿಗೆ ಮಾತ್ರ ಲಸಿಕೆ ನೀಡಬೇಕಾಗಿದೆ. ಆದರೆ ಇಲ್ಲೋರ್ವ ಸಾಮಾನ್ಯ ವ್ಯಕ್ತಿಯು ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡಿದ್ದಾನೆ.

ಲಸಿಕೆ ಕೇಂದ್ರದ ವೈದ್ಯರ ಪ್ರತಿಕ್ರಿಯೆ

ಉತ್ತರ ಪ್ರದೇಶದ ಅಜಮ್‌ಗಡ್​ನಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಸೇರಿ ಅಜಮ್‌ಗಡ್ ಜಿಲ್ಲೆಯಲ್ಲಿ ಮೊದಲ ಹಂತಕ್ಕೆ ಒಟ್ಟು 16,089 ಆರೋಗ್ಯ ಕಾರ್ಯಕರ್ತರ ಹೆಸರು ನೋಂದಾಯಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ವ್ಯಕ್ತಿಯು ನಕಲಿ ದಾಖಲೆಗಳ ಮೂಲಕ ಆರೋಗ್ಯ ಕಾರ್ಯಕರ್ತನೆಂದು ಹೇಳಿಕೊಂಡು ಕೋವಿಡ್ ವ್ಯಾಕ್ಸಿನ್​ ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ.

ಇದನ್ನೂ ಓದಿ: ದೆಹಲಿ ಇಸ್ರೇಲ್ ರಾಯಭಾರ ಕಚೇರಿ ಎದುರು ಐಇಡಿ ಸ್ಫೋಟ: 2012ರಲ್ಲೂ ನಡೆದಿತ್ತು ಕೃತ್ಯ

ತನಗೆ ನೀಡಿದ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಬಂದು ರಮಾ ಆಸ್ಪತ್ರೆಯ ಸಿಬ್ಬಂದಿಯೆಂದು ಲಸಿಕೆ ಪಡೆದಿದ್ದಾನೆ. ಅಲ್ಲದೇ ಆರೋಗ್ಯ ಇಲಾಖೆಯಿಂದ ನೀಡಿದ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.