ETV Bharat / bharat

Google: ದೇಶದ ಸ್ಥಳೀಯ ಕಾನೂನುಗಳನ್ನು ಗೂಗಲ್ ಗೌರವಿಸುತ್ತದೆ- ಸುಂದರ್ ಪಿಚೈ

author img

By

Published : May 27, 2021, 2:29 PM IST

ನೂತನ ಐಟಿ ನಿಯಮಗಳ ಜಾರಿ ಕುರಿತಂತೆ ಸಾಮಾಜಿಕ ಮಾಧ್ಯಮಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಸಂಬಂಧ ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯಿಸಿದ್ದಾರೆ.

Sundar Pichai statement
ಸುಂದರ್ ಪಿಚೈ ಹೇಳಿಕೆ

ನವದೆಹಲಿ: ಗೂಗಲ್ ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಬದ್ದವಾಗಿದೆ ಮತ್ತು ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡು ವೇಗವಾಗಿ ಓಡುತ್ತಿರುವ ತಂತ್ರಜ್ಞಾನದೊಂದಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಸಂಸ್ಥೆಯ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಏಷ್ಯಾ ಫೆಸಿಫಿಕ್​ನ ಆಯ್ದ ವರದಿಗಾರರೊಂದಿಗಿನ ವರ್ಚುವಲ್ ಮೀಟ್​ನಲ್ಲಿ ಮಾತನಾಡಿದ ಅವರು, ನಾವು ಯಾವುದೇ ದೇಶದ ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತೇವೆ ಮತ್ತು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಮ್ಮ ಕೆಲಸದಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಇದೆ. ನಾವು ಸರ್ಕಾರದೊಂದಿಗೆ ವ್ಯವಹರಿಸುವಾಗ ಅದನ್ನು ಅನುಸರಿಸುತ್ತೇವೆ. ಉಚಿತ ಮತ್ತು ಮುಕ್ತ ಅಂತರ್ಜಾಲ ಅಡಿಪಾಯವಾಗಿದೆ. ಭಾರತ ಈ ವಿಷಯದಲ್ಲಿ ದೀರ್ಘ ಇತಿಹಾಸ ಹೊಂದಿದೆ ಎಂದು ತಿಳಿಸಿದ್ದಾರೆ.

ಒಂದು ಕಂಪನಿಯಾಗಿ ಉಚಿತ ಮತ್ತು ಮುಕ್ತ ಅಂತರ್ಜಾಲದ ಮಹತ್ವದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಇದನ್ನು ನಾವು ಸಮರ್ಥಿಸುತ್ತೇವೆ ಮತ್ತು ವಿಶ್ವದಾದ್ಯಂತ ಈ ವಿಷಯದಲ್ಲಿ ಸರ್ಕಾರಗಳೊಂದಿಗೆ ನಾವು ರಚನಾತ್ಮಕವಾಗಿ ವ್ಯವಹರಿಸುತ್ತೇವೆ. ಕಂಪನಿಯು ಶಾಸಕಾಂಗದ ನಿಯಮಗಳನ್ನು ಅನುಸರಿಸುತ್ತದೆ ಮತ್ತು ವಿರೋಧಿಸಬೇಕಾದಾಗ ವಿರೋಧಿಸುತ್ತದೆ. ನಾವು ವಿಶ್ವದಾದ್ಯಂತ ಜಗತ್ತಿನಾದ್ಯಂತ ಹಬ್ಬಿಕೊಂಡಿದ್ದೇವೆ ಎಂದು ಪಿಚೈ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Facebook: ತಪ್ಪು ಮಾಹಿತಿ ಹಂಚಿಕೊಳ್ಳದಿರಿ..ಕೇಂದ್ರದ ನಿಯಮ ಒಪ್ಪಿ ಕ್ರಮ ಕೈಗೊಂಡ ಫೇಸ್‌ಬುಕ್‌

ತಂತ್ರಜ್ಞಾನವು ಅಳವಾಗಿ ಮತ್ತು ವಿಶಾಲವಾಗಿ ಸಮಾಜವನ್ನು ಸ್ಪರ್ಶಿಸುತ್ತಿದೆ ಮತ್ತು ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ನಾವು ಯುರೋಪಿನ ಕಾಪಿ ರೈಟ್ ನಿರ್ದೇಶನಗಳಾಗಿರಲಿ ಅಥವಾ ಭಾರತದ ಐಟಿ ಕಾನೂನುಗಳಾಗಿರಲಿ ಎಲ್ಲವನ್ನೂ ಅನುಸರಿಸಲು ಬದ್ದರಾಗಿದ್ದೇವೆ. ಇವೆಲ್ಲವೂ ತಂತ್ರಜ್ಞಾನದೊಂದಿಗೆ ನಾವು ಹೇಗೆ ತೊಡಗಿಸಿಕೊಳ್ಳಬೇಕು ಮತ್ತು ಒಗ್ಗಿಕೊಳ್ಳಬೇಕು ಎಂಬುವುದನ್ನು ಕಂಡು ಹಿಡಿಯುವ ಸಾಮಾನ್ಯ ವ್ಯವಸ್ಥೆಯ ಭಾಗ ಎಂದು ತಿಳಿದುಕೊಳ್ಳುತ್ತೇವೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮ ಮೇ 26 ರಿಂದ ಜಾರಿಗೆ ಬಂದಿದೆ. ಇದರ ಪ್ರಕಾರ ಸಾಮಾಜಿಕ ಮಾಧ್ಯಮ ದೈತ್ಯಗಳಾದ ಫೇಸ್​ಬುಕ್​ ವಾಟ್ಸ್‌ಆ್ಯಪ್, ಇನ್ಸ್​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ಗಳು ಕೆಲವೊಂದು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಇದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿರುವ ವಾಟ್ಸ್​ ಆ್ಯಪ್​ ಕಾನೂನು ಸಮರಕ್ಕೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.