ನವದೆಹಲಿ: ದಿನೇ ದಿನೆ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಹೊಸ ತಿಂಗಳ ಮೊದಲ ದಿನವೇ ಜನರಿಗೆ ನೆಮ್ಮದಿ ಸಿಕ್ಕಿದೆ. ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿವೆ.
ಇಂದಿನಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆ 198 ರೂ.ವರೆಗೆ ಇಳಿಕೆಯಾಗಿದೆ. ಈ ನಿರ್ಧಾರದ ನಂತರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,021 ರೂ.ಗೆ ಮಾರಾಟವಾಗುತ್ತಿದೆ. ಇದಕ್ಕೂ ಮೊದಲು ಅವುಗಳ ಬೆಲೆ 2,219 ರೂ.ಗಳಾಗಿತ್ತು.
ಓದಿ: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ, ಗೃಹ ಬಳಕೆಯಲ್ಲಿ ನೋ ಚೇಂಜ್!
ಬೆಲೆ ಬದಲಾವಣೆಯ ನಂತರ ದೆಹಲಿಯಲ್ಲಿ ಇಂಡಿಯನ್ ವಾಣಿಜ್ಯ ಸಿಲಿಂಡರ್‌ಗಳು 198 ರೂ. ನಷ್ಟು ಅಗ್ಗವಾಗಿವೆ. ಇತರ ದೊಡ್ಡ ನಗರಗಳಲ್ಲಿನ ಜನರು ತುಲನಾತ್ಮಕವಾಗಿ ಇಳಿಕೆ ಕಂಡು ಬಂದಿದೆ. ಕೋಲ್ಕತ್ತಾದಲ್ಲಿ ಈ ಸಿಲಿಂಡರ್‌ಗಳ ಬೆಲೆ 182 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 190.50 ರೂಪಾಯಿ ಇಳಿಕೆಯಾಗಿದೆ.
ಚೆನ್ನೈನಲ್ಲಿ ಅವುಗಳ ಬೆಲೆಯಲ್ಲಿ 187 ರೂಪಾಯಿ ಇಳಿಕೆಯಾಗಿದೆ. ಆದರೆ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಮೇ 19 ರಂದು ಕೊನೆಯದಾಗಿ ಬದಲಾಯಿಸಲಾಗಿತ್ತು.