ETV Bharat / bharat

64 ರೈತರಿಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಮೂರೂವರೆ ಕೋಟಿ ವಂಚನೆ: ಓರ್ವನ ಸೆರೆ - 64 ರೈತರಿಗೆ ವಂಚನೆ ಆರೋಪ

ಉತ್ತರದೆಹಲಿಯ ನರೇಲಾದಲ್ಲಿ ಕೃಷಿ ಉತ್ಪನ್ನಗಳ ಮಂಡಿಯೊಂದನ್ನು ಇಟ್ಟುಕೊಂಡು, ರೈತರಿಗೆ ಮೂರೂವರೆ ಕೋಟಿ ರೂಪಾಯಿ ವಂಚಿಸಿದ್ದ ಆರೋಪದಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

Commission agent arrested for cheating farmers of 3 crores
64 ರೈತರಿಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಮೂರೂವರೆ ಕೋಟಿ ವಂಚನೆ: ಓರ್ವನ ಸೆರೆ
author img

By

Published : Aug 7, 2021, 1:32 PM IST

ನವದೆಹಲಿ: ರೈತರಿಗೆ ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಸುಮಾರು ಮೂರೂವರೆ ಕೋಟಿ ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿಯ ಆರ್ಥಿಕ ಅಪರಾಧ ಶಾಖೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಉತ್ತರ ದೆಹಲಿಯ ನರೇಲಾ ಮೂಲದವನಾದ ಪ್ರೇಮ್​ಚಂದ್ ಬಂಧಿತನಾಗಿದ್ದು, ನರೇಲಾದಲ್ಲಿ ಜಗಾರಾಮ್ ಅಂಡ್ ಸನ್ಸ್​ ಎಂಬ ಕೃಷಿ ಉತ್ಪನ್ನಗಳ ಮಂಡಿಯೊಂದರ ಮಾಲೀಕನಾಗಿದ್ದನು. ರೈತರು ತಮ್ಮ ಉತ್ಪನ್ನಗಳನ್ನು ಪ್ರೇಮ್​ಚಂದ್​ಗೆ ಮಾರಾಟ ಮಾಡಿದ್ದರು.

ತಾನು ಖರೀದಿಸಿದ ಕೃಷಿ ಉತ್ಪನ್ನಕ್ಕೆ ಹಣ ಕೊಡದ ಆತ ಹೆಚ್ಚಿನ ಬಡ್ಡಿ ಕೊಡುತ್ತೇನೆಂದು ರೈತರಿಗೆ ಪ್ರೇಮ್​ಚಂದ್ ಆಮಿಷ ಒಡ್ಡಿದ್ದನು. ರೈತರು ಪ್ರೇಮ್​ ಚಂದ್ ಅಂಗಡಿಗೆ ಧಾನ್ಯ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದರು.

ಕೆಲವು ದಿನಗಳ ನಂತರ ಹಣ ನೀಡದ ಪ್ರೇಮ್​ ಚಂದ್ ತನ್ನ ಕುಟುಂಬದೊಂದಿಗೆ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಸುಮಾರು ಒಂದೂವರೆ ಕೋಟಿ ರೂಪಾಯಿ ರೈತರಿಗೆ ಪ್ರೇಮ್​ ಚಂದ್ ನೀಡಬೇಕಿತ್ತು. ಈ ಕುರಿತು ರೈತರು ಪೊಲೀಸರಿಗೆ ದೂರು ನೀಡಿದ್ದರು.

ಸುಮಾರು 64 ರೈತರಿಗೆ ವಂಚನೆ ಮಾಡಲಾಗಿದ್ದು, 2017-18ರಿಂದಲೇ ರೈತರಿಗೆ ಈ ರೀತಿಯಾಗಿ ಆಮಿಷವೊಡ್ಡಲಾಗಿತ್ತು. ಆರ್ಥಿಕ ಅಪರಾಧ ಶಾಖೆಯ ಎಸ್‌ಐ ಶಿವದೇವ್ ಸಿಂಗ್ ಮತ್ತು ಎಚ್‌ಸಿ ಜೈ ಕನ್ವಾರ್ ಅವರ ತಂಡವು ಆಗಸ್ಟ್ 3 ರಂದು ಆರೋಪಿ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಸಾಲದ ಕಾರಣದಿಂದ ಪ್ರೇಮ್​ ಚಂದ್ ರೈತರಿಗೆ ವಂಚಿಸಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಚಿವರ ಸಭೆಗೆ ಆಗಮಿಸುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.